‘ಆದಿಪುರುಷ’ ಚಲನಚಿತ್ರದ ಮೇಲೆ ನಿರ್ಬಂಧ ಹೇರಿ ! – ಶ್ರೀ ರಾಮ ದೇವಸ್ಥಾನದ ಪ್ರಮುಖ ಅರ್ಚಕರಾದ ಸತ್ಯೇಂದ್ರ ದಾಸರವರ ಮನವಿ

ಅಯೋಧ್ಯೆ (ಉತ್ತರಪ್ರದೇಶ) – ಓಮ ರಾವುತರ ನಿರ್ದೇಶನದಲ್ಲಿ ‘ಆದಿಪುರುಷ’ ಎಂಬ ರಾಮಾಯಣದ ಮೇಲೆ ಆಧಾರಿತ ಚಲನಚಿತ್ರದ ಟೀಜರ್‌ (ಚಲನಚಿತ್ರದ ಸಂಕ್ಷಿಪ್ತ ಭಾಗ) ಪ್ರದರ್ಶಿತವಾದ ನಂತರ ಅದರ ಮೇಲೆ ಟೀಕೆಗಳಾಗುತ್ತಿವೆ. ಈ ಬಗ್ಗೆ ಈಗ ಅಯೋಧ್ಯೆಯಲ್ಲಿನ ಶ್ರೀ ರಾಮಜನ್ಮಭೂಮಿಯ ಮೇಲೆ ಕಟ್ಟಲಾಗುವ ಶ್ರೀರಾಮ ದೇವಸ್ಥಾನದ ಪ್ರಮುಖ ಅರ್ಚಕರಾದ ಸತ್ಯೆಂದ್ರ ದಾಸರವರೂ ಟೀಕಿಸುತ್ತ ಈ ಚಲನಚಿತ್ರದ ಮೇಲೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿದ್ದಾರೆ.

೧. ಅರ್ಚಕರಾದ ಸತ್ಯೆಂದ್ರ ದಾಸರವರು ಮಾತನಾಡುತ್ತ, ‘ಪ್ರಭು ಶ್ರೀರಾಮ, ಹನುಮಾನ ಹಾಗೂ ರಾವಣ ಈ ಮೂವರನ್ನೂ ಈ ಚಲನಚಿತ್ರದಲ್ಲಿ ತಪ್ಪು ರೀತಿಯಲ್ಲಿ ಚಿತ್ರಿಸಲಾಗಿದೆ. ‘ಆದಿಪುರುಷ’ದ ನಿರ್ಮಾಣವಾಗುತ್ತಿರುವಾಗ ನಿರ್ದೇಶಕ ಓಮ ರಾವುತರವರು ಪ್ರಭು ಶ್ರೀರಾಮ ಮತ್ತು ಹನುಮಾನರನ್ನು ಮಹರ್ಷಿ ವಾಲ್ಮಿಕಿ ನಿರ್ಮಿಸಿದ ರಾಮಾಯಣ ಎಂಬ ಮಹಾಕಾವ್ಯದಲ್ಲಿ ನೀಡಲಾದ ಉಲ್ಲೇಖದಂತೆ ತೋರಿಸಿಲ್ಲ. ಇದು ಅವರ ಅಪಮಾನವಾಗಿದೆ. ಆದುದರಿಂದ ‘ಆದಿಪುರುಷ’ನ ಮೇಲೆ ನಿರ್ಬಂಧ ಹೇರಬೇಕು, ಎಂದು ನಾವು ಮನವಿ ಮಾಡುತ್ತೇವೆ, ಎಂದು ಹೇಳಿದರು.

೨. ಈ ಚಲನಚಿತ್ರವನ್ನು ಭೂಷಣ ಕುಮಾರರವರು ನಿರ್ಮಿಸಿದ್ದಾರೆ. ಇದರ ಮೇಲೆ ೫೦೦ ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಗಿದೆ. ಈ ಚಲನಚಿತ್ರವನ್ನು ಹಿಂದಿ ಹಾಗೂ ತೆಲುಗು ಹೀಗೆ ೨ ಭಾಷೆಗಳಲ್ಲಿ ಪ್ರದರ್ಶಿಸಲಾಗಿದೆ. ಹಾಗೆಯೇ ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿಯೂ ಅನುವಾದ ಮಾಡಿ ಪ್ರದರ್ಶಿಸಲಾಗುವುದು. ಮುಂದಿನ ವರ್ಷ ಜನವರಿ ೧೨, ೨೦೨೩ರಂದು ಪ್ರದರ್ಶಿತವಾಗಲಿದೆ.