‘ಆದಿಪುರುಷ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ಭಾಗವನ್ನು ತೆಗೆಯದಿದ್ದರೆ, ಕಾನೂನುಬದ್ಧ ಕಾರ್ಯಾಚರಣೆ ಮಾಡುವ ಬಗ್ಗೆ ವಿಚಾರ ಮಾಡಲಾಗುವುದು !

  • ಭಾಜಪ ಸರಕಾರದ ಗೃಹಮಂತ್ರಿ ನರೋತ್ತಮ ಮಿಶ್ರಾರವರ ಎಚ್ಚರಿಕೆ !

  • ಹಿಂದೂ ಮಹಾಸಭಾ ಹಾಗೂ ಭಾಜಪದಿಂದಲೂ ವಿರೋಧ !

ಭೋಪಾಲ (ಮಧ್ಯಪ್ರದೇಶ) – ‘ಆದಿಪುರುಷ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯದಿದ್ದರೆ, ಚಲನಚಿತ್ರದ ಮೇಲೆ ಕಾನೂನುಬದ್ಧ ಕಾರ್ಯಾಚರಣೆ ಮಾಡುವ ಬಗ್ಗೆ ವಿಚಾರ ಮಾಡಲಾಗುವುದು. ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರಾರವರು ಎಚ್ಚರಿಕೆ ನೀಡಿದ್ದಾರೆ. ‘ನಾನು ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಓಮ ರಾವುತರವರಿಗೆ ಸ್ವತಃ ಪತ್ರ ಬರೆದು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಹೇಳಲಿದ್ದೇನೆ’ ಎಂದೂ ಮಿಶ್ರಾರವರು ಹೇಳಿದರು. ಆದಿಪುರುಷ ಚಲನಚಿತ್ರದ ಟೀಜರ (ಚಲನಚಿತ್ರದ ಅತ್ಯಂತ ಸಂಕ್ಷಿಪ್ತ ಭಾಗ) ಪ್ರಕಟಿಸಲಾಗಿದೆ. ಇದರಲ್ಲಿ ರಾವಣನ ವೇಷಭೂಷಣವನ್ನು ನೋಡಿ ಅವನು ಮೊಘಲ ಶಾಸಕನಂತೆ ಕಾಣುತ್ತಿರುವುದರಿಂದ ಸಾಮಾಜಿಕ ಮಾಧ್ಯಮಗಳಿಂದ ಈ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ಟೀಕೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಿಶ್ರಾರವರು ಮೇಲಿನ ಎಚ್ಚರಿಕೆಯನ್ನು ನೀಡಿದ್ದಾರೆ.

೧. ಗೃಹಮಂತ್ರಿ ನರೋತ್ತಮ ಮಿಶ್ರಾರವರು, ‘ನಾನು ಚಲನಚಿತ್ರದ ಟೀಜರ ನೋಡಿದ್ದೇನೆ. ಚಲನಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ನಮ್ಮ ಶ್ರದ್ಧಾಸ್ಥಾನಗಳನ್ನು ಅಯೋಗ್ಯವಾಗಿ ತೋರಿಸಲಾಗಿದೆ. ಶ್ರೀ ಹನುಮಂತನ ಬಟ್ಟೆಗಳು ಚರ್ಮದ್ದಾಗಿರುವುದಾಗಿ ತೋರಿಸಲಾಗಿದೆ. ಪ್ರತ್ಯಕ್ಷದಲ್ಲಿ ಹನುಮಂತನ ವರ್ಣನೆಯು ಬೇರೆಯೇ ಇದೆ. ಅದರಲ್ಲಿ ಅವನ ವೇಷಭೂಷಣವನ್ನು ಹೇಳಲಾಗಿದೆ. ಈ ರೀತಿಯಲ್ಲಿ ಮಾಡಲಾದ ಬದಲಾವಣೆಗಳು ನಮ್ಮ ಶ್ರದ್ಧೆಯ ಮೇಲಿನ ಆಘಾತಗಳೇ ಆಗಿವೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹದ್ದಾಗಿವೆ.

೨. ಹಿಂದೂ ಮಹಾಸಭೆಯ ಅಧ್ಯಕ್ಷರಾದ ಚಕ್ರಪಾಣಿ ಮಹಾರಾಜರವರು ಮಾತನಾಡುತ್ತ ನಮ್ಮ ಧಾರ್ಮಿಕ ಆದರ್ಶಗಳ ಚರಿತ್ರೆಯಲ್ಲಿ ಮಾಡಲಾದ ಬದಲಾವಣೆಗಳನ್ನು ಸ್ವೀಕರಿಸಲು ಆಗುವುದಿಲ್ಲ’ ಎಂದು ಹೇಳಿದರು.

೩. ಭಾಜಪದ ವಕ್ತಾರರಾದ ಮಾಲವಿಕಾರವರು ಟೀಕಿಸುತ್ತ, ಆದಿಪುರುಷ ಚಲನಚಿತ್ರದಲ್ಲಿ ರಾಮಾಯಣವನ್ನ ತಪ್ಪು ರೀತಿಯಲ್ಲಿ ತೋರಿಸಲಾಗುತ್ತಿದೆ. ಚಲನಚಿತ್ರದಲ್ಲಿ ರಾವಣನನ್ನು ಅಯೋಗ್ಯವಾಗಿ ತೋರಿಸಲಾಗಿದೆ, ಎಂದು ಹೇಳಿದರು.