ನಮಗೆ ಬ್ರಿಟನ್‌ನಲ್ಲಿ ಭಯವಾಗುತ್ತಿದೆ !

ಬ್ರೀಟನ್‌ನಲ್ಲಿನ ೧೮೦ ಕ್ಕೂ ಹೆಚ್ಚಿನ ಭಾರತೀಯ ಮತ್ತು ಹಿಂದೂ ಸಂಘಟನೆಗಳಿಂದ ಪ್ರಧಾನಿ ಲಿಝ ಟ್ರಸ್ ಇವರಿಗೆ ಪತ್ರ !

ಬ್ರಿಟನ್‌ನ ಪ್ರಧಾನಿ ಲಿಝ ಟ್ರಸ್ (ಬಲಬದಿಗೆ)

ಲಂಡನ – ಬ್ರಿಟನ್‌ನ ಪ್ರಧಾನಿ ಲಿಝ ಟ್ರಸ್ ಇವರಿಗೆ ಇಲ್ಲಿಯ ೧೮೦ ಕ್ಕೂ ಹೆಚ್ಚಿನ ಹಿಂದೂ ಸಂಘಟನೆಗಳಿಂದ ಪತ್ರ ಬರೆಯಲಾಗಿದೆ. ಅದರಲ್ಲಿ ಅವರು ‘ಬ್ರಿಟನ್‌ನಲ್ಲಿ ನಮಗೆ ಭಯವಾಗುತ್ತಿದೆ’, ಎಂದು ಬರೆದಿದ್ದಾರೆ. ಬ್ರಿಟನ್‌ನ ಲೀಸೆಸ್ಟರ್ ಮತ್ತು ಬರ್ಮಿಂಗ ಹ್ಯಾಮ್ ಇಲ್ಲಿಯ ಹಿಂದೂಗಳ ಮೇಲೆ ಮುಸಲ್ಮಾನರಿಂದ ಕೆಲವು ವಾರಗಳ ಹಿಂದೆ ನಡೆದ ದಾಳಿಯ ಉಲ್ಲೇಖ ಮಾಡಲಾಗಿದೆ. ಇದರಲ್ಲಿ ಭಾರತೀಯ ಮತ್ತು ಹಿಂದೂ ಸಂಘಟನೆಗಳ ಸುರಕ್ಷೆಯ ಕಾಳಜಿ ತೆಗೆದುಕೊಳ್ಳಲು ಕರೆ ನೀಡಲಾಗಿದೆ. ಈ ಸಂಘಟನೆಯಿಂದ ಒಟ್ಟು ೬ ಮನವಿ ನೀಡಲಾಗಿದೆ. ಈ ಪತ್ರದಲ್ಲಿ ವಿವಿಧ ಸಂಘಟನೆಗಳು, ಹಿಂದೂ ದೇವಸ್ಥಾನ ರಾಷ್ಟ್ರೀಯ ಪರಿಷತ್, ಶ್ರೀ ಸ್ವಾಮಿ ನಾರಾಯಣ ಸಂಸ್ಥೆ ಯುಕೆ, ಇಂಡಿಯನ್ ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಯುಕೆ, ಇಸ್ಕಾನ್ ಮ್ಯಾಚೆಸ್ಟಾರ್, ಓವರಸಿಜ್ ಫ್ರೆಂಡ್ಸ್ ಆಫ್ ಬ್ರಿಟನ್, ಬಿಜೆಪಿ (ಯುಕೆ), ಹಿಂದೂ ಲಾಯರ‍್ಸ್ ಅಸೋಸಿಯೇಷನ್ (ಯುಕೆ) ಮುಂತಾದವರ ಸಹಿ ಇದೆ.

ಈ ಪತ್ರದಲ್ಲಿ, ಹಿಂದೂ ಸಮಾಜ ಸರಿ ಸುಮಾರು ೫೦ ವರ್ಷಗಳಿಂದ ಬ್ರಿಟನನ್ನು ತಮ್ಮ ಮನೆ ಅಂದುಕೊಂಡಿದೆ. ಬ್ರಿಟನ್‌ನ ಜನಸಂಖ್ಯೆಯಲ್ಲಿ ನಾವು ಶೇಕಡ ೨ ಕ್ಕಿಂತ ಕಡಿಮೆ ಇದ್ದೇವೆ. ಆದರೂ ಕೂಡ ನಮ್ಮ ಕೊಡುಗೆ ಮಹತ್ವಪೂರ್ಣವಾಗಿದೆ. ನಾವು ಕೇವಲ ಸಾಮಾಜಿಕ ಮತ್ತು ಆರ್ಥಿಕ ಕೊಡುಗೆ ನೀಡದೆ, ಬ್ರಿಟಿಶ ಮೌಲ್ಯಗಳು ಮನಸ್ಸಿನಿಂದ ಪಾಲಿಸುತ್ತೇವೆ. ಭಾರತೀಯರು ಇಲ್ಲಿಯ ಕಾನೂನು ಸಂಪೂರ್ಣವಾಗಿ ಪಾಲಿಸುತ್ತಾರೆ. ಹೀಗೆ ಇರುವಾಗಲೂ ಕೂಡ ನಮಗೆ ಇಲ್ಲಿ ಅಸುರಕ್ಷಿತ ಅನಿಸುತ್ತಿದೆ. ಲೀಸೆಸ್ಟರ್ ಬರ್ಮಿಂಗಹ್ಯಾಮ್ ಮತ್ತು ಇತರ ನಗರಗಳಲ್ಲಿ ಇತ್ತೀಚಿಗೆ ನಡೆದಿರುವ ಘಟನೆಯ ಬಗ್ಗೆ ನಾವು ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇವೆ. ಈ ಘಟನೆಗಳಿಂದ ಬ್ರಿಟನ್‌ನಲ್ಲಿರುವ ಭಾರತೀಯ ಮತ್ತು ಹಿಂದೂ ಸಮುದಾಯ ವ್ಯಥೆ ಪಡುತ್ತಿದೆ. ಹಿಂದೂ ಸಮಾಜದ ಬಗ್ಗೆ ದ್ವೇಷ ಆಶ್ಚರ್ಯಕಾರಕವಾಗಿ ಹೆಚ್ಚಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ವಿರುದ್ಧ ಬೈಗುಳ, ಶಾರೀರಿಕ ಹಿಂಸೆ, ದೌರ್ಜನ್ಯ ನಡೆಸಿದ ನಂತರ ಈಗ ಅವರು ಶಾಲೆ ಮತ್ತು ಕೆಲಸದ ಸ್ಥಳಗಳಲ್ಲಿ ಕೂಡ ಗುರಿ ಮಾಡುತ್ತಿದ್ದಾರೆ. ಬ್ರಿಟಿಷ್ ಪ್ರಧಾನಿಗೆ ಪರಿಸ್ಥಿತಿ ಗಮನಿಸಿ ಯೋಗ್ಯ ನಿರ್ಣಯ ತೆಗೆದುಕೊಳ್ಳಬೇಕು ಮತ್ತು ಬ್ರಿಟಿಷರು ಭಾರತೀಯರ ಭಯ ದೂರಗೊಳಿಸಲು ಮುಂದಾಳತ್ವ ವಹಿಸಬೇಕು, ಎಂದು ಕರೆ ನೀಡಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಎಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ, ಅಲ್ಲಿಯೂ ಕೂಡ ಇದೇ ಪರಿಸ್ಥಿತಿ ಇದೆ. ಆ ಸ್ಥಳದಲ್ಲಿಯ ಹಿಂದೂಗಳು ಕೂಡ ಭಾರತದ ಪ್ರಧಾನಿಗೆ ಈ ರೀತಿಯ ಪತ್ರ ಬರೆದರೆ ಆಶ್ಚರ್ಯವೇನು ಇಲ್ಲ !