ಛತ್ತೀಸ್‌ಗಢದ ರಾಯಗಡ ಮುನ್ಸಿಪಲ್ ಕಾರ್ಪೊರೇಷನ್ ನಿಂದ ನೀರು ಶುಲ್ಕ ತುಂಬಿಸಲು ನೇರ ಶ್ರೀ ಹನುಮಂತನಿಗೆ ನೋಟಿಸ್ !

ರಾಯಗಡ (ಛತ್ತೀಸ್‌ಗಢ) – ನೀರಿನ ಶುಲ್ಕ ಪಾವತಿಸದ ಕಾರಣಕ್ಕಾಗಿ ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಶ್ರೀ ಹನುಮಾನ್ ಅವರಿಗೆ ನೋಟಿಸ್ ಕಳುಹಿಸಿದೆ. ’15 ದಿನದೊಳಗೆ ಹಣ ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಈ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ನೋಟಿಸನ್ನು ಇಲ್ಲಿಯ ಬಜರಂಗಬಲಿ ದೇವಸ್ಥಾನಕ್ಕೆ ನೀಡಲಾಗಿದೆ; ಆದರೆ ನೋಟಿಸ್ ಸ್ವೀಕರಿಸುವವರ ಹೆಸರಿನ ಜಾಗದಲ್ಲಿ ‘ಹನುಮಾನಜೀ’ ಎಂದು ಉಲ್ಲೇಖಿಸಲಾಗಿದೆ. ವಿಶೇಷವೆಂದರೆ ಈ ದೇವಸ್ಥಾನದಲ್ಲಿ ನೀರಿನ ಒಂದು ನಲ್ಲಿಯೂ ಇಲ್ಲ. ದೇವಸ್ಥಾನದ ಪರಿಸರದಲ್ಲಿ ಯಾವ ನಲ್ಲಿಯೂ ಇಲ್ಲ. ಹೀಗಿರುವಗಲೂ ಈ ನೋಟಿಸನ್ನು ಜಾರಿ ಮಾಡಲಾಗಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಅದರಂತೆ ‘ಅಮೃತ ಮಿಷನ’ ನಲ್ಲಿ ಜೋಡಣೆ ಯೋಜನೆಯ ಕಾಮಗಾರಿಯನ್ನು ಕಾರ್ಮಿಕರು ಮಾಡಿದ್ದರು. ಅದು ಕಂಪ್ಯೂಟರ್‌ನಲ್ಲಿ ದಾಖಲಾಗಿತ್ತು. ಹೀಗಾಗಿ ಈ ನೋಟಿಸನ್ನು ಜಾರಿ ಮಾಡಲಾಗಿದೆ. (ಕಂಪ್ಯೂಟರನಲ್ಲಿ ದಾಖಲೆಗಳನ್ನು ಸಹ ಹೇಗೆ ತಯಾರಿಸಲಾಗುತ್ತದೆ ಎಂಬುದಕ್ಕೆ ಇದು ಮಾದರಿಯಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಆಡಳಿತವು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದೇ ಇದರಿಂದ ತಿಳಿಯುತ್ತದೆ!