ಛತ್ತಿಸಗಡದಲ್ಲಿ ಸಾಧು ಸಂತರಿಗೆ ನೀಡಲಾಗುವುದು ಗುರುತಿನ ಚೀಟಿ !

ರಾಯಪುರು (ಛತ್ತಿಸಗಡ) – ಛತ್ತಿಸಗಡ ರಾಜ್ಯದಲ್ಲಿ ಸಾಧು ಸಂತರಿಗಾಗಿ ಈಗ ಗುರುತಿನ ಚೀಟಿ ಮಾಡಿಕೊಡಲಾಗುವುದು. ಈ ಮೂಲಕ ಸಾಧುಗಳ ವೇಷ ಧರಿಸಿ ಬರುವವರಿಂದ ಆಗುವ ಮೋಸ ನಿಲ್ಲಿಸಲಾಗುವುದು. ಅಖಿಲ ಭಾರತೀಯ ಸಂತ ಸಮಿತಿಯು ಈ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಂಡಿದೆ. ಸಮಿತಿಯ ಪ್ರದೇಶಾಧ್ಯಕ್ಷ ಮಹಾಮಂಡಲೇಶ್ವರ ಲಕ್ಷ್ಮಣ ದಾಸ ಇವರು, ಸನಾತನ ಧರ್ಮದ ರಕ್ಷಣೆ ಮಾಡುವುದು ಅವಶ್ಯಕವಾಗಿದೆ. ರಾಜ್ಯದ ಹೊರಗಿನ ಬಂದಿರುವ ಜನರು ಸನಾತನ ಧರ್ಮಕ್ಕೆ ಅಪಕೀರ್ತಿ ತರುತ್ತಿದ್ದಾರೆ. ಇಂತಹ ಪ್ರಕರಣಗಳ ವಿಚಾರಣೆ ನಡೆಯಬೇಕು ಎಂದು ಹೇಳಿದರು.