ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರ ಬೇಡಿಕೆ
ನವ ದೆಹಲಿ – ದೀಪಾವಳಿ ಪೂಜೆ ಮಾಡುವಾಗ ನನ್ನ ಮನಸ್ಸಿನಲ್ಲಿ ಈ ವಿಚಾರ ಬಂದಿದೆ, ಅದನ್ನು ನಾನು ೧೩೦ ಕೋಟಿ ದೇಶವಾಸಿಗಳ ಪರವಾಗಿ ಸರಕಾರದ ಮುಂದೆ ಮಂಡಿಸುತ್ತಿದ್ದೇನೆ. ನೀವೆಲ್ಲರೂ ದೀಪಾವಳಿಯ ಪ್ರಾರ್ಥನೆ ಮಾಡಿದ್ದೀರಿ. ಪ್ರತಿಯೊಬ್ಬರೂ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಪೂಜೆ ಮಾಡಿರಬಹುದು. ವ್ಯಾಪಾರಿಗಳು ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಮೂರ್ತಿಗಳು ಅವರ ಕಾರ್ಯಾಲಯದಲ್ಲಿ ಹಾಗೂ ಅವರ ಕೋಣೆಗಳಲ್ಲಿ ಇಡುತ್ತಾರೆ. ಆದ್ದರಿಂದ ಕೇಂದ್ರ ಸರಕಾರವು ಭಾರತೀಯ ನೋಟುಗಳ ಮೇಲೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರ ಮುದ್ರಿಸಬೇಕೆಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಪತ್ರಕರ್ತರ ಪರಿಷತ್ತಿನಲ್ಲಿ ಕರೆ ನೀಡಿದರು. ಇದರ ಬಗ್ಗೆ ಭಾಜಪದಿಂದ ಕೇಜರಿವಾಲ್ ಇವರ ಮೇಲೆ ಟೀಕೆ ಮಾಡಲಾಗಿದೆ. ‘ಹಿಂದುತ್ವಕ್ಕೆ ವಿರೋಧಿಸುವ ಕೇಜರಿವಾಲ ಮತಕ್ಕಾಗಿ ಈ ರೀತಿ ಒತ್ತಾಯಿಸುತ್ತಿದ್ದಾರೆ’, ಎಂದು ಟೀಕಿಸಲಾಗುತ್ತಿದೆ.
Addressing an important Press Conference | LIVE https://t.co/w5wiYs2seT
— Arvind Kejriwal (@ArvindKejriwal) October 26, 2022
ದೇವತೆಗಳ ಆಶೀರ್ವಾದದಿಂದ ಅರ್ಥ ವ್ಯವಸ್ಥೆ ಸುಧಾರಿಸುವುದು !
ಮುಖ್ಯಮಂತ್ರಿ ಕೇಜರಿವಾಲ ತಮ್ಮ ಮಾತನ್ನು ಮುಂದುವರೆಸುತ್ತಾ, ನೋಟುಗಳ ಮೇಲೆ ಗಾಂಧೀಜಿ ಅವರ ಛಾಯಾಚಿತ್ರ ಇದೆ ಹಾಗೆ ಇರಲಿ; ಆದರೆ ಇನ್ನೊಂದು ಬದಿಗೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರ ಇರಲಿ. ಅದರಿಂದ ಅರ್ಥ ವ್ಯವಸ್ಥೆಗೆ ಅವರ ಆಶೀರ್ವಾದ ದೊರೆಯುವುದು. ಶ್ರೀ ಗಣೇಶನು ವಿಘ್ನಗಳನ್ನು ನಾಶಗೊಳಿಸುತ್ತಾನೆ ಎಂದು ನಂಬಲಾಗುತ್ತದೆ. ಅವನ ಆಶೀರ್ವಾದದಿಂದ ಅರ್ಥ ವ್ಯವಸ್ಥೆ ಸುಧಾರಿಸುವುದು. ಎಲ್ಲಾ ಭಾರತೀಯರು ಶ್ರೀಮಂತರಾಗಬೇಕೆಂದು ನಮ್ಮೆಲ್ಲರ ಆಸೆ ಇದೆ. ನಾವು ಪ್ರಯತ್ನ ಮಾಡುತ್ತೇವೆ; ಆದರೆ ಪರಿಣಾಮ ಕಾಣುವುದಿಲ್ಲ. ದೇವರ ಆಶೀರ್ವಾದವಿದ್ದರೆ ಆಗ ಅದರ ಫಲ ದೊರೆಯುವುದು ಎಂದು ಹೇಳಿದರು.
ಸಂಪಾದಕೀಯ ನಿಲುವು
|