ಮಠಗಳ ದೇವಸ್ಥಾನದಲ್ಲಿ ಕಾರ್ಯಕಾರಿ ಅಧಿಕಾರಿ ನೇಮಕಗೊಳಿಸುವ ಆಂಧ್ರಪ್ರದೇಶ ಸರಕಾರದ ನಿರ್ಣಯ ರದ್ದು !

ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಿಂದ ಹಿಂದೂದ್ವೇಷಿ ವೈ.ಎಸ್.ಆರ್. ಕಾಂಗ್ರೆಸ್ ಸರಕಾರಕ್ಕೆ ತಪರಾಕಿ !

ಕರ್ನೂಲ (ಆಂಧ್ರಪ್ರದೇಶ) – ಆಂಧ್ರ ಪ್ರದೇಶದಲ್ಲಿನ ವೈ.ಎಸ್.ಆರ್ ಕಾಂಗ್ರೆಸ್ ಸರಕಾರದಿಂದ ರಾಜ್ಯದಲ್ಲಿನ ಅಹೋಬಿಲಮ ದೇವಸ್ಥಾನದಲ್ಲಿ ಸರಕಾರಿ ಕಾರ್ಯಕಾರಿ ಅಧಿಕಾರಿಯ ನೇಮಕ ಮಾಡುವ ಆದೇಶವನ್ನು ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯವು ರದ್ದುಪಡಿಸಿದೆ. ನ್ಯಾಯಾಲಯವು ಸರಕಾರದ ಆದೇಶ ಸಂವಿಧಾನದ ಅವಮಾನ ಇರುವುದೆಂದು ಹೇಳುತ್ತಾ ದೇವಸ್ಥಾನದಲ್ಲಿ ಹಸ್ತಕ್ಷೇಪ ಮಾಡದಂತೆ ಆದೇಶ ನೀಡಿದೆ.

೧. ಅಹೋಬಿಲಮ ಮಠ ತಮಿಳುನಾಡಿನಲ್ಲಿದೆ. ಹಾಗೂ ಅದರ ದೇವಸ್ಥಾನ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ನಲ್ಲಿದೆ. ಅದರ ವ್ಯವಸ್ಥಾಪನೆ ಮತ್ತು ಸಂರಕ್ಷಣೆ ಮಾಡುವುದಕ್ಕಾಗಿ ರಾಜ್ಯ ಸರಕಾರದಿಂದ ಒಂದು ಕಾರ್ಯಕಾರಿ ಅಧಿಕಾರಿಯ ನೇಮಕ ಮಾಡಲಾಗಿತ್ತು. ಉಚ್ಚ ನ್ಯಾಯಾಲಯದಿಂದ ‘ಈ ನೇಮಕ ಸಂವಿಧಾನದ ಕಲಂ ೨೬(ಡ) ದ ಉಲ್ಲಂಘನೆ ಆಗಿದ್ದು ಅದು ಮಠಾಧಿಪತಿಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಾಗಿದೆ. ಇಲ್ಲಿಯ ದೇವಸ್ಥಾನಗಳು ಮಠದ ಒಂದು ಭಾಗವಾಗಿದೆ’, ಎಂದು ಹೇಳುತ್ತಾ ಆದೇಶ ರದ್ದುಪಡಿಸಿದೆ.

೨. ದೇವಸ್ಥಾನ ಮತ್ತು ಮಠ ಇದು ಬೇರೆ ಬೇರೆ ಆಗಿದೆ, ಈ ಸಮಯದಲ್ಲಿ ನ್ಯಾಯಾಲಯವು ಮಾನ್ಯತೆ ನೀಡಿಲ್ಲ. ನ್ಯಾಯಾಲಯವು, ಮಠ ತಮಿಳುನಾಡುನಲ್ಲಿ ಹಾಗೂ ದೇವಸ್ಥಾನ ಆಂಧ್ರ ಪ್ರದೇಶದಲ್ಲಿದೆ. ಆದ್ದರಿಂದ ಈ ದಾವೆ ತಪ್ಪಾಗಿದೆ, ದೇವಸ್ಥಾನ ಮುಖ್ಯ ಮಠಕ್ಕೆ ಸಂಬಂಧಿತ ಧಾರ್ಮಿಕ ಪೂಜಾ ಸ್ಥಳ ಆಗುವುದಿಲ್ಲ. ಕಾರಣ ಒಂದು ಸಮಯದಲ್ಲಿ ಈ ಎರಡು ಸ್ಥಳಗಳು ಮದ್ರಾಸ ರಾಜ್ಯದ ಅಡಿಯಲ್ಲಿ ಇದ್ದವು ಎಂದು ಹೇಳಿದೆ.

೩. ನ್ಯಾಯಾಲಯವು, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಂಪ್ರದಾಯ ಇದರಲ್ಲಿ ಏಕರೂಪತೆ ಇರುವಾಗ ಮಠ ಮತ್ತು ದೇವಸ್ಥಾನಗಳು ಇವು ದೂರ ಇದೆ, ಎಂದು ಹೇಳುವುದು ತಪ್ಪಾಗುತ್ತದೆ. ಒಂದುವೇಳೆ ಮಠ ಮತ್ತು ದೇವಸ್ಥಾನ ಏನಾದರೂ ಭೌಗೋಳಿಕವಾಗಿ ಬೇರೆ ಬೇರೆ ಸ್ಥಳದಲ್ಲಿ ಇದ್ದರೂ ಪರಂಪರೆ, ಪದ್ಧತಿ, ಅನುಷ್ಠಾನ ಮುಂತಾದವುಗಳಲ್ಲಿ ಏಕರೂಪತೆ ಇದೆ. ಕಾರ್ಯಕಾರಿ ಅಧಿಕಾರಿ ನೇಮಕಗೊಳಿಸಿ ಮಠಾಧಿಪತಿಯ ಅಧಿಕಾರ ನಿರಾಕರಿಸಲು ಸಾಧ್ಯವಿಲ್ಲ, ಎಂದು ನ್ಯಾಯಾಲಯ ಹೇಳಿತು.

೪. ನ್ಯಾಯಾಲಯವು, ಮಠ ಮತ್ತು ದೇವಸ್ಥಾನ ಇದರಲ್ಲಿ, ಅಲ್ಲಿಯ ಅವ್ಯವಸ್ಥೆಯ ಆಡಳಿತ ಇದ್ದರೆ ಅಥವಾ ಯಾವುದಾದರೂ ಮಹತ್ವದ ಕಾರಣ ಇದ್ದರೆ ಮಾತ್ರ ಮಠ ಹಾಗೂ ದೇವಸ್ಥಾನದ ಬಗ್ಗೆ ಹಸ್ತಕ್ಷೇಪ ಮಾಡಬೇಕೆಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ಭಾರತಾದ್ಯಂತ ಮಠ ಮತ್ತು ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸಲು ಹಿಂದೂಗಳು ಸಂಘಟಿತರಾಗಿ ಕಾನೂನರೀತ್ಯ ಪ್ರಯತ್ನ ಮಾಡುವುದು ಅವಶ್ಯಕ !