ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಗೋಮಾಂಸದ ವಿಷಯದಲ್ಲಿ ಪ್ರಶ್ನೆಯನ್ನು ಕೇಳಿದ್ದಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ

ವಾರಾಣಸಿ (ಉತ್ತರಪ್ರದೇಶ)-ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಬ್ಯಾಚ್‌ಲರ್ ಆಫ್ ವೊಕೇಶನಲ್ ಕೋರ್ಸ್’ನ ಪರೀಕ್ಷೆಯಲ್ಲಿ ಗೋಮಾಂಸದ ವಿಷಯದಲ್ಲಿ ಪ್ರಶ್ನೆಯನ್ನು ಕೇಳಿದ್ದರಿಂದ ವಿದ್ಯಾರ್ಥಿಗಳು ಸಂತಪ್ತರಾಗಿದ್ದಾರೆ. ‘ಗೋಮಾಂಸವೆಂದರೇನು ? ಅದನ್ನು ಹೇಗೆ ವರ್ಗೀಕರಿಸಲಾಗುತ್ತದೆ ? ಹಾಗೂ ಅದರ ಪ್ರಕ್ರಿಯೆ ಹೇಗಿರುತ್ತದೆ ?’, ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. (ಗೋಮಾತೆಯು ಹಿಂದೂಗಳಿಗೆ ಪೂಜನೀಯವಾಗಿದೆ, ಎಂಬುದರ ಪೂರ್ಣ ಕಲ್ಪನೆ ಇದ್ದರೂ ಗೋಮಾಂಸದ ವಿಷಯದಲ್ಲಿ ಪ್ರಶ್ನೆ ಕೇಳುವುದೆಂದರೆ, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಉದ್ದೇಶಪೂರ್ವಕ ಮಾಡಿದ ಅವಮಾನವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠೋರ ಕ್ರಮತೆಗೆದುಕೊಳ್ಳಬೇಕು, ಎಂದು ಧರ್ಮಪ್ರೇಮಿ ಹಾಗೂ ರಾಷ್ಟ್ರಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು) ಅನಂತರ ಸಂತಪ್ತರಾದ ವಿದ್ಯಾರ್ಥಿಗಳು ಕುಲಗುರು ಹಾಗೂ ಕುಲಸಚಿವರಿಗೆ ಪತ್ರ ಬರೆದು ಇದಕ್ಕೆ ಹೊಣೆಯಾಗಿರುವ ಶಿಕ್ಷಕರು ಮತ್ತು ಪಠ್ಯಕ್ರಮ ಸಮನ್ವಯಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ವಿನಂತಿಸಿದ್ದಾರೆ. ‘ಇಂತಹ ಪ್ರಶ್ನೆಗಳನ್ನು ಕೇಳುವುದೆಂದರೆ ಇದು ವಿದ್ಯಾಪೀಠದ ಸಂಸ್ಥಾಪಕರಾದ ಪಂಡಿತ ಮದನಮೋಹನ ಮಾಳವೀಯ ಇವರ ಇಚ್ಚೆಗೆ ವಿರುದ್ಧವಾಗಿದೆ. ಪಂಡಿತ ಮದನಮೋಹನ ಮಾಳವೀಯ ಇವರು ನಿರಂತರ ಗೋವಂಶದ ರಕ್ಷಣೆಗಾಗಿ ಪ್ರಯತ್ನಿಸಿದರು.

ಇಂತಹ ಸ್ಥಿತಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗೋಮಾಂಸದ ಬಗ್ಗೆ ಪ್ರಶ್ನೆ ಕೇಳುವುದು ಅಯೋಗ್ಯವಾಗಿದೆ’, ಎಂದು ಆಂದೋಲನ ಮಾಡುವ ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ತಕ್ಷಣ ಕ್ರಮತೆಗೆದುಕೊಳ್ಳದಿದ್ದರೆ ತೀವ್ರ ಆಂದೋಲನವನ್ನು ಕೈಗೊಳ್ಳುವುದಾಗಿ ಸಂತಪ್ತರಾದ ವಿದ್ಯಾರ್ಥಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಆರಂಭಿಸಿದ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿಯೇ ಇಂತಹ ಪ್ರಶ್ನೆ ಕೇಳಲ್ಪಡುವುದು, ಸಂತಾಪಜನಕವಾಗಿದೆ !