ಮುಂಬರುವ ‘ಆದಿಪುರುಷ’ ಚಲನಚಿತ್ರದಲ್ಲಿನ ರಾವಣನನ್ನು ಮೊಘಲ ಆಕ್ರಮಣಕಾರನಂತೆ ತೋರಿಸಲಾಗಿದೆ ! – ಸಾಮಾಜಿಕ ಮಾಧ್ಯಮಗಳಿಂದ ಟೀಕೆ

‘ಆದಿಪುರುಷ’ ಚಲನಚಿತ್ರದಲ್ಲಿನ ರಾವಣನ ಪಾತ್ರ

ನವದೆಹಲಿ – ಮುಂಬರುವ ‘ಆದಿಪುರುಷ’ ಈ ಚಲನಚಿತ್ರದ ‘ಟೀಜರ’ (ಅತ್ಯಂತ ಸಂಕ್ಷಿಪ್ತ ಭಾಗ)ವನ್ನು ಪ್ರಕಟಿಸಲಾಗಿದೆ. ಈ ಚಲನಚಿತ್ರವು ರಾಮಾಯಣದ ಮೇಲೆ ಆಧಾರಿತವಾಗಿದೆ. ಇದರಿಂದಾಗಿ ಇದರಲ್ಲಿ ತೋರಿಸಲಾಗಿರುವ ರಾವಣನ ಪಾತ್ರವು ಮುಸಲ್ಮಾನ ಆಕ್ರಮಣಕಾರನಂತೆ ತೋರಿಸಲಾಗಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಲಾಗುತ್ತಿದೆ. ನಟ ಸೈಫ ಅಲೀ ಖಾನರು ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಿಂದ ಮಾಡಲಾಗುತ್ತಿರುವ ಟೀಕೆ

೧. ರಾವಣನು ಶಿವಭಕ್ತನಾಗಿದ್ದನು. ಅವನು ಶಿವತಾಂಡವವನ್ನು ರಚಿಸಿದ್ದನು. ಅವನಿಗೆ ವೇದಗಳ ಜ್ಞಾನವಿತ್ತು. ಹೀಗಿರುವಾಗ ಈ ಚಲನಚಿತ್ರದಲ್ಲಿರುವ ರಾವಣನು ಭಯಾನಕ ಹಾಗೂ ಮೊಘಲ ಶಾಸಕನಂತೆ ಕಾಣಿಸುತ್ತಿದ್ದಾನೆ.
೨. ಕೆಲವು ಸಾಮಾಜಿಕ ಮಾಧ್ಯಮಗಳಿಂದ ಬಳಕೆದಾರರು ರಾವಣನ ವೇಷಭೂಷಣವನ್ನು ನೋಡಿ ಅದಕ್ಕೆ ಔರಂಗಜೇಬ, ತೈಮೂರ, ಉಲ್ಲಾಉದ್ದೀನ ಖಿಲಜೀ, ಬಾಬರ, ಮಹಂಮದ ಗಜನೀ ಹಾಗೂ ಇತರ ಮುಸಲ್ಮಾನ ಆಕ್ರಮಣಕಾರರ ಹೆಸರು ನೀಡಿದ್ದಾರೆ.
೩. ಬಳಕೆದಾರರು ರಾವಣನು ಓರ್ವ ಬ್ರಾಹ್ಮಣನಾಗಿದ್ದನು, ಹೀಗಿರುವಾಗ ಈ ಚಲನಚಿತ್ರದಲ್ಲಿ ರಾವಣನ ಕೂದಲು ಆಧುನಿಕ ಪದ್ಧತಿಯಂತೆ ಹಾಗೂ ಉದ್ದವಾದ ಗಡ್ಡವನ್ನು ತೋರಿಸಲಾಗಿದೆ, ಎಂದು ಹೇಳಿದ್ದಾರೆ.
೪. ಒಬ್ಬರು ಹೇಳುವಂತೆ, ರಾವಣನು ಹಣೆಯ ಮೇಲೆ ತಿಲಕವನ್ನು ಧರಿಸುತ್ತಿದ್ದನು; ಆದರೆ ಈ ರಾವಣನನ್ನು ನೋಡಿ ಅವನು ಮತಾಂತರ ಮಾಡಿಕೊಂಡು ಇಸ್ಲಾಂ ಸ್ವೀಕರಿಸಿರುವಂತೆ, ಅನಿಸುತ್ತದೆ.
೫. ಮಹಾದೇವ ಮುಂಡೆಯವರು ಮಾತನಾಡುತ್ತ, ‘ಈ ಚಲನಚಿತ್ರವು ರಾಮಾಯಣದ ಅಪಮಾನವಾಗಿದೆಯೇ ? ರಾವಣ ಹಾಗೂ ಹನುಮಂತನಿಗೆ ಮುಕುಟ ಹಾಕಿರುವುದನ್ನು ಏಕೆ ತೋರಿಸಿಲ್ಲ ? ರಾವಣನು ಅತ್ಯಂತ ಬುದ್ಧಿವಂತ ಬ್ರಾಹ್ಮಣನಾಗಿದ್ದನು. ನಮ್ಮ ಭಾವನೆಗಳನ್ನು ನೋಯಿಸುವುದನ್ನು ನಿಲ್ಲಿಸಿ, ಎಂದು ಹೇಳಿದನು.

ಸಂಪಾದಕೀಯ ನಿಲುವು

ರಾವಣನ ವೇಷಭೂಷಣವನ್ನು ಮುಸಲ್ಮಾನರಂತೆ ಮಾಡಲಾಗಿದ್ದರೆ ಕೇಂದ್ರೀಯ ಪರಿನಿರೀಕ್ಷಣ ಮಂಡಳಿಯು (‘ಸೆನ್ಸಾರ ಬೋರ್ಡ’) ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟು ಅದರಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು ಚಲನಚಿತ್ರ ನಿರ್ಮಾಪಕರಿಗೆ ಹೇಳವುದು ಅಪೇಕ್ಷಿತವಿತ್ತು !