ಆಶ್ವಯುಜ ಕೃಷ್ಣ ತ್ರಯೋದಶಿ ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ಕೋಶಾಗಾರ) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ. ವಾಸ್ತವದಲ್ಲಿ ಲಕ್ಷ್ಮಿ ಪೂಜೆಯ ವೇಳೆ ಇಡೀ ವರ್ಷದ ಜಮಾಖರ್ಚನ್ನು ಕೊಡುವುದಿರುತ್ತದೆ. ಜಮೆ-ಖರ್ಚಿನ ಬಗ್ಗೆ ವರದಿಯನ್ನಿಟ್ಟು ಲಕ್ಷ್ಮಿಯ ಪೂಜೆ ಮಾಡುತ್ತಾರೆ.
ಭಾವಾರ್ಥ : ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ ಈ ಧನವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ವೆಂದರೆ ಶುದ್ಧ ಲಕ್ಷ್ಮಿ. ಶ್ರೀಸೂಕ್ತದಲ್ಲಿ ವಸು, ಜಲ, ವಾಯು, ಅಗ್ನಿ ಮತ್ತು ಸೂರ್ಯ ಇವೆಲ್ಲವನ್ನು ಧನವೆಂದೇ ಪರಿಗಣಿಸಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷ್ಮಿ ! ಧನತ್ರಯೋದಶಿಯವರೆಗೆ ಬಾಕಿ ಉಳಿದ ಸಂಪತ್ತನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಬೇಕು, ಸತ್‌ಕಾರ್ಯಕ್ಕೆ ಖರ್ಚು ಮಾಡಿದರೆ ಧನಲಕ್ಷ್ಮಿಯು ಶಾಶ್ವತವಾಗಿ ಲಕ್ಷ್ಮಿರೂಪದಲ್ಲಿ ಮನೆಯಲ್ಲಿರುತ್ತಾಳೆ. ಹಬ್ಬ