ಬ್ಯಾಂಕ್‌ನಲ್ಲಿ ಕನಿಷ್ಠ ೩೦ ಲಕ್ಷ ರೂಪಾಯಿ ಉಳಿಯಿತು
ಶ್ರೀಗಂಗಾನಗರ (ರಾಜಸ್ಥಾನ) – ಇಲ್ಲಿಯ ಮರುಧರಾ ಗ್ರಾಮೀಣ ಬ್ಯಾಂಕ್‌ನಲ್ಲಿ ಅಕ್ಟೋಬರ್ ೧೫ ರಂದು ಸಂಜೆ ಒಬ್ಬ ಕಳ್ಳನು ದರೋಡೆ ಮಾಡುವ ಪ್ರಯತ್ನ ಮಾಡಿದನು. ಕಳ್ಳನು ಕೈಯಲ್ಲಿ ಚಾಕು ಹಿಡಿದುಕೊಂಡು ಬ್ಯಾಂಕ್‌ನ ಒಳಗೆ ನುಗ್ಗಿದನು ಮತ್ತು ಸಿಬ್ಬಂದಿಗಳಿಗೆ ಜೀವ ಬೆದರಿಕೆ ನೀಡಿ ನಗದು ಹಣ ಬ್ಯಾಗಿನಲ್ಲಿ ತುಂಬಿಸಲು ಹೇಳಿದನು. ಆ ಸಮಯದಲ್ಲಿ ಬ್ಯಾಂಕ್‌ನ ಮಹಿಳಾ ವ್ಯವಸ್ಥಾಪಕಿ (ಮ್ಯಾನೇಜರ್) ಪೂನಮ ಗುಪ್ತ ಇವರು ಧೈರ್ಯದಿಂದ ಆ ಕಳ್ಳನನ್ನು ಎದುರಿಸಿದರು. ಗುಪ್ತ ಅವರ ಆಕ್ರಮಣಕಾರಿ ರೂಪ ನೋಡಿ ಕಳ್ಳನು ಅಸಹಾಯಕನಾದನು. ಇದರಿಂದ ಸಿಬ್ಬಂದಿಗಳೂ ಸಹ ಧೈರ್ಯತೋರಿ ಕಳ್ಳನ ಹೆಡೆಮುರಿ ಕಟ್ಟಿದರು. ಪೊಲೀಸರು ಕಳ್ಳನನ್ನು ಬಂಧಿಸಿದರು ಮತ್ತು ಪೂನಮ ಗುಪ್ತ ಇವರ ಧೈರ್ಯದ ಬಗ್ಗೆ ಎಲ್ಲಾ ಕಡೆ ಶ್ಲಾಘಿಸಲಾಗುತ್ತಿದೆ.
ಈ ಘಟನೆ ನಡೆಯುವಾಗ ಬ್ಯಾಂಕ್‌ನಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಇರಲಿಲ್ಲ. ಸಾಮಾನ್ಯವಾಗಿ ಈ ಬ್ಯಾಂಕ್‌ನಲ್ಲಿ ಪ್ರತಿದಿನ ೫೦ ರಿಂದ ೭೦ ಲಕ್ಷ ರೂಪಾಯ ವ್ಯವಹಾರ ನಡೆಯುತ್ತದೆ. ಘಟನೆ ನಡೆದಿರುವ ಸಮಯದಲ್ಲಿ ಕೂಡ ಬ್ಯಾಂಕ್‌ನಲ್ಲಿ ೩೦ ರಿಂದ ೪೦ ಲಕ್ಷ ರೂಪಾಯ ನಗದು ಉಪಲಬ್ಧವಾಗಿತ್ತು.