‘ಈಡಿ’ಯಿಂದ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ ಇವರನ್ನು ವಿಚಾರಣೆಗಾಗಿ ಉಪಸ್ಥಿತರಿರಲು ನೋಟಿಸ್ ಜಾರಿ

ಅಕ್ರಮ ಗಣಿಗಾರಿಕೆಯ ಪ್ರಕರಣ

ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ

ರಾಂಚಿ (ಜಾರ್ಖಂಡ್) – ‘ಈಡಿ’ಯಿಂದ ಸಾಹಿಬಗಂಜ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ವಿಚಾರಣೆಯಗಾಗಿ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ ಇವರಿಗೆ ಸಮನ್ಸ್ ನೀಡಲಾಗಿದೆ. ಸೋರೆನ ಇವರಿಗೆ ನವಂಬರ್ ೩ ರಂದು ವಿಚಾರಣೆಗಾಗಿ ಉಪಸ್ಥಿತರಾಗಿರಲು ಹೇಳಲಾಗಿದೆ. ‘ಮುಖ್ಯಮಂತ್ರಿ ಸೋರೆನ ಇವರ ಸಹಾಯಕ ಶಾಸಕ ಪಂಕಜ ಮಿಶ್ರ ಇವರ ಸಂದರ್ಭದಲ್ಲಿನ ತನಿಖೆಯಲ್ಲಿ ಕೆಲವು ಸತ್ಯಗಳು ಬೆಳಕಿಗೆ ಬಂದಿದ್ದು ಅದರ ಪರಿಶೀಲನೆ ನಡೆಸುವುದು ಅವಶ್ಯಕವಾಗಿದೆ’, ಎಂದು ‘ಈಡಿ’ಯ ಒಬ್ಬ ಅಧಿಕಾರಿ ಹೇಳಿದ್ದಾರೆ. ಪಂಕಜ ಮಿಶ್ರಾ ಅವರನ್ನು ‘ಈಡಿ’ಯಿಂದ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಮಿಶ್ರಾ ಅವರ ನಿಯಂತ್ರಣದಲ್ಲಿರುವ ಸಾಹೇಬಗಂಜ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನಿವ್ವಳ ೧ ಸಾವಿರ ಕೋಟಿ ರೂಪಾಯಿ ಅಕ್ರಮ ಗಣಿಗಾರಿಕೆ ನಡೆದಿರುವ ಮಾಹಿತಿ ‘ಈಡಿ’ಯಿಂದ ವಿಶೇಷ ನ್ಯಾಯಾಲಯಕ್ಕೆ ನೀಡಲಾಯಿತು.