ರಾಷ್ಟ್ರೀಯ ತನಿಖಾ ದಳದಿಂದ ೫ ರಾಜ್ಯಗಳ ೪೦ ಸ್ಥಳಗಳಲ್ಲಿ ದಾಳಿ

ಭಯೋತ್ಪಾದಕರು, ಕಳ್ಳಸಾಗಾಣಿಕೆದಾರರು ಮತ್ತು ಗೂಂಡಾಗಳ ಶೋಧನೆ !

ನವ ದೆಹಲಿ – ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ಪಂಜಾಬ, ಹರಿಯಾಣ, ದೆಹಲಿ, ಬಿಹಾರ ಮತ್ತು ರಾಜಸ್ಥಾನ ಈ ರಾಜ್ಯದ ೪೦ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಈ ದಾಳಿ ಭಯೋತ್ಪಾದನೆ, ಗೂಂಡಾ, ಮಾದಕ ವಸ್ತುಗಳ ಕಳ್ಳ ಸಾಗಣೆ ಅದೇ ರೀತಿ ಭಾರತ ಮತ್ತು ವಿದೇಶಗಳಲ್ಲಿನ ಅಪರಾಧಗಳ ಬಲೆಯನ್ನು ನಾಶ ಮಾಡಲು ನಡೆಸಲಾಯಿತು.

ಎನ್.ಐ.ಎ. ಪ್ರಕಾರ, ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ; ಆದರೆ ೬ ಪಿಸ್ತೂಲು, ೧ ರಿವ್ಹಾಲ್ವರ, ೧ ಶಾಟಗನ್ ಮತ್ತು ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಮಾದಕ ಪದಾರ್ಥ, ನಗದು ಹಣ, ಅಪರಾಧಗಳ ಕಾಗದ ಪತ್ರಗಳು, ಇಲೆಕ್ಟ್ರಾನಿಕ ಉಪಕರಣಗಳು, ಅನಾಮಧೇಯ ಸಂಪತ್ತುಗಳ ಕಾಗದ ಪತ್ರಗಳು, ಬೆದರಿಕೆಯ ಪತ್ರಗಳನ್ನು ಜಪ್ತಿಗೊಳಿಸಲಾಗಿದೆ. ಜಮ್ಮೂ-ಕಾಶ್ಮೀರದಲ್ಲಿ ಭಯೋತ್ಪಾದಕತೆಯನ್ನು ಹರಡಲು ಹೊರದೇಶದಿಂದ ಹಣವನ್ನು ತರಲಾಗುತ್ತಿದ್ದು, ಅದರ ಶೋಧನೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.