‘ಮನೆಗೆ ಊಟ ತಲುಪಿಸಲು ನಾವೇನು ‘ಝೋಮ್ಯಾಟೋ’ನವರು ಆಗಿದ್ದೇವೆಯೆ ?’ (ಅಂತೆ)

ಜಿಲ್ಲಾಧಿಕಾರಿ ಸೆಮ್ಯುಎಲ್ ಪಾಲ್ ಇವರಿಂದ ನೆರೆ ಪೀಡಿತರ ಅಪಹಾಸ್ಯ

ಲಕ್ಷ್ಮಣಪುರಿ – ಉತ್ತರ ಪ್ರದೇಶದಲ್ಲಿನ ಘಾಗರಾ ನದಿಗೆ ನೆರೆ ಬಂದಿರುವುದರಿಂದ ಅಂಬೇಡ್ಕರ್ ನಗರದಲ್ಲಿನ ಸ್ಥಳೀಯರು ಭೀಕರ ತೊಂದರೆ ಎದುರಿಸಿದ್ದಾರೆ. ಇಂತಹದರಲ್ಲಿ ಅಲ್ಲಿಯ ಜಿಲ್ಲಾಧಿಕಾರಿ ಸೆಮ್ಯುಎಲ್ ಪಾಲ್ ಇವರ ಒಂದು ವಿಡಿಯೋ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಅವರ ಹತ್ತಿರ ಕೆಲವು ನೆರೆ ಸಂತ್ರಸ್ತರು ಸಹಾಯ ಕೇಳುವುದು ಕಾಣುತ್ತಿದೆ. ಆ ಸಮಯದಲ್ಲಿ ಪಾಲ್ ಇವರು ‘ಮನೆ ಮನೆಗೆ ಊಟ ತಲುಪಿಸಲು ನಾವೇನು ‘ಝೋಮ್ಯಾಟೋ’ದವರಾಗಿದ್ದೇವೆಯೆ ? ಎಂಬ ಪ್ರಶ್ನೆ ಕೇಳಿ ಅಲ್ಲಿಂದ ಹೊರ ಕಳುಹಿಸಿದ್ದಾರೆ. (ಜನರು ಆಹಾರ ಪದಾರ್ಥದ ಆನ್‌ಲೈನ್ ಬೇಡಿಕೆ ನೀಡಿದರೆ ಝೋಮ್ಯಾಟೋ ಹೆಸರಿನ ಕಂಪನಿಯು ನಾವು ಕೊಟ್ಟಿರುವ ವಿಳಾಸಕ್ಕೆ ಅದನ್ನು ತಲುಪಿಸುತ್ತದೆ.)

ಸಂಪಾದಕೀಯ ನಿಲುವು

ಇಂತಹ ಕನಿಕರ ಇಲ್ಲದ ಜಿಲ್ಲಾಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು, ಹೀಗೆ ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?