ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ಸಿನ ಹೊಸ ರಾಷ್ಟ್ರೀಯ ಅಧ್ಯಕ್ಷರು !

ಮಲ್ಲಿಕಾರ್ಜುನ ಖರ್ಗೆ

ನವದೆಹಲಿ – ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಇವರು ಜಯಗಳಿಸಿದ್ದಾರೆ. ಅವರಿಗೆ ೭ ಸಾವಿರದ ೮೯೭, ಹಾಗೂ ಅವರ ಪ್ರತಿಸ್ಪರ್ಧಿ ಶಶಿ ಥರೂರ ಇವರಿಗೆ ಕೇವಲ ೧ ಸಾವಿರ ೭೨ ಮತಗಳು ದೊರೆತಿವೆ. ಈ ಚುನಾವಣೆಯಲ್ಲಿ ೪೦೦ ಕ್ಕೂ ಹೆಚ್ಚಿನ ಮತಗಳು ವ್ಯರ್ಥವಾಗಿರುವುದು ತಿಳಿದು ಬಂದಿದೆ. ತೀರ್ಪು ಘೋಷಿಸಿದ ನಂತರ ಶಶಿ ಥರೂರ ಇವರು ಟ್ವೆಟ್ ಮೂಲಕ ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ೨೪ ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿ ಅಧ್ಯಕ್ಷ ಎಂದು ಲಭಿಸಿದ್ದಾರೆ.
ಈ ಹಿಂದೆ ಸೀತಾರಾಮ ಕೇಸರಿ ಇವರು ೧೯೯೬ ರಿಂದ ೧೯೯೮ ವರೆಗೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅದರ ನಂತರ ಸೋನಿಯಾ ಗಾಂಧಿ ಇವರು ಜವಾಬ್ದಾರಿ ವಹಿಸಿಕೊಂಡಿದ್ದರು.

ನನ್ನ ಪಾತ್ರದ ಬಗ್ಗೆ ಖರ್ಗೆ ನಿರ್ಣಯ ತೆಗೆದುಕೊಳ್ಳುವರು ! ರಾಹುಲ ಗಾಂಧಿ

ಎಡಬದಿಗೆ ರಾಹುಲ್ ಗಾಂಧೀ

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ಸಿನ ಅಧ್ಯಕ್ಷ ಆದ ನಂತರ, ‘ಪಕ್ಷದಲ್ಲಿ ನಿಮ್ಮ ಪಾತ್ರದ ಬಗ್ಗೆ ನಿಮಗೆ ಏನು ಅನಿಸುತ್ತದೆ ? ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ಇವರಿಗೆ ಕೇಳಿದಾಗ ಅವರು ‘ಕಾಂಗ್ರೆಸ್ಸಿನ ಅಧ್ಯಕ್ಷರು ಯಾವ ನಿರ್ಣಯ ತೆಗೆದುಕೊಳ್ಳಬೇಕು, ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ, ನನ್ನ ಪಾತ್ರ ಏನು ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ತೀರ್ಮಾನಿಸುವರು ಎಂದುತ್ತರಿಸಿದರು.