ಉತ್ತರಪ್ರದೇಶದಲ್ಲಿನ ಮುರಾದಾಬಾದ ಜಿಲ್ಲೆಯಲ್ಲಿ ೫೮೫ ಅಕ್ರಮ ಮದರಸಾಗಳು !

ಲಕ್ಷ್ಮಣಪುರಿ – ಉತ್ತರ ಪ್ರದೇಶದಲ್ಲಿ ೬ ಸಾವಿರದ ೫೦೨ ಮದರಸಾಗಳ ಪೈಕಿ ೫ ಸಾವಿರದ ೨೦೦ ಮದರಸಾಗಳ ಸಮೀಕ್ಷೆ ಪೂರ್ಣವಾಗಿದೆ. ರಾಜ್ಯದಲ್ಲಿನ ಮುರಾದಾಬಾದ ಜಿಲ್ಲೆಯಲ್ಲಿ ೫೮೫ ಅಕ್ರಮ ಮದರಸಾಗಳು ಕಂಡು ಬಂದಿದೆ. ಅಕ್ರಮ ಮದರಸಾಗಳಿಗೆ ಕೊಟಿಗಟ್ಟಲೆ ರುಪಾಯಿ ನಿಧಿ ದೊರೆಯುತ್ತಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಸಮೀಕ್ಷೆಯ ವರದಿ ರಾಜ್ಯ ಸರಕಾರಕ್ಕೆ ಪ್ರಸ್ತುತಪಡಿಸಲಾಗಿದೆ.

ಉತ್ತರಪ್ರದೇಶದಲ್ಲಿನ ವಿವಿಧ ಜಿಲ್ಲೆಗಳಲ್ಲಿ ಅಕ್ರಮ ಮದರಸಾಗಳು

ಗಾಜಿಯಾಬಾದಲ್ಲಿ ೧೩೯ ಮದರಸಾಗಳಿಗೆ ಸರಕಾರಿ ಅನುಮತಿ ಇಲ್ಲದೆ ನಡೆಸಲಾಗುತ್ತಿದೆ. ಗೋರಖಪುರದಲ್ಲಿ ೧೪೨ ಮದರಸಾಗಳು ಅಕ್ರಮವಾಗಿದೆ. ಕಾನಪುರದಲ್ಲಿ ೮೬ ಮದರಸಾಗಳಿಗೆ ಸರಕಾರಿ ಅನುಮತಿ ಇಲ್ಲದೆ ನಡೆಸಲಾಗುತ್ತಿದೆ. ಅಯೋಧ್ಯೆಯಲ್ಲಿ ೧೪೩ ಗಳಲ್ಲಿ ೫೫ ಮದರಸಗಳು ಅಕ್ರಮವಾಗಿದೆ.
ಪ್ರಯಾಗರಾಜದಲ್ಲಿನ ೨೬೯ ಗಳ ಪೈಕಿ ೭೮ ಮದರಸಾಗಳು ಅಕ್ರಮವಾಗಿದೆ. ಬಾರಾಬಂಕಿಯಲ್ಲಿ ೧೦೨ ಮದರಸಾಗಳು ಸರಕಾರಿ ಮಾನ್ಯತೆ ಇಲ್ಲದೆ ನಡೆಸಲಾಗುತ್ತಿದೆ.

ಪಿಲಿಭಿತದಲ್ಲಿ ೨೫ ಅಕ್ರಮ ಮದರಸಾಗಳಿವೆ. ಹಾಗೂ ದೇವಬಂದದಲ್ಲಿ ೧೦೦ ಮದರಸಾಗಳು ಸರಕಾರಿ ಅನುಮತಿ ಇಲ್ಲದೆ ನಡೆಸಲಾಗುತ್ತಿದೆ. ಸಹಾರನಪುರದಲ್ಲಿ ೭೫೪ ಗಳಲ್ಲಿ ೭೬ ಮದರಸಾಗಳಿಗೆ ಸರಕಾರಿ ಮಾನ್ಯತೆ ಇರಲಿಲ್ಲ. ಆಗ್ರಾದಲ್ಲಿ ೯೭ ಗಳಲ್ಲಿ ೧೦ ಮದರಸಾಗಳು ಅಕ್ರಮವಾಗಿದೆ, ಎಂದು ಈ ವರದಿಯಲ್ಲಿ ಕಂಡು ಬಂದಿದೆ. ಸರಕಾರದ ಮಾನ್ಯತೆ ಇಲ್ಲದೆ ಇರುವ ಮದರಸಾಗಳಿಗೆ ಕೋಟಿಗಟ್ಟಲೆ ನಿಧಿ ಸಿಕ್ಕಿರುವುದು ಈ ವರದಿಯಿಂದ ಬಹಿರಂಗವಾಗಿದೆ. (ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮದರಸಾಗಳು ನಡೆಸಲಾಗುವುದೆಂದರೆ ಪೊಲೀಸರಿಗೆ ಲಚ್ಚಸ್ಪದವಾಗಿದೆ ! – ಸಂಪಾದಕರು)

ಮದರಸಗಳಲ್ಲಿ ಲೈಂಗಿಕ ಶೋಷಣೆ ಮತ್ತು ಮಕ್ಕಳ ಅಧಿಕಾರದ ಉಲ್ಲಂಘನೆ ನಡೆಯುತ್ತಿರುವುದು ಬೆಳಕಿಗೆ ಬಂದ ನಂತರ ರಾಜ್ಯ ಸರಕಾರದಿಂದ ಆಗಸ್ಟ್ ೨೦೨೨ ರಿಂದ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಕೈಗೆತ್ತಿಕೊಳ್ಳಲಾಯಿತು. ಸಮಾಜವಾದಿ ಪಕ್ಷದಿಂದ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು.

ಸಂಪಾದಕೀಯ ನಿಲುವು

ಒಂದು ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮದರಸಾಗಳು ಇದ್ದರೇ ರಾಜ್ಯದಲ್ಲಿ ಮತ್ತು ಸಂಪೂರ್ಣ ದೇಶದಲ್ಲಿ ಎಷ್ಟು ಇರಬಹುದು, ಇದರ ಯೋಚನೆ ಮಾಡದೆ ಇರುವುದೇ ಒಳ್ಳೆಯದು !