-
ತಮಿಳುನಾಡಿನಲ್ಲಿ ನೆಲೆಯೂರಲು ‘ಎಲ್.ಟಿ.ಟಿ.ಇ.’ಯ ಪ್ರಯತ್ನ
-
ಹಲವೆಡೆ ಶಸ್ತ್ರಾಸ್ತ್ರ ಕಾರ್ಖಾನೆಗಳ ಸ್ಥಾಪನೆ !
ಚೆನ್ನೈ (ತಮಿಳುನಾಡು) – ಶ್ರೀಲಂಕಾದ ‘ಲಿಬರೇಶನ್ ಟೈಗರ್ಸ್ ಆಫ್ ತಮಿಳ ಇಳಂ’ (ಎಲ್.ಟಿ.ಟಿ.ಇ.) ಸಂಘಟನೆಯು ತಮಿಳುನಾಡಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದೆ. ಅದು ರಾಜ್ಯದ ಹಲವೆಡೆ ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಸ್ಥಾಪಿಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ.) ಮಾಹಿತಿ ಲಭಿಸಿದೆ. ಈ ಸಂಘಟನೆಯಿಂದ ರಾಜ್ಯದ ದೊಡ್ಡ ರಾಜಕಾರಣಿಗಳನ್ನು ಮತ್ತು ಉದ್ಯಮಿಗಳನ್ನು ಹಣಕಾಸು ಸಹಾಯಕ್ಕಾಗಿ ಗುರಿಯಾಗಿಸಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಹಿಂದೆ ಸಿಕ್ಕ ಮಾಹಿತಿ ಮೇರೆಗೆ ಎನ್.ಐ.ಎ. ಕೆಲವೆಡೆ ದಾಳಿ ನಡೆಸಿತ್ತು.
तमिलनाडु से टेरर फंडिंग जुटाने में लगा आतंकी संगठन लिट्टे : कई जगह हथियारों की अवैध फैक्ट्री बनाई; NIA को मिले अहम सबूतhttps://t.co/9ifUxRB5wF#Tamilandu #TerrorFunding #NIA pic.twitter.com/PrrZdI2tPA
— Dainik Bhaskar (@DainikBhaskar) October 17, 2022
೧. ತಮಿಳುನಾಡು ಪೊಲೀಸರು ಮೇ ೧೯ ರಂದು ಸೇಲಂ ಜಿಲ್ಲೆಯ ಸೇವಾಪೇಟ್‌ನಿಂದ ನವೀನ ಮುಥು ಮತ್ತು ಸಂಜಯ ಪ್ರಕಾಶ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದರು. ಅವರಿಂದ ೨ ಪಿಸ್ತೂಲ್‌ಗಳು, ಗನ್ ಪೌಡರ್, ಕೆಲವು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಯುವಕರು ಎಲ್.ಟಿ.ಟಿ.ಇ. ಪರ ಕೆಲಸ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಆ ಬಳಿಕ ಪ್ರಕರಣವನ್ನು ಎನ್.ಐ.ಎ.ಗೆ ಹಸ್ತಾಂತರಿಸಲಾಗಿದೆ.
೨. ಎನ್.ಐ.ಎ.ಯು ನಡೆಸಿದ ತನಿಖೆಯಲ್ಲಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ಎಲ್.ಟಿ.ಟಿ.ಇ. ತನ್ನ ಕಾರ್ಯಾಚರಣೆಯನ್ನು ಭಾರತಕ್ಕೆ ವರ್ಗಾಯಿಸಿದೆ ಎಂದು ತಿಳಿದುಬಂದಿದೆ. ಈ ಮೊದಲು ಶ್ರೀಲಂಕಾದಲ್ಲಿ ಶಸ್ತ್ರಾಸ್ತ್ರಗಳನ್ನು ಶ್ರೀಲಂಕಾದಲ್ಲಿ ತಯಾರಿಸಲಾಗುತ್ತಿತ್ತು; ಆದರೆ ಈಗ ಅವುಗಳನ್ನು ಸ್ಥಳೀಯರ ಸಹಕಾರದಿಂದ ತಮಿಳುನಾಡಿನಲ್ಲಿಯೇ ತಯಾರಿಸಲಾಗುತ್ತಿದೆ.
೩. ಎಲ್.ಟಿ.ಟಿ.ಇ. ತನ್ನ ಸದಸ್ಯರಿಗೆ ಕಾಡಿನಲ್ಲಿ ಉಳಿಯಲು ತರಬೇತಿ ನೀಡುತ್ತಿದೆ. ತಮಿಳುನಾಡಿನಲ್ಲಿ ನಡೆಸಿದ ದಾಳಿಯಲ್ಲಿ ಕಾಡಿನಲ್ಲಿ ಬದುಕಲು ಉಪಯೋಗಕ್ಕೆ ಬರುವ ಸಾಹಿತ್ಯ ಹಾಗೂ ಕಾಡು ಬೀಜಗಳಿಂದ ತಯಾರಿಸಿದ ವಿಷವೂ ಸಿಕ್ಕಿದೆ. ಈ ವಿಷವು ಯಾವಾಗಲೂ ಎಲ್.ಟಿ.ಟಿ.ಇ. ಸದಸ್ಯರ ಬಳಿ ಇರುತ್ತದೆ. ಇದರಿಂದಾಗಿ ಯಾವುದೇ ಕಾರಣಕ್ಕೆ ಸದಸ್ಯರು ಪೊಲೀಸ ಅಥವಾ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿಬಿದ್ದರೆ ಅವರು ಆ ವಿಷವನ್ನು ಸೇವಿಸಿ ಪ್ರಾಣ ಬಿಡಬಹುದು.
೪. ಎನ್.ಐ.ಎ.ಯ ದಾಳಿಯಲ್ಲಿ, ೨೦೦೯ ರಲ್ಲಿ ಕೊಲ್ಲಲ್ಪಟ್ಟ ಎಲ್.ಟಿ.ಟಿ.ಇ.ಯ ಮುಖ್ಯಸ್ಥ ಪ್ರಭಾಕರನ ಅವರನ್ನು ಕುರಿತು ಬರೆದಿರುವ ಪುಸ್ತಕಗಳು, ಛಾಯಾಚಿತ್ರಗಳು ಮತ್ತು ಸಾಕಷ್ಟು ಆಕ್ಷೇಪಾರ್ಹ ಸಹಿತ್ಯವು ಪತ್ತೆಯಾಗಿವೆ. ತಮಿಳುನಾಡಿನ ಅನೇಕ ದೊಡ್ಡ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರಿನ ಪಟ್ಟಿ ಸಿಕ್ಕಿದೆ. ಈ ಪಟ್ಟಿಯಲ್ಲಿರುವ ನಾಯಕರು ಎಲ್.ಟಿ.ಟಿ.ಇ. ಗುರಿಯಾಗಿದ್ದರು ಎಂಬುದನ್ನು ತೋರಿಸುವ ಕೆಲವು ದಾಖಲೆಗಳು ಸಹ ಸಿಕ್ಕಿವೆ.