ಕೇಂದ್ರ ಸರಕಾರದಿಂದ ಕಳೆದ ೮ ವರ್ಷದಲ್ಲಿ ರಾಮಸೇತುವೆಗೆ ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವ ಬಗ್ಗೆ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಲಾಗಿಲ್ಲ !

ಡಾ. ಸುಬ್ರಹ್ಮಣ್ಯ ಸ್ವಾಮಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದನೆ

ಡಾ. ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ – ಕಳೆದ ೮ ವರ್ಷಗಳಿಂದ ರಾಮಸೇತುವೆಗೆ ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವ ಬಗ್ಗೆ ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಪ್ರಸ್ತುತ ಪಡಿಸಿಲ್ಲ. ಆದ್ದರಿಂದ ಈಗ ನ್ಯಾಯಾಲಯದಿಂದ ಸರಕಾರಕ್ಕೆ ರಾಮ ಸೇತುವೆ ‘ರಾಷ್ಟ್ರೀಯ ಸ್ಮಾರಕ ’ಎಂದು ಘೋಷಿಸುವ ಆದೇಶ ನೀಡಲು ಹೇಳಬೇಕೆಂದು ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯ ಸ್ವಾಮಿ ಇವರು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಸಂದರ್ಭದಲ್ಲಿ ನಡೆದಿರುವ ಅರ್ಜಿಯ ಮೇಲಿನ ವಿಚಾರಣೆಯ ಸಮಯದಲ್ಲಿ ಹೇಳಿದರು. ಈ ಬಗ್ಗೆ ನ್ಯಾಯಾಲಯವು ಸರಕಾರಕ್ಕೆ ಈ ಸಂದರ್ಭದಲ್ಲಿ ಉತ್ತರ ನೀಡುವಂತೆ ಆದೇಶ ನೀಡಿದೆ, ಹಾಗೂ ಅದರ ಪ್ರತಿ ಡಾ. ಸ್ವಾಮಿ ಇವರಿಗೆ ಕೂಡ ನೀಡಲು ಹೇಳಲಾಗಿದೆ.