ಆದಿಪುರುಷ’ ಈ ರಾಮಾಯಣದ ಮೇಲಾಧರಿಸಿದ ಚಲನಚಿತ್ರದ ೧ ನಿಮಿಷ ೪೬ ಸೆಕೆಂಡ್‌ಗಳ `ಟಿಸರ್’ (ಚಲನಚಿತ್ರದ ಸಂಕ್ಷಿಪ್ತ ಭಾಗ) ಅನ್ನು ಚಲನಚಿತ್ರ ನಿರ್ಮಾಪಕರು ಪ್ರಸಾರ ಮಾಡಿದ ನಂತರ ಇಡೀ ದೇಶದಲ್ಲಿ ಕೋಲಾಹಲ ನಿರ್ಮಾಣವಾಗಿದೆ. ಇದರಿಂದ ರಾಮಾಯಣ ಮತ್ತು ಅದರಲ್ಲಿನ ಚರಿತ್ರೆಗಳ ಬಗ್ಗೆ ಭಾರತೀಯರ ಭಾವನೆಯು ಎಷ್ಟು ಜಾಗೃತವಿದೆ ಎಂದು ಗಮನಕ್ಕೆ ಬರುತ್ತದೆ. ರಾಮಾಯಣ ಮತ್ತು ಮಹಾಭಾರತವು ಭಾರತೀಯ ಸಂಸ್ಕೃತಿಯ ದರ್ಶಕವಾಗಿವೆ. ಇವುಗಳ ಆಧಾರ ದಿಂದಲೇ ಭಾರತೀಯರು ಅಂದರೆ ಹಿಂದೂಗಳು `ತಮ್ಮ ಜೀವನವು ಹೇಗೆ ಆದರ್ಶವಿರಬೇಕು’, ಎಂಬ ವಿಚಾರ ಮಾಡಿ ಜೀವನವನ್ನು ನಡೆಸುತ್ತಿರುತ್ತಾರೆ. ೧೯೮೬ ರಲ್ಲಿ ರಾಮಾನಂದ ಸಾಗರ ಇವರು ದೂರದರ್ಶನದಲ್ಲಿ `ರಾಮಾಯಣ’ ಧಾರಾವಾಹಿಯನ್ನು ಆರಂಭಿಸಿದರು ಮತ್ತು ಅದು ಜಗತ್ತಿನಾದ್ಯಂತ ಪ್ರಸಾರವಾಯಿತು. ಈ ಧಾರಾವಾಹಿಯು ರವಿವಾರದಂದು ಬೆಳಗ್ಗೆ ಪ್ರಸಾರವಾಗುತ್ತಿತ್ತು. ಆಗ ಇಡೀ ದೇಶವೇ ದೂರದರ್ಶನದೆದುರು ಕುಳಿತು ವೀಕ್ಷಿಸಿತು. ಅದರಲ್ಲಿ ಹಿಂದೂಗಳೊಂದಿಗೆ ಮುಸಲ್ಮಾನರು ಮತ್ತು ಇತರ ಧರ್ಮದವರ ಸಮಾವೇಶವಿತ್ತೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ದೇಶದ ಎಲ್ಲ ರಸ್ತೆಗಳು ಮತ್ತು ಜನನಿಬಿಡ ಸ್ಥಳಗಳು ನಿರ್ಜನವಾಗುತ್ತಿದ್ದವು. ಈ ಧಾರಾವಾಹಿ ಇಷ್ಟು ಜನಪ್ರಿಯವಾಗಿತ್ತು. ರಾಮಾಯಣ ಮತ್ತು ಮಹಾಭಾರತದಲ್ಲಿನ ಪ್ರಸಂಗಗಳೊಂದಿಗೆ ಸಂಬಂಧಿಸಿದ ಅನೇಕ ಚಲನಚಿತ್ರಗಳು ಇದಕ್ಕೂ ಮೊದಲು ದೇಶದಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದ್ದವು. ಅದರಲ್ಲಿ ಮತ್ತು ಈ ಧಾರಾವಾಹಿಯಲ್ಲಿ ತೋರಿಸಲಾದ ಪಾತ್ರಗಳ ವೇಷಭೂಷಣ, ವರ್ತನೆ, ಮಾತನಾಡುವುದು ಇವೆಲ್ಲವೂ ಬಹುತೇಕ ಒಂದೇ ರೀತಿ ಇದ್ದವು, ಅಂದರೆ ಭಾರತೀಯರ ಮೇಲೆ ಇದೇ ಸಂಸ್ಕಾರವಾಗಿತ್ತು ಮತ್ತು ಅದು ಅಷ್ಟೇ ಸತ್ಯವಾಗಿದೆ; ಏಕೆಂದರೆ ರಾಮಾಯಣದಲ್ಲಿಯೇ ಅದರಲ್ಲಿನ ಚರಿತ್ರೆಗಳ ವರ್ಣನೆಯನ್ನು ಮಾಡಲಾಗಿದೆ ಮತ್ತು ಅದಕ್ಕನುಸಾರವೇ ಈ ಚಲನಚಿತ್ರಗಳಲ್ಲಿ ತೋರಿಸಲಾಗಿದೆ. ಹಾಗೆಯೇ ಇಲ್ಲಿಯವರೆಗೆ ನಾವು ನೋಡಿದ ಈ ಜೀವನಚರಿತ್ರೆಗಳ ಚಿತ್ರಗಳನ್ನು ಸಹ ಅದಕ್ಕೆ ತಕ್ಕಂತೆ ಚಿತ್ರಿಸಲಾಗಿದೆ. ಹಾಗಾದರೆ ಅದನ್ನು ಯಾರಾದರೂ ಬದಲಾಯಿಸಿದರೆ, ಅದನ್ನು ಹೇಗೆ ಸ್ವೀಕರಿಸುವುದು ? ಎಂಬುದು ಮೂಲ ಪ್ರಶ್ನೆಯಾಗಿದೆ; ಏಕೆಂದರೆ `ಆದಿಪುರುಷ’ ಚಲನಚಿತ್ರದ `ಟೀಸರ್’ನಲ್ಲಿ ಶ್ರೀ ಹನುಮಾನ ಮತ್ತು ರಾವಣನನ್ನು ಮಿಸೆ ಇರದ, ಮತ್ತು ಪ್ರಭು ಶ್ರೀರಾಮನನ್ನು ಮಿಸೆ ಇರುವಂತೆ ತೋರಿಸಲಾಗಿದೆ’, ಎಂಬುದನ್ನು ಜನರು ನೋಡಿದರು. ಇದರಿಂದಾಗಿ ಆದಿಪುರುಷ ಚಲನಚಿತ್ರವು ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ ಮತ್ತು `ಅದು ತಪ್ಪಾಗಿದೆ’, ಎಂದು ಹೇಳದೇ ಇರಲು ಸಾಧ್ಯವೇ ಇಲ್ಲ; ಏಕೆಂದರೆ ಆ ಚಲನಚಿತ್ರದ ನಿರ್ದೇಶಕರಾದ ಓಂ ರಾವುತ್ ಇವರು ಸಹ ಗಮನಿಸಿದ್ದರು ಎಂದು `ಆಜ ತಕ್’ ವಾರ್ತಾವಾಹಿನಿಯಲ್ಲಿ ಪ್ರಸಾರಗೊಂಡ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ರಾವಣನ `ಇಸ್ಲಾಮೀಕರಣ’ !
`ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ನಾವು ಗಮನಿಸುತ್ತಿದ್ದೇವೆ. ಸದ್ಯ ಚಲನಚಿತ್ರವು ಬಿಡುಗಡೆಯಾಗಲು ತಡವಿದೆ. ಚಲನಚಿತ್ರವು ಬಿಡುಗಡೆಯಾದಾಗ ನಿಮಗೆ ಯೋಗ್ಯ ಯಾವುದು ಎಂದು ಗಮನಕ್ಕೆ ಬರುವುದು ಎಂದು ಅವರು ಈ ಸಮಯದಲ್ಲಿ ಹೇಳಿದ್ದಾರೆ; ಆದರೆ ಈಗ ಹೇಳಲಾದ ಕೆಲವೊಂದು ಬದಲಾವಣೆಗಳನ್ನು, ನೀವು ಸುಧಾರಿಸಬಹುದೇ ? ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದರು. ಇದರಿಂದ ಓಂ ರಾವುತ್ ಇವರಿಗೆ, ಭಾರತೀಯ ಸಾರ್ವಜನಿಕರ ಭಾವನೆಗಳು ಎಷ್ಟು ಪ್ರಬಲವಾಗಿವೆ ಮತ್ತು ನಾವು ಯಾವ ತಪ್ಪುಗಳನ್ನು ಮಾಡುತ್ತಿದ್ದೇವೆ ಮತ್ತು ಈಗ ಚಲನಚಿತ್ರದಲ್ಲಿ ಬದಲಾವಣೆ ತರಬೇಕಾಗಿದೆ’ ಎಂದು ಅರ್ಥವಾಗಿದೆ. ಸದ್ಯ ಈ ಚಲನಚಿತ್ರಕ್ಕೆ ವಿರೋಧ ಮುಂದುವರಿ ಯುವುದು ಇದು ಸ್ಪಷ್ಟವಿದೆ. ಒಂದು ವೇಳೆ ಓಂ ರಾವುತ್ ಇವರು ಈ ಬಗ್ಗೆ ಸ್ಪಷ್ಟ ನಿಲುವನ್ನು ಮಂಡಿಸದಿದ್ದರೆ ಅವರ ಚಲನಚಿತ್ರವು ಬಿಡುಗಡೆಯಾಗುವುದೋ ಇಲ್ಲವೋ ? ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಭಾಜಪದ ಸಂಸದ ರಾಮ ಕದಮ್ ಇವರು `ಮಹಾರಾಷ್ಟ್ರದಲ್ಲಿ ಈ ಚಲನಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂಬ ಘೋಷಣೆಯನ್ನು ನೀಡಿದ್ದಾರೆ, ಹಾಗೆಯೇ ವಿಶ್ವ ಹಿಂದೂ ಪರಿಷದ್ ಮತ್ತು ಹಿಂದೂ ಮಹಾಸಭೆಯು ಸಹ ಇದನ್ನು ವಿರೋಧಿಸಿವೆ. ಶ್ರೀರಾಮ ಮಂದಿರದ ಮುಖ್ಯ ಅರ್ಚಕರಾದ ಸತ್ಯೇಂದ್ರದಾಸ ಇವರೂ ಸಹ ಇದನ್ನು ವಿರೋಧಿಸಿದ್ದಾರೆ. ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರಾ ಇವರೂ ಚಲನಚಿತ್ರದಲ್ಲಿ ಬದಲಾವಣೆ ಮಾಡದಿದ್ದರೆ ಕಾರ್ಯಾಚರಣೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭಾವದ ಅಭಾವ !
`ಆದಿಪುರುಷ’ ಚಲನಚಿತ್ರವನ್ನು ೫೦೦ ಕೋಟಿ ರೂಪಾಯಿ ವೆಚ್ಚ ಮಾಡಿ ತಯಾರಿಸಲಾಗುತ್ತಿದೆ. ಈ ೫೦೦ ಕೋಟಿಗಳಲ್ಲಿನ ಅರ್ಧದಷ್ಟು ಮೊತ್ತವನ್ನು ಕೇವಲ `ಸ್ಪೆಶಲ್ ಎಫೆಕ್ಟ್’ಗಳಿಗಾಗಿ ಮಾತ್ರ ಖರ್ಚು ಮಾಡಲಾಗುತ್ತದೆ. ಸದ್ಯ ಹಾಲಿವುಡ್‌ನಲ್ಲಿ ಯಾವ ರೀತಿಯಲ್ಲಿ ಚಲನಚಿತ್ರವನ್ನು ತಯಾರಿಸಲಾಗುತ್ತದೆ ಅದೇ ಮಾದರಿಯಲ್ಲಿ ರಾಮಾಯಣವನ್ನು ಆಧರಿಸಿದ ಈ ಚಲನಚಿತ್ರವನ್ನು ತಯಾರಿಸಲಾಗುತ್ತಿದೆ. ಟೀಸರ್‌ಅನ್ನು ನೋಡಿದವರಿಗೆ ಹಿಂದಿನ ಅಂದರೆ ರಾಮಾನಂದ ಸಾಗರರ ರಾಮಾಯಣ ಮತ್ತು ಈ ಚಲನಚಿತ್ರದಲ್ಲಿ ಆಕಾಶ ಮತ್ತು ಪಾತಾಳದಷ್ಟು ವ್ಯತ್ಯಾಸವು ಗಮನಕ್ಕೆ ಬಂದಿರಬಹುದು. ಹಿಂದಿನ ಧಾರಾವಾಹಿಗಳು ಭಾವನಾತ್ಮಕ ಮತ್ತು ಸಾತ್ತ್ವಿಕ ರೀತಿಯಲ್ಲಿ ಚಿತ್ರಿಕರಿಸಲ್ಪಟ್ಟಿರುವುದರಿಂದ ಪ್ರೇಕ್ಷಕರ ಮೇಲೆ ಅದರ ಪ್ರಭಾವ ಇಂದಿಗೂ ಇದೆ, ಕೇವಲ ೧ ನಿಮಿಷ ೪೬ ಸೆಕೆಂಡುಗಳ ಟೀಸರ್‌ಅನ್ನು ನೋಡಿ ಈ ಚಲನಚಿತ್ರವು ತಮೋಗುಣಿ ಮತ್ತು ಭಾರತೀಯ ಸಂಸ್ಕೃತಿಯ ಅತ್ಯಂತ ವಿರುದ್ಧ ತಯಾರಿಸುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದರಲ್ಲಿ ಮಾನವಿ ಭಾವ-ಭಾವನೆಗಳಿರದೇ ಕೇವಲ ತಂತ್ರಜ್ಞಾನದ ಯಥೇಚ್ಛ ಬಳಕೆ ಮಾಡಿರುವುದು ಕಾಣಿಸುತ್ತದೆ. ರಾವಣನು ಬಾವಲಿಯ ಮೇಲೆ ಕುಳಿತು ಬರುವುದನ್ನು ತೋರಿಸಲಾಗಿದೆ. ಪ್ರತ್ಯಕ್ಷದಲ್ಲಿ ಇಲ್ಲಿಯವರೆಗೆ ಈ ರೀತಿ ಹಿಂದೂಗಳು ಎಲ್ಲಿಯೂ ಕೇಳಿಲ್ಲ ಅಥವಾ ನೋಡಿಯೂ ಇಲ್ಲ. ರಾವಣನ ಬಳಿ ಪುಷ್ಪಕ ವಿಮಾನವಿತ್ತು ಮತ್ತು ಅವನು ಅದರ ಬಳಕೆ ಮಾಡುತ್ತಿದ್ದನು. ರಾವಣನು ರಾಕ್ಷಸನಾಗಿದ್ದನು, ಎಂಬುದು ಎಷ್ಟು ಸತ್ಯವಿದೆಯೋ, ಅಷ್ಟೇ ಅವನು ಬ್ರಾಹ್ಮಣ ಮತ್ತು ವೇದಗಳ ಜ್ಞಾನವುಳ್ಳವನಾಗಿದ್ದನು. ಪ್ರಭು ಶ್ರೀರಾಮರು ಅವನನ್ನು ವಧಿಸಿದ ನಂತರವೂ ಅವನಿಗೆ ಯಥಾಯೋಗ್ಯ ಗೌರವವನ್ನು ನೀಡಿದರು. ರಾವಣನ ಮೃತ್ಯುವಿನ ಕ್ಷಣ ಶ್ರೀರಾಮರು ಲಕ್ಷ್ಮಣನಿಗೆ ರಾವಣನಿಂದ ಮಾರ್ಗದರ್ಶನ ಪಡೆಯಲು ಕಳುಹಿಸಿದ್ದರು, ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೊಸ ಪೀಳಿಗೆಯ, ಹೊಸ ಕಾಲದ ರಾಮಾಯಣವನ್ನು ನಿರ್ಮಿಸುವ ವಿಚಾರದಿಂದ ಯಾರೋ ತಮಗೆ ಬೇಕಿದ್ದ ರೀತಿಯಲ್ಲಿ ಬದಲಾವಣೆ ಮಾಡುತ್ತಿದ್ದರೆ, ಅದನ್ನು ಧರ್ಮಾಭಿಮಾನಿ ಹಿಂದೂಗಳು ಹೇಗೆ ಸ್ವೀಕರಿಸುವರು ? ಕೊರೊನಾದ ಕಾಲದಲ್ಲಿ ದೂರದರ್ಶನದಲ್ಲಿ ಮತ್ತೊಮ್ಮೆ ರಾಮಾನಂದ ಸಾಗರ ಇವರ `ರಾಮಾಯಣ’ ಧಾರಾವಾಹಿ, ಹಾಗೆಯೇ ಬಿ.ಆರ್ ಚೋಪ್ರಾ ಇವರ `ಮಹಾಭಾರತ’ ಧಾರಾವಾಹಿಗಳು ಆರಂಭವಾದಾಗ ಮುಂಚೆ ಸಿಕ್ಕಿದ್ದಷ್ಟೇ ಪ್ರತಿಕ್ರಿಯೆ ಇಂದಿನ ಪೀಳಿಗೆಯೂ ನೀಡಿತು ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ `ಇಂದಿನ ಪೀಳಿಗೆಯ ಅಭಿರುಚಿ ಬೇರೆಯಾಗಿದೆ’ ಎಂದು ಗೃಹಿಸಿ ಅವರೆದುರು ಬೇರೆ ರೀತಿಯಲ್ಲಿ ರಾಮಾಯಣವನ್ನು ಮಂಡಿಸಲು ಪ್ರಯತ್ನಿಸಿದರೆ, ಅವರು ಅಜ್ಞಾನಿಗಳೇ ಆಗಿದ್ದಾರೆ ಎಂದು ಹೇಳಬೇಕಾಗುವುದು. ಇಂತಹ ಅಜ್ಞಾನಿಗಳಿಗೆ ಯೋಗ್ಯ ಜ್ಞಾನದ ಅರಿವು ಮಾಡಿಕೊಡಲು ಧರ್ಮಾಭಿಮಾನಿ ಹಿಂದೂಗಳು ತೆಗೆದುಕೊಂಡ ನೇತೃತ್ವ ಯೋಗ್ಯವೆನ್ನಬಹುದು !