ಭಾಜಪ ನಮ್ಮ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದೆ !

ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಆರೋಪ

ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ

ಭಾಗ್ಯನಗರ (ತೆಲಂಗಾಣ) – ಭಾರತ ರಾಷ್ಟ್ರ ಸಮಿತಿಯ ೨೦ ರಿಂದ ೩೦ ಶಾಸಕರ ಖರೀದಿಯ ಪ್ರಯತ್ನ ಭಾಜಪ ಮಾಡುತ್ತಿದೆ, ಎಂಬ ಆರೋಪ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರು ಒಂದು ಸಭೆಯಲ್ಲಿ ಹೇಳಿದರು. ಈ ಸಭೆಯಲ್ಲಿ ಭಾರತ ರಾಷ್ಟ್ರ ಸಮಿತಿಯ ಆ ೪ ಶಾಸಕರು ಕೂಡ ಉಪಸ್ಥಿತರಿದ್ದರು, ಅವರನ್ನು ಖರೀದಿಸಲು ೧೦೦ ಕೋಟಿ ರೂಪಾಯ ಆಮಿಷ ತೋರಿಸಲಾಗಿತ್ತು. ಇತ್ತಿಚೆಗೆ ಅವರಿಗೆ ೧೫ ಕೋಟಿ ರೂಪಾಯಿ ನೀಡುವ ಪ್ರಯತ್ನ ಮಾಡುತ್ತಿದ್ದ ೩ ಜನರನ್ನು ಬಂದಿಸಲಾಗಿತ್ತು.

ಚಂದ್ರಶಖರ ರಾವ ತಮ್ಮ ಮಾತನ್ನು ಮುಂದುವರೆಸುತ್ತಾ, ದೆಹಲಿಯ ದಲ್ಲಾಳಿಗಳು ಶಾಸಕರನ್ನು ಖರೀದಿಸಿ ಸರಕಾರ ಕೆಡವಲು ಪ್ರಯತ್ನಿಸಿದರು. ತೆಲಂಗಾಣದ ಒಂದು ಫಾರ್ಮ ಹೌಸಿನಲ್ಲಿ ನಮ್ಮ ೪ ಶಾಸಕರಿಗೆ ೧೦೦ ಕೋಟಿ ರೂಪಾಯಿ ಆಮಿಷ ತೋರಿಸಲಾಗಿತ್ತು; ಆದರೆ ನನ್ನ ಶಾಸಕರು ಮಾರಾಟ ಆಗಲಿಲ್ಲ. ಅವರು ಈ ಸಂಚಿನ ಬಗ್ಗೆ ಪೊಲೀಸರಿಗೆ ತಿಳಿಸಿದರು, ಎಂದು ಹೇಳಿದರು.