ನಮಗೆ ಮರಳಿ ವಿಭಜನೆಯ ಹಾದಿಯಲ್ಲಿ ಹೋಗುವುದು ಬೇಕಾಗಿಲ್ಲ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಗಪೂರನಲ್ಲಿ ಜರುಗಿದ ದಸರಾ ಉತ್ಸವ !

ನಾಗಪೂರ – ‘ನಾವು ಪ್ರತ್ಯೇಕವಾಗಿ ಕಾಣಿಸುತ್ತೇವೆ, ನಾವು ಒಬ್ಬರಿಗೊಬ್ಬರಿಗೆ ಬೇಕಾದವರಿಲ್ಲ. ನಮಗೆ ನಮ್ಮ ಪ್ರತ್ಯೇಕತೆ ಬೇಕು’, ಎನ್ನುವುದು ತಪ್ಪು ವಿಚಾರವಾಗಿದೆ. ಈ ತಪ್ಪು ವಿಚಾರಗಳ ದುಃಖದಾಯಕ ಪರಿಣಾಮವನ್ನು ನಾವು ನೋಡಿದ್ದೇವೆ. ಇಂತಹ ವಿಚಾರಗಳಿಂದಾಗಿ ಸಹೋದರರು ದೂರವಾದರು, ಭೂಮಿ ಹಂಚಿಕೆಯಾಯಿತು, ಹಾಗೆಯೇ ಧರ್ಮ ಮತ್ತು ಸಂಸ್ಥೆ ಕೊನೆಗೊಂಡಿತು. ನಮಗೆ ಮರಳಿ ಆ(ವಿಭಜನೆಯ) ರಸ್ತೆಯಲ್ಲಿ ಹೋಗವುದು ಬೇಕಾಗಿಲ್ಲ. ನಮಗೆ ಒಗ್ಗಟ್ಟಿನಿಂದ ಇರಬೇಕಾಗಿದೆಯೆಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿ ಪ್ರತಿಪಾದಿಸಿದರು. ಅಕ್ಟೋಬರ ೫ ರಂದು ಜರುಗಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ ಗಡಕರಿ ಮತ್ತು ಉಪಮುಖ್ಯಮಂತ್ರಿ ದೇವೆಂದ್ರ ಫಡಣವೀಸ ಉಪಸ್ಥಿತರಿದ್ದರು. ‘ಪರಮವೈಭವಿ ಭಾರತ ಆಗುವುದು’, ಈ ಸಾಂಘಿಕ ಗೀತೆಯಾದ ಬಳಿಕ ಶಾರೀರಿಕ ಕವಾಯತ ಮತ್ತು ಪ್ರಾತ್ಯಕ್ಷಿಕೆಯ ಬಳಿಕ ಕಾರ್ಯಕ್ರಮ ಪ್ರಾರಂಭವಾಯಿತು.

ಪ.ಪೂ. ಡಾ. ಮೋಹನಜಿ ಭಾಗವತ ತಮ್ಮ ಮಾನತ್ತು ಮುಂದುವರೆಸುತ್ತಾ,

೧. ನಮಗೆ ಒಟ್ಟಿಗೆ ಇರಬೇಕಾಗಿದ್ದರೆ, ಮೊದಲು ಭಾರತ ಒಂದಾಗಬೇಕಾಗುವುದು. ನಾವು ಭಾರತೀಯ ಪೂರ್ವಜರು ಮತ್ತು ಭಾರತೀಯ ಸಂಸ್ಕೃತಿಯ ವಂಶಜರಾಗಿದ್ದೇವೆ. ಸಮಾಜ ಮತ್ತು ರಾಷ್ಟ್ರೀಯತೆಯ ಸಂಬಂಧದಿಂದ ನಾವು ಒಂದೇ ಆಗಿದ್ದೇವೆ. ಇದೇ ನಮಗೆ ತಾರಕ ಮಂತ್ರವಾಗಿದೆ.

೨. ಭಾರತಕ್ಕೆ ಸ್ವಾತಂತ್ರ್ಯಸಿಕ್ಕಿತು; ಆದರೆ ತದನಂತರ ಪಾಕಿಸ್ತಾನ ನಿರ್ಮಾಣವಾಯಿತು. ಇದರಿಂದ ಹಿಂದೂ-ಮುಸ್ಲಿಂರಲ್ಲಿ ಶಾಶ್ವತ ರಾಜಕೀಯ ಅಂತರ ನಿರ್ಮಾಣವಾಯಿತು. ಇದು ತಪ್ಪಾಗಿದೆ.

೩. ನಾವು ಹಿಂದೂ ಸಂಘಟನೆ ಮಾಡುತ್ತೇವೆ; ಆದರೆ ನಾವು ಯಾರನ್ನೂ ವಿರೋಧಿಸುವುದಿಲ್ಲ. ಜನರು ‘ಭಾರತೀಯ’, ‘ಇಂಡಿಕ’ ಇತ್ಯಾದಿ ಶಬ್ದಪ್ರಯೋಗ ಮಾಡುತ್ತಾರೆ; ಆದರೆ ನಾವು ನಮ್ಮ ಸ್ಪಷ್ಟತೆಗಾಗಿ ಹಿಂದೂ ಶಬ್ದವನ್ನು ಉಪಯೋಗಿಸೋಣ, ಸಾಧನೆ, ಶುಚಿತ್ವ ಮತ್ತು ತಪಸ್ಸಿನ ಆಧಾರದಲ್ಲಿ ಸಂಘದ ಸಂಘಟನೆ ನಿರ್ಮಾಣವಾಗಿದೆ. ಇದರಿಂದ ಸಂಘ ಶಕ್ತಿ ಯಾವತ್ತೂ ತೊಂದರೆದಾಯಕವಾಗುವುದಿಲ್ಲ.

೪. ಜನಸಂಖ್ಯೆಯಲ್ಲಿ ಪ್ರಮಾಣದ ಸಂತುಲನೆ ಇರಬೇಕು. ಜನಸಂಖ್ಯೆಯ ನಿಯಮಗಳು ಎಲ್ಲರಿಗೂ ಸಮಾನವಾಗಿ ಜಾರಿಗೊಳ್ಳಬೇಕು. ೫೦ ವರ್ಷಗಳ ಬಳಿಕ ನಾವು ಎಷ್ಟು ಜನರಿಗೆ ಊಟ ಕೊಡಬಲ್ಲೆವು ಮತ್ತು ಅವರ ಜವಾಬ್ದಾರಿ ತೆಗೆದುಕೊಳ್ಳಬಲ್ಲೆವು ಎನ್ನುವ ಸಮಗ್ರ ವಿಚಾರವನ್ನು ಮಾಡಿ ನಿಯಮಗಳನ್ನು ರಚಿಸಬೇಕಾಗುತ್ತದೆ.

೫. ನಾವು ಮಕ್ಕಳಿಗೆ ಆಂಗ್ಲ ಶಾಲೆಯಲ್ಲಿ ಕಲಿಸುತ್ತೇವೆ. ಮನೆಯ ಹೆಸರು ಮತ್ತು ಮಂಗಲಕಾರ್ಯಗಳ ಆಮಂತ್ರಣ ಪತ್ರಿಕೆಗಳನ್ನು ಕೂಡ ಆಂಗ್ಲ ಭಾಷೆಯಲ್ಲಿಯೇ ಕಳಿಸುತ್ತೇವೆ. ‘ಕೆರಿಯರ್’ಗಾಗಿ ಆಂಗ್ಲ ಭಾಷೆ ಆವಶ್ಯಕವಾಗಿದೆ’, ಎಂದು ದೃಡವಾದ ತಿಳುವಳಿಕೆಯಾಗಿದೆ; ಆದರೆ ಹಾಗಿಲ್ಲ. ನಾವು ಮಾತೃಭಾಷೆಯ ವಿಷಯ ಮಾಡುತ್ತೇವೆ; ಆದರೆ ಎಲ್ಲಿಯವರೆಗೆ ನಮ್ಮಿಂದ ಯಾವುದೇ ವಿಷಯದ ಪ್ರಾರಂಭವಾಗುವುದಿಲ್ಲವೋ, ಅಲ್ಲಿಯವರೆಗೆ ಏನೂ ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ನಿಯಮಗಳಲ್ಲಿ ಮಾತೃಭಾಷೆಯಿಂದ ಶಿಕ್ಷಣ ನೀಡುವಂತೆ ಕ್ರಮ ವಹಿಸಲಾಗಿದೆ.; ಆದರೆ ಎಲ್ಲಿಯವರೆಗೆ ಸಮಾಜದ ಸಹಕಾರ ಸಿಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ವಿಷಯ ಯಶಸ್ವಿಯಾಗುವುದಿಲ್ಲ.

೬. ಅನ್ಯಾಯ, ಅಸತ್ಯ, ಅತ್ಯಾಚಾರ ಮತ್ತು ಭಯೋತ್ಪಾದಕತೆಯ ವಿರುದ್ಧ ಸಮಾಜವು ಒಂದಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.