ಬೀದರ್‌ನಲ್ಲಿ (ಕರ್ನಾಟಕ) ೫೬೨ ವರ್ಷಗಳ ಪ್ರಾಚೀನ ಮದರಸಾದಲ್ಲಿ ಜನಸಮೂಹದಿಂದ ಪೂಜೆ

  • ಮದರಸಾದ ಹತ್ತಿರ ವರ್ಷಕ್ಕೆ ಎರಡು ಬಾರಿ ಪೂಜೆ ನಡೆಯುತ್ತದೆ !
  • ಮುಸಲ್ಮಾನರಿಂದ ವಿರೋಧ

ಬೀದರ್ – ೫೬೨ ವರ್ಷಗಳಷ್ಟು ಪ್ರಾಚೀನ ಮಹಮೂದ್ ಗವಾನ್ ಮದರಸಾದಲ್ಲಿ ಒಂದು ಗುಂಪು ಪೂಜೆಯನ್ನು ಮಾಡಿದ ಘಟನೆಯು ಅಕ್ಟೋಬರ್ ೬ ರ ರಾತ್ರಿ ನಡೆಯಿತು. ಈ ಘಟನೆಯ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಸಲ್ಮಾನ ಸಂಘಟನೆಗಳು ಈ ಘಟನೆಯನ್ನು ಖಂಡಿಸಿವೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಈ ಮದರಸಾವನ್ನು ೧೪೬೦ ರಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ಇದು ಭಾರತೀಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಪೂಜೆ ಸಲ್ಲಿಸಲು ಅನುಮತಿಯಿರುವಾಗ ಆ ಸ್ಥಳದ ಬದಲಾಗಿ ಮದರಸಾದಲ್ಲಿ ಪೂಜೆ ಸಲ್ಲಿಸಲಾಗಿರುವ ಕಾರಣಕ್ಕೆ ಅದನ್ನು ವಿರೋಧಿಸಲಾಗುತ್ತಿದೆ. ಪೂಜೆಯ ಘಟನೆಯ ನಂತರ ಪೊಲೀಸರು ೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದುವರೆಗೆ ೪ ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ೫ ಜನರಿಗಾಗಿ ಶೋಧ ನಡೆಯುತ್ತಿದೆ.

೧. ಪೊಲೀಸ್ ಅಧೀಕ್ಷಕ ನೀಡಿರುವ ಮಾಹಿತಿ ಪ್ರಕಾರ ನಿಜಾಮರ ಕಾಲದಿಂದಲೂ ದಸರಾ ಪೂಜೆ ಮಾಡುವ ಸಂಪ್ರದಾಯವಿದೆ. ಮದರಸಾ ಪರಿಸರದಲ್ಲಿ ಒಂದು ಮಿನಾರ್ ಇದೆ. ವರ್ಷಕ್ಕೆ ಎರಡು ಬಾರಿ ೨ ರಿಂದ ೪ ಜನರು ಪೂಜೆಗೆ ಒಳಗೆ ಹೋಗುತ್ತಾರೆ; ಆದರೆ ಈ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಗೆ ಹೋಗಿದ್ದರು. ಯಾರೂ ಅಕ್ರಮವಾಗಿ ಪ್ರವೇಶ ದ್ವಾರ ಮುರಿದು ಒಳಗೆ ಪ್ರವೇಶಿಸಿಲ್ಲ. ನಾವು ಅಪರಾಧವನ್ನು ದಾಖಲಿಸಿದ್ದೇವೆ ಎಂದು ಹೇಳಿದರು.

೨. ಪೊಲೀಸ್ ಮಹಾನಿರೀಕ್ಷಕರು, ಹಿಂದೂಗಳು ಯಾವಾಗಲೂ ಮದರಸಾದ ಸಮೀಪದಲ್ಲಿರುವ ಮರದ ಬಳಿ ಹೋಗಿ ಪೂಜೆ ಮಾಡುತ್ತಾರೆ; ಆದರೆ ಈ ಬಾರಿ ಅಲ್ಲಿ ಮರ ಇರಲಿಲ್ಲ ಎಂದು ಹೇಳಿದರು. ಹಿಂದೂಗಳು ಅಲ್ಲಿಗೆ ಹೋಗಿದ್ದರೆ ಅದರಲ್ಲಿ ಹೊಸದೇನೂ ಇಲ್ಲ. ಪ್ರತಿ ವಿಜಯದಶಮಿಯಂದು ಅವರು ಅಲ್ಲಿಗೆ ಪೂಜೆಗೆ ಹೋಗುತ್ತಾರೆ ಎಂದು ಹೇಳಿದರು.

ಅಸದುದ್ದೀನ್ ಓವೈಸಿ ಟೀಕೆ

ಈ ಘಟನೆಯ ಬಗ್ಗೆ ಎಂ.ಐ.ಎಂ.ನ ಅಧ್ಯಕ್ಷರಾದ ಅಸದುದ್ದೀನ್ ಓವೈಸಿ ಅವರು ರಾಜ್ಯದಲ್ಲಿ ಆಡಳಿತಾರೂಢ ಭಾಜಪ ಸರಕಾರವನ್ನು ಟೀಕಿಸಿದ್ದಾರೆ. ಅವರು ಜನಸಮೂಹವನ್ನು ಈ ಘಟನೆಗೆ ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ದೇವಸ್ಥಾನದಲ್ಲಿ ಇಫ್ತಾರ್ ಔತಣ ಹಾಗೂ ನಮಾಜ್ ಮುಸಲ್ಮಾನರಿಗೆ ಹೇಗೆ ನಡೆಯುತ್ತದೆ ?
  • ‘ಗಂಗಾ-ಜಮುನಿ ತೆಹಜೀಬ್’ನ ರಾಗ ಹಾಡುತ್ತಾ ಹಿಂದೂಗಳಿಗೆ ಸದಾ ಉಪದೇಶ ಮಾಡುವವರು ಈಗ ಮುಸಲ್ಮಾನರ ವಿರುದ್ಧ ಚಕಾರ ಎತ್ತುವುದಿಲ್ಲ, ಎಂಬುದನ್ನು ಅರಿತುಕೊಳ್ಳಿರಿ!(ಹಿಂದೂ-ಮುಸಲ್ಮಾನರಲ್ಲಿ ತಥಾಕಥಿತ ಏಕತೆಯನ್ನು ನಿರ್ಮಿಸುವ ಸಂಸ್ಕೃತಿ ಎಂದರೆ ‘ಗಂಗಾ ಜಮುನಿ ತಹಜೀಬ’! ಅದನ್ನು ಅನುಸರಿಸಲು ಹಿಂದೂಗಳ ಮೇಲೆ ಮಾತ್ರ ಒತ್ತಡ ಹೇರಲಾಗುತ್ತದೆ.)