ಐ. ಎಸ್. ಐ .ಗೆ ಗೌಪ್ಯ ಮಾಹಿತಿ ಪೂರೈಸುತ್ತಿರುವ ಸೈನಿಕನ ವಿರುದ್ಧ ದೂರು ದಾಖಲು

ಅಮೃತಸರ (ಪಂಜಾಬ) – ಅಮೃತಸರ ಗ್ರಾಮೀಣ ಪೊಲೀಸರು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ .ಎಸ್ .ಐ .ಗೆ ಮಾಹಿತಿ ನೀಡಿರುವ ಪ್ರಕರಣದಲ್ಲಿ ಭಾರತೀಯ ಸೈನ್ಯದ ಒಬ್ಬ ಸೈನಿಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಕೇಂದ್ರೀಯ ಸುರಕ್ಷಾ ಇಲಾಖೆಯು ಉತ್ತರಪ್ರದೇಶದಲ್ಲಿನ ಉಸರಾಹ ರಸುಲಪೂರ ಗ್ರಾಮದ ನಿವಾಸಿ ಸೈನಿಕ ಮನೋಜ  ಚೌದರಿ ಇವನ ಬಗ್ಗೆ ಮಾಹಿತಿ ನೀಡಿತ್ತು ಎಂದು ಪೊಲೀಸು ಅಧಿಕಾರಿ ಪರವೇಶ ಚೋಪ್ರಾ ಇವರು ಹೇಳಿದ್ದಾರೆ. ಅವರ ಮಾಹಿತಿಯ ಪ್ರಕಾರ ಮನೋಜನು ಅಮೃತಸರದಲ್ಲಿ ನೇಮಕಗೊಂಡಿದ್ದು , ಅವನು ಪಾಕಿಸ್ತಾನದ ಗೂಢಚರ ಸಂಸ್ಥೆಯ ಪರ ಕೆಲಸ ಮಾಡುತ್ತಿದ್ದನು. ಅವನು ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದ ಕಳ್ಳ ಸಾಗಾಣಿಕೆದಾರರ ಜೊತೆ ಮತ್ತು ಗೂಢಚರ ಸಂಸ್ಥೆಯ ಜೊತೆ ಸಂಬಂಧ ಹೊಂದಿದ್ದನು. ಮನೋಜ ಭಾರತೀಯ ಸೈನ್ಯದ ಮಾಹಿತಿ ಮತ್ತು ಸಂವೇದನಾಶೀಲ ಸ್ಥಳಗಳ ಛಾಯಾಚಿತ್ರಗಳನ್ನು, ನಕ್ಷೆಗಳನ್ನು ಪಾಕಿಸ್ತಾನದ ಸಂಸ್ಥೆಗೆ ಪೂರೈಸುತ್ತಿದ್ದನು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆಯನ್ನು ನೀಡುವ ಅವಶ್ಯಕತೆ ಇದೆ!