|
ನವದೆಹಲಿ – ಕೇಂದ್ರ ಸರಕಾರವು ಗಾಂಧಿ ಪರಿವಾರಕ್ಕೆ ಸಂಬಂಧಪಟ್ಟ ಸ್ವಯಂಸೇವಾ ಸಂಸ್ಥೆ ರಾಜೀವ್ ಗಾಂಧಿ ಫೌಂಡೇಶನ್ ಗೆ ದೊರೆಯುವ ವಿದೇಶಿ ನಿಧಿಯ ಪರವಾನಗಿಯನ್ನು ರದ್ದುಪಡಿಸಿದೆ. ಈ ಸಂಸ್ಥೆಯಿಂದ ಆರ್ಥಿಕ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದ ನಂತರ ೨೦೨೦ ರಲ್ಲಿ ಗೃಹ ಸಚಿವಾಲಯ ಸಿದ್ಧಪಡಿಸಿರುವ ಅಂರ್ತಸಚಿವಾಲಯದ ಸಮಿತಿಯಿಂದ ಅನ್ವೇಷಣೆ ನಡೆಸಲಾಗಿತ್ತು. ಈ ಸಂಸ್ಥೆಗೆ ಚೀನಾದಿಂದ ದೊರೆಯುವ ಆರ್ಥಿಕ ಸಹಾಯದ ಸಂಬಂಧಿಸಿದಂತೆ ಅನ್ವೇಷಣೆಯನ್ನು ಮಾಡಲಾಗಿದೆ. ಅದರಲ್ಲಿ ಸತ್ಯ ಕಂಡು ಬಂದಿರುವುದರಿಂದ ಈ ಕಾರ್ಯಾಚರಣೆ ಮಾಡಲಾಗಿದೆ.
೧. ಸೋನಿಯಾ ಗಾಂಧಿ ಇವರು ರಾಜೀವ ಗಾಂಧಿ ಫೌಂಡೇಶನ್ ಅಧ್ಯಕ್ಷರಾಗಿದ್ದಾರೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಹ, ಮಾಜಿ ಅರ್ಥ ಸಚಿವ ಪಿ. ಚಿದಂಬರಂ, ಕಾಂಗ್ರೆಸ್ಸಿನ ಸಂಸದ ರಾಹುಲ್ ಗಾಂಧಿ ಮತ್ತು ಮಹಾ ಸಚಿವೆ ಪ್ರಿಯಾಂಕ ಗಾಂಧಿ ಒಡೆರ ಇವರು ಈ ಸಂಸ್ಥೆಯ ವಿಶ್ವಸ್ಥ ಪದವಿಯಲ್ಲಿದ್ದಾರೆ.
೨. ರಾಜೀವ ಗಾಂಧಿ ಇವರ ಮೃತ್ಯುವಿನ ನಂತರ ಜುಲೈ ೧೯೯೧ ರಲ್ಲಿ ಸೋನಿಯಾ ಗಾಂಧಿಯ ನೇತೃತ್ವದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ೧೯೯೧ ರಿಂದ ೨೦೦೯ ಈ ಕಾಲಾವಧಿಯಲ್ಲಿ ಸ್ವಾಸ್ಥ, ವಿಜ್ಞಾನ ಮತ್ತು ತಂತ್ರಜ್ಞಾನ , ಮಹಿಳಾ ಬಾಲ ವಿಕಾಸ, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರ ಬಗ್ಗೆ ಈ ಸಂಸ್ಥೆಯಿಂದ ದಾವೆ ಮಾಡಲಾಗುತ್ತಿತ್ತು.
೩. ಅನ್ವೇಷಣಾ ಸಮಿತಿಯಲ್ಲಿ ಕೇಂದ್ರೀಯ ಗೃಹ ಸಚಿವಾಲಯ, ವಿತ್ತ ಸಚಿವಾಲಯ ಹಾಗೂ ಕೇಂದ್ರೀಯ ಅನ್ವೇಷಣ ದಳದ ಅಧಿಕಾರಿಗಳ ಸಮಾವೇಶವಿದೆ. ಈ ಅನ್ವೇಷಣೆಯಿಂದ ಸಂಸ್ಥೆಯು ಆದಾಯ ತೆರಿಗೆ ಸಲ್ಲಿಸಿರುವ ಯಾವುದೇ ಕಾಗದ ಪತ್ರಗಳಲ್ಲಿ ತಿದ್ದುಪಡಿ ಮಾಡಲಾಗಿದೆಯಾ, ಅಥವಾ ವಿದೇಶದಿಂದ ದೊರೆತಿರುವ ಹಣವನ್ನು ದುರುಪಯೋಗಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಇದರಲ್ಲಿ ತಪ್ಪಿತಸ್ಥರು ಕಂಡು ಬಂದಿರುವುದರಿಂದ ಈ ಸಂಘಟನೆಗೆ ವಿದೇಶಿ ಯೋಗದಾನ ನಿಯಮನ ಕಾನೂನಿನಂತರ್ಗತ ವಿದೇಶಿ ಅನುದಾನ ಪಡೆಯುವ ಪರವಾನಗಿಯನ್ನು ರದ್ದು ಪಡಿಸಲಾಗಿದೆ.
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ರಾಜಕೀಯ ಪರವಾನಗಿ ಕೂಡ ರದ್ದುಪಡಿಸಲು ಈಗ ಜನರು ಧ್ವನಿಯೆತ್ತಬೇಕು ! |