ಮೋರಬಿ (ಗುಜರಾತ) ಇಲ್ಲಿಯ ತೂಗು ಸೇತುವೆ ಕುಸಿತ ೧೩೪ ಸಾವು

ಮೋರಬಿ (ಗುಜರಾತ) – ಇಲ್ಲಿಯ ಮಚ್ಛು ನದಿಯ ಮೇಲೆ ಇರುವ ತೂಗು ಸೇತುವೆ ಕುಸಿದು ನಡೆದಿರುವ ಅಪಘಾತದಲ್ಲಿ ಇಲ್ಲಿಯವರೆಗೆ ೧೩೪ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ೪೫ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಈ ಅಪಘಾತದಲ್ಲಿ ರಾಜಕೋಟದ ಭಾಜಪದ ಶಾಸಕರ ಕುಟುಂಬದವರ ೧೨ ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ ೩೦ ರಂದು ಸಂಜೆ ೬.೩೨ ಗಂಟೆಗೆ ಈ ೭೬೫ ಅಡಿ ಉದ್ದ ಮತ್ತು ಕೇವಲ ನಾಲ್ಕುವರೆ ಅಡಿ ಅಗಲ ತೂಗು ಕೇಬಲ ಸೇತುವೆ ಕುಸಿದಿದೆ. ೧೮೮೭ ರಲ್ಲಿ ಅಂದರೆ ೧೪೩ ವರ್ಷಗಳ ಹಿಂದೆ ಇಲ್ಲಿಯ ಠಾಕೊರ ರಾಜನಿಂದ ಆಗಿನ ಸಮಯದ ಮುಂದುವರೆದ ಯುರೋಪಿಯ ತಂತ್ರಜ್ಞಾನದ ಮೂಲಕ ಕಟ್ಟಿಸಿಕೊಂಡಿದ್ದನು. ಕ್ಷಮತೆಯಗಿಂತಲೂ ಹೆಚ್ಚಿನ ಜನರು ಸೇತುವೆ ಮೇಲೆ ಒಟ್ಟಾಗಿ ಬಂದಿರುವುದರಿಂದ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯ ಕುರಿತು ವಿಶೇಷ ತನಿಖಾ ದಳದಿಂದ ತನಿಖೆ ನಡೆಸಲಾಗುವುದು.