ಯುರೋಪಿಯನ ಯೂನಿಯನ್‌ನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮ
ಲಕ್ಸೆಂಬರ್ಗ್ ಸಿಟಿ (ಲಕ್ಸೆಂಬರ್ಗ್) – ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಅನ್ನು ನಿಷೇಧಿಸಲಾಗಿದೆ. ಈ ಕುರಿತು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಅಂತಿಮ ತೀರ್ಪು ನೀಡಲಿದ್ದಾರೆ. ಮತ್ತೊಂದೆಡೆ, ಯುರೋಪಿಯನ ಯೂನಿಯನ್‌ನ ಸರ್ವೋಚ್ಚ ನ್ಯಾಯಾಲಯವೂ ನೀಡಿದ ಒಂದು ತೀರ್ಪಿನ ನಂತರ, ಯುರೋಪಿಯನ ಸಂಸ್ಥೆಗಳು ಹಿಜಾಬ್‌ಅನ್ನು ನಿಷೇಧಿಸುವ ಸಾಧ್ಯತೆಯಿದೆ. ‘ಕೋರ್ಟ್ ಆಫ್ ಜಸ್ಟಿಸ್ ಯುರೋಪಿಯನ್ ಯೂನಿಯನ್’ ನ್ಯಾಯಾಲಯವು ಒಂದು ಪ್ರಕರಣದಲ್ಲಿ ತೀರ್ಪು ನೀಡುತ್ತಾ “ತಲೆಯ ಮೇಲಿನ ವಸ್ತ್ರಕ್ಕೆ ನಿಷೇಧ, ಇದು ಯುರೋಪಿಯನ್ ಯೂನಿಯನ್‌ನ ಕಾನೂನಿನ ಉಲ್ಲಂಘನೆಯಲ್ಲ. ಈ ತೀರ್ಪು ಧರ್ಮದ ಆಧಾರದ ಮೇಲೆ ಕಾರ್ಮಿಕರಲ್ಲಿ ಭೇದಭಾವ ಮಾಡಲಾರದು; ಆದರೆ ಈ ರೀತಿ ಹಿಜಾಬ್ ಅನ್ನು ನಿಷೇಧಿಸುವುದು ಪರೋಕ್ಷ ಭೇದಭಾವವಾಗಿದೆಯೋ ಇಲ್ಲವೋ ಎಂಬುದನ್ನು ಬೆಲ್ಜಿಯಮ್ ನ್ಯಾಯಾಲಯವು ನಿರ್ಧರಿಸಬೇಕು.” ಕಾರ್ಮಿಕರಲ್ಲಿ ತಟಸ್ಥತೆಯ ಪ್ರತಿಮೆಯನ್ನು ಕಾಪಾಡಿಕೊಳ್ಳಲು ಬಯಸುವುದಾದರೆ ಕಂಪನಿಗಳು ‘ಹೆಡ್ ಸ್ಕಾರ್ಫ್ ಅನ್ನು (ತಲೆಯ ಮೇಲೆ ಕಟ್ಟುವ ವಸ್ತ್ರವನ್ನು) ನಿಷೇಧಿಸಬಹುದು’, ಎಂದೂ ನ್ಯಾಯಾಲಯವು ಹೇಳಿದೆ.
ಮುಸಲ್ಮಾನ ಮಹಿಳೆಯೊಬ್ಬರು ಬೆಲ್ಜಿಯಮ್‌ನ ಸಂಸ್ಥೆಯೊಂದರಲ್ಲಿ ೬ ವಾರಗಳ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಂಬಂಧಪಟ್ಟ ಸಂಸ್ಥೆಯು, ‘ಕೆಲಸ ಮಾಡುವಾಗ ಹಿಜಾಬ್ ಧರಿಸುವಂತಿಲ್ಲ’ ಎಂದು ಹೇಳಿತು. ತದನಂತರ ಈ ಪ್ರಕರಣವು ಬೆಲ್ಜಿಯಮ್ ನ ನ್ಯಾಯಾಲಕ್ಕೆ ತಲುಪಿತು. ನ್ಯಾಯಾಲಯದಲ್ಲಿ ತನ್ನ ಪರ ವಾದವನ್ನು ಮಂಡಿಸುತ್ತಾ “ಸಂಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ನಿಯಮಗಳಿವೆ. ಸಂಸ್ಥೆಯಲ್ಲಿ ಟೋಪಿಗಳು ಅಥವಾ ‘ಸ್ಕಾರ್ಫ್’ಗಳನ್ನು ಧರಿಸಲು ಅನುಮತಿಯಿಲ್ಲ. ಇದರ ಪ್ರಕಾರ ತಲೆಯ ಮೇಲೆ ಯಾವುದೇ ವಿಧದ ವಸ್ತ್ರವನ್ನು ಧರಿಸಲು ಅನುಮತಿಯಿಲ್ಲ.” ಎಂದು ಹೇಳಿತು. ಬಳಿಕ ಬೆಲ್ಜಿಯಮ್ ನ್ಯಾಯಾಲಯವು ಈ ಪ್ರಕರಣವನ್ನು ಯುರೋಪಿಯನ್ ಯೂನಿಯನ್‌ಗೆ ಕಳುಹಿಸಿತು.