ಸೂರತ್ (ಗುಜರಾತ್) – ಇಲ್ಲಿ ಗರಬಾ ಮಂಟಪದಲ್ಲಿ ಮುಸಲ್ಮಾನ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದರಿಂದ ಜರಂಗದಳದ ಕಾರ್ಯಕರ್ತರು ಅಲ್ಲಿ ಪ್ರವೇಶಿಸಿ ಭದ್ರತಾ ಸಿಬ್ಬಂದಿಯನ್ನು ಲಾಠಿಯಿಂದ ಥಳಿಸಿದ್ದಾರೆ. ಇದರಲ್ಲಿ ೨ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ವಿಐಪಿ ರಸ್ತೆಯ ಠಾಕೋರಜಿ ವಾಡಿಯಲ್ಲಿ ಅಕ್ಟೋಬರ್ ೩ರ ರಾತ್ರಿ ನಡೆಯಿತು. ಕೆಲವು ಭದ್ರತಾ ಸಿಬ್ಬಂದಿ ಸ್ಥಳದಿಂದ ಓಡಿ ಹೋದ ಕಾರಣ ಬಚಾವಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ. ಇದೀಗ ಗರಬಾ ಕಾರ್ಯಕ್ರಮಕ್ಕೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕಳುಹಿಸಲಾಗಿದೆ.
೧. ಭದ್ರತಾ ಸಿಬ್ಬಂದಿ ಅಹಮದ ಖಾನ್ ಇವರು, ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಸೆಕ್ಯೂರಿಟಿ ಗಾರ್ಡ್‌ಗಳು ಇದ್ದರು ಎಂದು ಹೇಳಿದ್ದಾರೆ. ಬಜರಂಗದಳದ ಸದಸ್ಯರು ನಾಲ್ಕೂ ಕಡೆಯ ಪರದೆಗಳನ್ನು ಹರಿದು ಒಳಗೆ ಪ್ರವೇಶಿಸಿದರು. ಬಜರಂಗದಳ ಕಾರ್ಯಕರ್ತರು ಮರದ ಕೋಲುಗಳನ್ನು ತಂದಿದ್ದರು. ಮೊದಲ ಬಾರಿಗೆ, ಅವರು ಒಬ್ಬ ಭದ್ರತಾ ಸಿಬ್ಬಂದಿಯ ಹೆಸರನ್ನು ಕೇಳಿದರು. ಆತನು ಮುಸಲ್ಮಾನ ಎಂದು ತಿಳಿದ ಬಳಿಕ ಅವನನ್ನು ಹೊರಗೆ ಕರೆದೊಯ್ದು ಥಳಿಸಿದರು. ಈ ವೇಳೆ ಒಟ್ಟು ೫ ಮುಸ್ಲಿಂ ಭದ್ರತಾ ಸಿಬ್ಬಂದಿಯನ್ನು ಥಳಿಸಲಾಯಿತು. ಈ ಪೈಕಿ ೩ ಮಂದಿ ಸ್ಥಳದಿಂದ ಓಡಿ ಹೋದರು.
೨. ದಕ್ಷಿಣ ಗುಜರಾತ್ ಬಜರಂಗದಳದ ಅಧ್ಯಕ್ಷ ದೇವಪ್ರಸಾದ್ ದುಬೇ ಇವರು, ನಾವು ಈ ಮೊದಲೇ ಮುಸಲ್ಮಾನ ಯುವಕರನ್ನು ಭದ್ರತಾ ಸಿಬ್ಬಂದಿಯಾಗಿ ನೇಮಿಸದಂತೆ ಕಾರ್ಯಕ್ರಮ ಆಯೋಜಕರಿಗೆ ಎಚ್ಚರಿಕೆ ನೀಡಿದ್ದೆವು. ಆದರೂ ಠಾಕೋರಜಿ ವಾಡಿಯಲ್ಲಿನ ಗರಬಾ ಕಾರ್ಯಕ್ರಮದ ಆಯೋಜಕರು ಮುಸಲ್ಮಾನ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದರು ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಹಿಂದೂಗಳ ಧಾರ್ಮಿಕ ಕಾರ್ಯಕ್ರಮದ ಸ್ಥಳದಲ್ಲಿ ಮುಸಲ್ಮಾನ ಭದ್ರತಾ ಸಿಬ್ಬಂದಿ ಏಕೆ ? ಹಿಂದೂಗಳೇ ಆಗಿರುವ ಆಯೋಜಕರಿಗೆ ಇದು ಹೇಗೆ ತಿಳಿಯುವುದಿಲ್ಲ ? |