ಹರಿಯಾಣ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗೆ ವೇದ ಗಣಿತ ಕಲಿಸಲಿದೆ !

೪೬ ಸಾವಿರ ಪುಸ್ತಕದ ಮುದ್ರಣ !

ಭಿವಾನಿ (ಹರಿಯಾಣ) – ಹರಿಯಾಣ ಶಿಕ್ಷಣ ಮಂಡಳಿಯು ರಾಜ್ಯದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೇದ ಗಣಿತ ಕಲಿಸಲಿದೆ. ಅದಕ್ಕಾಗಿ ೧೮ ಲಕ್ಷ ರೂಪಾಯ ಖರ್ಚು ಮಾಡಿ ೪೬ ಸಾವಿರ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಹರಿಯಾಣ ವಿದ್ಯಾಲಯ ಶಿಕ್ಷಣ ಮಂಡಲಿಯ ಅಧ್ಯಕ್ಷ ಜಗಬೀರ ಸಿಂಹ ಇವರು, ಶಿಕ್ಷಣ ಮಂಡಳಿಯ ವೇದ ಗಣಿತದ ಪಠ್ಯಕ್ರಮಕ್ಕೆ ಹರಿಯಾಣ ವಿದ್ಯಾಲಯ ಶಿಕ್ಷಣ ನಿರ್ದೇಶನಾಲಯದಿಂದ ಇಲ್ಲಿಯವರೆಗೆ ಒಪ್ಪಿಗೆ ನೀಡಿಲ್ಲ, ಆದರೆ ಮಂಡಳಿಯ ಸಂಚಾಲಕ ಮಂಡಳಿಯು ಇದನ್ನು ಒಪ್ಪಿಗೆ ನೀಡಿದೆ, ಎಂದು ಹೇಳಿದರು. ಸಿಂಹ ಮಾತು ಮುಂದುವರೆಸಿ, ವೇದ ಗಣಿತದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗುವುದು ಎಂದು ಹೇಳಿದ್ದಾರೆ.

ವೇದ ಗಣಿತ ಕಲಿಯುವುದಕ್ಕಾಗಿ ರಾಜ್ಯದಲ್ಲಿ ೧೧೯ ಭಾಗದಲ್ಲಿನ ಪ್ರತಿಯೊಂದು ಭಾಗದ ಮೂರು ಶಾಲೆಗಳನ್ನು ಗುರುತಿಸಿದ್ದಾರೆ. ಇದರ ಅಡಿಯಲ್ಲಿ ೯ ನೇ ತರಗತಿಯಿಂದ ೧೨ ನೇ ತರಗತಿಯ ವರೆಗೆ ಕಲಿಯುವ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಕಲಿಸಲಾಗುವುದು. ಆದ್ದರಿಂದ ಅವರಿಗೆ ಗುಣಕಾರ, ಭಾಗಾಕಾರ ಹಾಗೂ ಅಂಕಗಳ ಎಣಿಕೆ ಮಾಡುವುದಕ್ಕೆ ಕಾಗದ ಲೇಖನಿಯ ಅವಶ್ಯಕತೆ ಇರುವುದಿಲ್ಲ, ಅವರು ಬೆರಳಿನಲ್ಲಿ ಎಣಿಕೆಯಲ್ಲೇ ಎಲ್ಲವನ್ನು ಅಂಕೆಯನ್ನು ಮಾಡಬಹುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಹರಿಯಾಣಾ ಶಿಕ್ಷಣ ಮಂಡಳಿಯ ಶ್ಲಾಘನೀಯ ನಿರ್ಣಯ ! ಇನ್ನು ಇತರ ಭಾಜಪ ಸರಕಾರ ಇರುವ ರಾಜ್ಯಗಳಲ್ಲಿಯೂ ಈ ರೀತಿ ವಿದ್ಯಾರ್ಥಿಗಳಿಗೆ ವೇದ ಎಂದರೆ ಪ್ರಾಚೀನ ಗಣಿತದ ಪಾಠ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !