|
ವಡೋದರಾ (ಗುಜರಾತ) – ಇಲ್ಲಿ ಅಕ್ಟೋಬರ ೨೪ ರ ರಾತ್ರಿ ಪಟಾಕಿಗಳನ್ನು ಸಿಡಿಸಲು ಮತಾಂಧ ಮುಸಲ್ಮಾನರು ವಿರೋಧ ವ್ಯಕ್ತಪಡಿಸಿ ಹಿಂಸಾಚಾರ ನಡೆಸಿದರು. ಈ ಸಂದರ್ಭದಲ್ಲಿ ಪೆಟ್ರೋಲ ಬಾಂಬ ಎಸೆಯಲಾಯಿತು. ಈ ಘಟನೆಯು ಇಲ್ಲಿಯ ಪಾನಿಘಾಟಾ ಪರಿಸರದ ಮುಸ್ಲಿಂ ಮೆಡಿಕಲ ಸೆಂಟರ ಹತ್ತಿರ ನಡೆಯಿತು.
Gujarat: Communal clashes broke out in Vadodara over cracker burning #vadodaraclash #communalclashinvadodara pic.twitter.com/0hdv0ESXob
— Oneindia News (@Oneindia) October 25, 2022
ಇಲ್ಲಿ ದೀಪಾವಳಿಯ ನಿಮಿತ್ತ ಪಟಾಕಿ ಸಿಡಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮತಾಂಧ ಮುಸಲ್ಮಾನರು ಪಟಾಕಿಗಳನ್ನು ಸಿಡಿಸುವವರಿಗೆ ಅಲ್ಲಿ ಪಟಾಕಿಗಳನ್ನು ಸಿಡಿಸಬಾರದೆಂದು ಹೇಳಿದರು. ಆಗ ಅವರಲ್ಲಿ ವಿವಾದಗಳಾದವು. ಎರಡೂ ಬದಿಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದರು. ತದನಂತರ ಅವರಲ್ಲಿ ಮಾರಾಮಾರಿ ಪ್ರಾರಂಭವಾಗಿ, ಮುಂದೆ ಅಲ್ಲಿಯ ಅಂಗಡಿಗಳಿಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲೆಸೆತ ಮತ್ತು ಪೆಟ್ರೋಲ ಬಾಂಬ ಎಸೆಯಲಾಯಿತು. ಪೊಲೀಸರ ಮೇಲೆಯೂ ಪೆಟ್ರೋಲ ಬಾಂಬ ಎಸೆದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ ನಡೆಸಿದರು. ಈ ಹಿಂಸಾಚಾರದಲ್ಲಿ ಜೀವಹಾನಿಯಾಗಿರುವ ಮಾಹಿತಿ ಇದುವರೆಗೂ ಉಪಲಬ್ಧವಾಗಿಲ್ಲ. ಸಧ್ಯಕ್ಕೆ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದೂ, ಆರೋಪಿಗಳನ್ನು ಹುಡುಕಲು ಸಿಸಿಟಿವಿಯ ಚಿತ್ರೀಕರಣವನ್ನು ತಪಾಸಣೆ ನಡೆಸುತ್ತಿದ್ದಾರೆ. ಸಧ್ಯಕ್ಕೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವು
|