ಮ್ಯಾನಮಾರದಲ್ಲಿ ಸೈನ್ಯದಿಂದ ಕಚಿನ್ ಸಮುದಾಯದ ಮೇಲೆ ನಡೆಸಲಾದ ವಾಯು ದಾಳಿಯಲ್ಲಿ ೬೦ ಕ್ಕಿಂತ ಹೆಚ್ಚಿನ ಜನರು ಹತ

ಯಾಂಗುನ (ಮ್ಯಾನಮಾರ ) – ಮ್ಯಾನಮಾರದಲ್ಲಿ ಸೈನ್ಯವು ನಡೆಸಿದ ವಾಯುದಾಳಿಯಲ್ಲಿ ೬೦ ಕ್ಕೂ ಹೆಚ್ಚಿನ ಜನರು ಹತರಾಗಿದ್ದಾರೆ. ಕಚಿನ ಈ ಮೂಲ ನಿವಾಸಿಗಳು ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ರಾಜಕೀಯ ಸಂಘಟನೆಯ ವಾರ್ಷಿಕೋತ್ಸವಕ್ಕಾಗಿ ಸೇರಿರುವ ಜನರ ಮೇಲೆ ಈ ದಾಳಿ ಮಾಡಲಾಗಿದೆ. ಇದರಲ್ಲಿ ಹತರಾಗಿರುವವರಲ್ಲಿ ಕಾರ್ಯಕ್ರಮಕ್ಕಾಗಿ ಬಂದಿರುವ ಗಾಯಕರು, ವಾದಕರ ಸಮಾವೇಶವಿದೆ. ಮ್ಯಾನಮಾರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಆಗ್ನೇಯ ಏಷ್ಯಾ ದೇಶದ ವಿದೇಶಾಂಗ ಸಚಿವರ ಸಭೆ ೩ ದಿನದ ನಂತರ ಇಂಡೋನೇಷ್ಯಾದಲ್ಲಿ ನಡೆಯಲಿದೆ. ಅದರ ಮೊದಲು ಈ ದಾಳಿ ಮಾಡಲಾಗಿದೆ. ಮ್ಯಾನಮಾರದ ಸೈನ್ಯ ಹಾಗೂ ಸರಕಾರಿ ವಾರ್ತಾ ಇಲಾಖೆಯಿಂದ ಈ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

೧. ಮ್ಯಾನಮಾರದಲ್ಲಿನ ಮೂಲ ನಿವಾಸಿ ಅಲ್ಪಸಂಖ್ಯಾತ ಸಮುದಾಯದಿಂದ ಕಳೆದ ಅನೇಕ ದಶಕಗಳಿಂದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಲಾಗುತ್ತದೆ. ಈ ಪ್ರಶ್ನೆ ಹಳೆಯದಾಗಿದೆ; ಆದರೆ ಸೈನ್ಯವು ಅಧಿಕಾರ ವಶಪಡಿಸಿಕೊಂಡ ನಂತರ ಅದರ ವಿರೋಧದಲ್ಲಿ ಶಸ್ತ್ರಾಸ್ತ್ರ ಸಹಿತ ಚಳವಳಿ ಆರಂಭವಾದ ನಂತರ ಸರಕಾರಕ್ಕೆ ಆಗುವ ವಿರೋಧಕ್ಕೆ ಇನ್ನೂ ಹೆಚ್ಚಿನ ವೇಗ ಬಂದಿದೆ. ಬಂಡಾಯದವರಲ್ಲಿ ಕಚಿನ ಇದು ಪ್ರಬಲ ತಿಳಿಯಲಾಗಿದೆ. ಅವರ ಹತ್ತಿರ ಶಸ್ತ್ರ ನಿರ್ಮಾಣದ ಕ್ಷಮತೆ ಇದೆ.

೨. ವಿಶ್ವಸಂಸ್ಥೆ ಮ್ಯಾನಮಾರದಲ್ಲಿನ ಕಾರ್ಯಾಲಯದಲ್ಲಿ ಜಾರಿ ಮಾಡಲಾದ ಮನವಿಯಲ್ಲಿ, ದಾಳಿಯ ವಾರ್ತೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ, ಶಸ್ತ್ರಾಸ್ತ್ರ ಇಲ್ಲದ ನಾಗರೀಕರ ಮೇಲೆ ಸೈನ್ಯ ಸುರಕ್ಷಾ ದಳದಿಂದ ಬಲವಂತದ ಕಾರ್ಯಾಚರಣೆ ಮಾಡಿರುವುದು ಅತ್ಯಂತ ಅಯೋಗ್ಯವಾಗಿದ್ದು ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.