‘ಆದಿಪುರುಷ’ ಸಿನಿಮಾದಲ್ಲಿ ಶ್ರೀರಾಮನ ಪರಾಕ್ರಮಿ ಸ್ವರೂಪದ ದರ್ಶನವಾಗಲಿದೆ ! – ನಿರ್ದೇಶಕ ಓಂ ರಾವುತ್

ಮುಂಬಯಿ – ಭಗವಾನ್ ಶ್ರೀರಾಮನನ್ನು ಆಧರಿಸಿರುವ ಹೆಚ್ಚಿನ ದೂರದರ್ಶನ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿನ ಕಥೆಗಳು ಶ್ರೀರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಚಿತ್ರಿಸಿವೆ; ಆದರೆ ‘ಆದಿಪುರುಷ’ ಚಲನಚಿತ್ರವು (ಸಿನೆಮಾ) ಭಗವಾನ್ ಶ್ರೀರಾಮನ ಪರಾಕ್ರಮಿ ಸ್ವರೂಪದ ದರ್ಶನ ಮಾಡಿಸಲಿದೆ ಎಂದು ಈ ಚಲನಚಿತ್ರದ ನಿರ್ದೇಶಕರಾದ ಓಂ ರಾವುತ್ ಹೇಳಿದರು.

‘ಆದಿಪುರುಷ’ ಚಲನಚಿತ್ರವನ್ನು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ ತಮಿಳು, ಕನ್ನಡ, ಮಲಯಾಳಂ, ಮರಾಠಿ, ಬೆಂಗಾಲಿ ಮತ್ತು ಒಡಿಯಾ ಈ ಭಾಷೆಗಳಲ್ಲಿಯೂ ಇದನ್ನು ನಿರ್ಮಿಸುವ ಸಿದ್ಧತೆ ನಡೆಯುತ್ತಿದೆ. ಅಷ್ಟೇ ಅಲ್ಲ, ಈ ಚಲನಚಿತ್ರವನ್ನು ಇಂಗ್ಲಿಷ್, ಚೈನೀಸ್, ಕೊರಿಯನ್, ಜಾಪನೀಸ್ ಮತ್ತು ಇತರ ಭಾಷೆಗಳಲ್ಲಿಯೂ ನಿರ್ಮಿಸುವ ಪ್ರಸ್ತಾಪವಿದೆ. ಈ ಚಲನಚಿತ್ರದ ಜಾಹೀರಾತು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಆದಿಪುರುಷ’ ಚಲನಚಿತ್ರವನ್ನು ಅಂದಾಜು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಅದು ಹಿಂದಿ ಚಿತ್ರರಂಗದ ಎಲ್ಲಕ್ಕಿಂತ ದುಬಾರಿ ಚಲನಚಿತ್ರವಾಗಿದೆ.