ಪರೀಕ್ಷೆಯ ಸಮಯದಲ್ಲಿ ಪರಿಶಿಲನೆಗೆಂದು ಹಿಜಾಬ್ ತೆಗೆಯಲು ಹೇಳಿದಾಗ ವಿದ್ಯಾರ್ಥಿನಿಯರಿಂದ ಕೂಗಾಟ !

  • ಮುಝಪ್ಫರಪುರದಲ್ಲಿ (ಬಿಹಾರ) ಘಟನೆ

  • ‘ಶಿಕ್ಷಕರು ನಮ್ಮನ್ನು ದೇಶದ್ರೋಹಿಗಳೆಂದು ಹೇಳಿ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದರು !’ (ಅಂತೆ)

  • ಎಲ್ಲ ಆರೋಪಗಳನ್ನೂ ನಿರಾಕರಿಸಿದ ಪ್ರಾಂಶುಪಾಲರು ಮತ್ತು ಶಿಕ್ಷಕರು !

ಮುಝಪ್ಫರಪುರ (ಬಿಹಾರ) – ಇಸ್ಲಾಮಿಕ್ ರಾಷ್ಟ್ರವಾದ ಇರಾನದಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸುವ ವಸ್ತ್ರ) ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಜಾತ್ಯತೀತ ಭಾರತದಲ್ಲಿ ಹಿಜಾಬ್ ಅನ್ನು ಬೆಂಬಲಿಸಲಾಗುತ್ತಿದೆ. ಇಲ್ಲಿನ ಮಹಂತ ದರ್ಶನ ದಾಸ ಮಹಿಳಾ ಕಾಲೇಜಿನಲ್ಲಿ ೧೧ ನೇ ತರಗತಿಯ ಪರೀಕ್ಷೆ ವೇಳೆ ಹಿಜಾಬ್ ಧರಿಸಿದ್ದ ಕೆಲ ವಿದ್ಯಾರ್ಥಿನಿಯರು ಕಿವಿಗೆ ‘ಬ್ಲೂಟೂತ್’ ಹಾಕಿಲ್ಲವಲ್ಲ ಎಂಬುದನ್ನು ಪರೀಕ್ಷಿಸಲು ಹಿಜಾಬ್ ತೆಗೆಯುವಂತೆ ಹೇಳಿದ ಕಾರಣಕ್ಕಾಗಿ ಅವರು ಪರೀಕ್ಷೆಯನ್ನು ಬಹಿಷ್ಕರಿಸಿದರು. ಆ ಸಮಯದಲ್ಲಿ ಶಿಕ್ಷಕ ಶಶಿಭೂಷಣ ವಿರುದ್ಧ ಸುಳ್ಳೂ ಆರೋಪ ಮಾಡಿದ ಅವರು, ‘ಶಿಕ್ಷಕರು ನಮ್ಮನ್ನು ‘ದೇಶದ್ರೋಹಿ’ ಎಂದು ಕರೆದು ಪಾಕಿಸ್ತಾನಕ್ಕೆ ಹೊರಟು ಹೋಗಿ ಎಂದು ಹೇಳಿದರು’ ಎಂದಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕ ಶಶಿಭೂಷಣ ಇವರು ಎಲ್ಲಾ ಆರೋಪಗಳನ್ನು ಅಲ್ಲಗಳೆಯುತ್ತಾ, ಈ ಘಟನೆಯು ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕನುಪ್ರಿಯಾ ಅವರು, ವಿದ್ಯಾರ್ಥಿನಿಗಳ ಇಂತಹ ವರ್ತನೆಯಿಂದ ವಾತಾವರಣ ಹಾಳಾಗುತ್ತಿದೆ ಎಂದು ಹೇಳಿದರು. ಈ ಕಾಲೇಜಿನ ಇತಿಹಾಸ ಬಹಳ ಹಳೆಯದು. ವಿದ್ಯಾರ್ಥಿನಿಯರು ಮೊಬೈಲ್ ಫೋನ್ ಮತ್ತು ಬ್ಲೂಟೂತ್‌ಗಳನ್ನು ದೂರವಿಡಲು ಹೇಳಲಾಗಿತ್ತಾದರೂ ಅವರು ಈ ಪ್ರಸಂಗವನ್ನು ಧರ್ಮಕ್ಕೆ ಜೋಡಿಸಿ ಗೊಂದಲ ಮಾದಲಾರಂಭಿಸಿದರು. ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ.
ಪ್ರಾಂಶುಪಾಲರು ಮೊಂದೆ ಮಾತನಾಡುತ್ತಾ, ಈಗಾಗಲೇ ಈ ವಿದ್ಯಾರ್ಥಿನಿಯರ ಹಾಜರಾತಿ ಶೇ. ೭೫ ಕ್ಕಿಂತ ಕಡಿಮೆಯಿದೆ. ಇಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು ಎಂದು ವಿಶ್ವವಿದ್ಯಾನಿಲಯವು ಹೇಳಿರುವ ಕಾರಣ ಈ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ತಲೆಬಾಗುವಂತೆ ಅನಗತ್ಯ ಒತ್ತಡ ಹೇರುತ್ತಿದ್ದಾರೆ. ಈ ವಿದ್ಯಾರ್ಥಿನಿಯರು ಕಟ್ಟು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಶಾಲೆಯಲ್ಲಿ ಎಂದಿಗೂ ಧಾರ್ಮಿಕ ಭೇದಭಾವ ಮಾಡಲಾಗಿಲ್ಲ ಆದರೆ ಯಾರೋ ಧರ್ಮ ಮತ್ತು ಹಿಜಾಬ್ ಹೆಸರಿನಲ್ಲಿ ಈ ಮುಸಲ್ಮಾನ ವಿದ್ಯಾರ್ಥಿನಿಯರನ್ನು ಪ್ರಚೋದಿಸುತ್ತಿದ್ದಾರೆ. ಒಂದು ವೇಳೆ ಪರೀಕ್ಷೆ ಕೊಡದೇ ಇದ್ದರೆ ಹಿಜಾಬ್ ತೆಗೆದು ತಮ್ಮ ಕಿವಿಗಳನ್ನು ತೋರಿಸಲರೆವು ಎಂದು ಈ ವಿದ್ಯಾರ್ಥಿನಿಯರು ಹೇಳಿದ್ದಾರೆಂದು ಶಿಕ್ಷಕ ಶಶಿಭೂಷಣ ತಿಳಿಸಿದರು.

ಸಂಪಾದಕೀಯ ನಿಲುವು

  • ಮೂಲತಃ ಪರಿಶೀಲನೆಗಾಗಿ ಹಿಜಾಬ್‌ಅನ್ನು ತೆಗೆಯಲು ಹೇಳುವುದರಲ್ಲಿ ಏನೂ ತಪ್ಪಿದೆ. ಇದರಿಂದ ಜಾತ್ಯತೀತವಾದಿ ಹಾಗೂ ಪ್ರಗತಿ (ಅಧೋ) ಪರರು ಈ ಬಗ್ಗೆ ಏನೂ ಮಾತನಾಡಲಾರರು ಎಂಬುದೂ ಅಷ್ಟೇ ಸತ್ಯ !
  • ಇಂತಹ ಘಟನೆಗಳನ್ನು ತಡೆಯಲು ದೇಶದ ಎಲ್ಲಾ ಶಾಲೆಗಳಲ್ಲಿ ಹಿಜಾಬ್ ಅನ್ನು ಏಕೆ ನಿಷೇಧಿಸಬಾರದು ?