ಎಂ.ಐ.ಎಂ.ನ ಉತ್ತರಪ್ರದೇಶದ ಪ್ರದೇಶಾಧ್ಯಕ್ಷ ಶೌಕತ್ ಅಲಿ ಇವರ ವಿರುದ್ಧ ದೂರು ದಾಖಲು !

ಹಿಂದೂಗಳ ವಿರುದ್ಧ ಅಸಭ್ಯ ಹೇಳಿಕೆ ನೀಡಿರುವ ಪ್ರಕರಣ

ಉತ್ತರ ಪ್ರದೇಶದ ಎಂ.ಐ.ಎಂ.ನ ಪ್ರದೇಶಾಧ್ಯಕ್ಷ ಶೌಕತ್ ಅಲಿ

ಸಂಭಲ (ಉತ್ತರಪ್ರದೇಶ) – ಹಿಂದೂಗಳ ವಿರುದ್ಧ ಅಸಭ್ಯ ಹೇಳಿಕೆ ನೀಡುವ ಉತ್ತರ ಪ್ರದೇಶದ ಎಂ.ಐ.ಎಂ.ನ ಪ್ರದೇಶಾಧ್ಯಕ್ಷ ಶೌಕತ್ ಅಲಿ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಇಲ್ಲಿಯ ಒಂದು ಸಭೆಯಲ್ಲಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರಲ್ಲಿನ ಕೆಲವು ಹೇಳಿಕೆಗಳು ಈಗ ಬಹಿರಂಗವಾಗಿವೆ.

ನಾವು ನಿಮ್ಮನ್ನು ೮೩೨ ವರ್ಷ ಆಳಿದ್ದೇವೆ ! – ಶೌಕತ್ ಅಲಿ

ಈ ಸಭೆಯಲ್ಲಿ ಶೌಕತ್ ಅಲಿ, ನೀವು (ಹಿಂದೂಗಳು) ನಮಗೆ ಬೆದರಿಕೆ ನೀಡುತ್ತೀರಿ. ‘ನೀವು (ಹಿಂದೂಗಳು) ಕ್ರಿಮಿಕೀಟಗಳ ಹಾಗೆ ಇದ್ದೀರಿ. ನಾವು ಭಾರತದ ಮೇಲೆ ೮೩೨ ವರ್ಷ ರಾಜ್ಯ ಆಳಿದ್ದೇವೆ. ನೀವು ನಮ್ಮ ಬಾದಶಹಗಳ ಎದುರು ಕೈಕಟ್ಟಿ ನಿಲ್ಲುತ್ತಿದ್ದರಿ. ನಾವು ನಿಮ್ಮ ಸಹೋದರಿಯನ್ನು ‘ಮಲ್ಲಿಕಾ-ಎ-ಹಿಂದೂಸ್ತಾನ’ (ರಾಣಿ) ಮಾಡಿದ್ದೆವು. ಜೋಧಾಬಾಯಿ ಯಾರು ಇದ್ದರು ? ನಾವು ಎಂದು ಕೂಡ ಭೇದ ಭಾವ ಮಾಡಲಿಲ್ಲ. ನಮಗಿಂತ ದೊಡ್ಡ ಜಾತ್ಯತೀತ ಯಾರು ಇರುವರು ? ನಾವು ನಮ್ಮ ಜೊತೆ ನಿಮ್ಮನ್ನು ಮೇಲೆ ಕರೆದುಕೊಂಡು ಹೋಗುತ್ತಿದ್ದೇನೆ. ಒಬ್ಬ ಸಾಧು ನಿಂತು, ‘ನಿಮ್ಮ(ಮುಸಲ್ಮಾನರನ್ನು) ತುಂಡು ತುಂಡಾಗಿ ಕತ್ತರಿಸಬೇಕು,’ ಎಂದು ಹೇಳುತ್ತಾರೆ. ಅಂದರೆ ನಾವೇನು ಗಜ್ಜರಿ, ಮೂಲಂಗಿ, ಈರುಳ್ಳಿ ಆಗಿದ್ದೇವೆಯೇ ? ಸಾಧು ಸಾಹೇಬರೇ, ನಮ್ಮನ್ನು ಏನಾದರೂ ನೀವು ಮುಸಲ್ಮಾನರ ಸಿಟ್ಟಿನ ಮುಖ ನೋಡಿದರೆ ನಿಮ್ಮ ಬಟ್ಟೆ ಒದ್ದೆ ಆಗುವುದು.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ದೂರು ದಾಖಲಿಸಿ ನಿಲ್ಲದೆ, ಇಂತಹವರನ್ನು ಬಂಧಿಸಿ ಅವರಿಗೆ ಶಿಕ್ಷೆ ಆಗುವವರೆಗೂ ಹಿಂದೂಗಳು ಬೆಂಬತ್ತುವುದು ಅವಶ್ಯಕವಾಗಿದೆ !