ಕಾನಪುರದ ಗ್ರಾಮವೊಂದರಲ್ಲಿ ಅಕ್ರಮ ಮನೆ ಕೆಡವಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ

ಇಬ್ಬರು ಯುವಕರ ಬಂಧನ

ಕಾನಪುರ (ಉತ್ತರ ಪ್ರದೇಶ) – ಕಾನಪುರ ಜಿಲ್ಲೆಯಲ್ಲಿನ ಪುಖರಾಯಾ ಗ್ರಾಮದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಅಕ್ರಮ ಮನೆಯನ್ನು ಕೆಡವಲು ಹೋದ ಪೊಲೀಸರ ಮೇಲೆ ಕೆಲ ಯುವಕರು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ. ಯುವಕರ ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸರು ಹಾಗೂ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದರು.

ಸಂಪಾದಕೀಯ ನಿಲುವು

ಪೋಲೀಸರ ಮೇಲೆ ಕಲ್ಲು ತೂರಲು ಧೈರ್ಯವಾಗುತ್ತದೆ ಎಂದರೆ ‘ಪೊಲೀಸರ ಭಯ ಉಳಿದಿಲ್ಲ’ ಎಂದೇ ಹೇಳಬೇಕಾಗುವುದು !