ಕರೋನಾ ಮಹಾಮಾರಿಯ ಕಾಲದಲ್ಲಿ ಹಿಂದೂ ರೋಗಿಗಳ ಮತಾಂತರದ ಪ್ರಕರಣ
ನವದೆಹಲಿ – ‘ಭಾರತೀಯ ವೈದ್ಯಕೀಯ ಸಂಘ’ದ ಅಂದಿನ ಅಧ್ಯಕ್ಷರಾಗಿದ್ದ ಡಾ. ಜಾನ್ ರೋಸ್ ಆಸ್ಟಿನ್ ಜೈಲಾಲ್ ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಕೊರೋನಾ ಮಹಾಮಾರಿಯ ಕಾಲದಲ್ಲಿ ಹಿಂದೂ ರೋಗಿಗಳನ್ನು ಮತಾಂತರಿಸಿದ್ದಾರೆ ಎಂಬ ಆರೋಪವನ್ನು ಗಮನಿಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗವು ಡಾ. ಜಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ‘ದೆಹಲಿ ವೈದ್ಯಕೀಯ ಮಂಡಳಿ’ ಮತ್ತು ಆರೋಗ್ಯ ಸಚಿವಾಲಯಕ್ಕೆ ಪತ್ರದ ಮೂಲಕ ನಿರ್ದೇಶಿಸಿದೆ.
‘ಕಾನೂನು ಹಕ್ಕುಗಳ ರಕ್ಷಣಾ ವೇದಿಕೆ’ ಡಾ. ರೋಸ್ ಮೇಲೆ ಈ ಮೇಲಿನಂತೆ ಆರೋಪ ಹೊರೆಸಿತ್ತು. ಈ ನಿಟ್ಟಿನಲ್ಲಿ, ‘ಕಾನೂನು ಹಕ್ಕುಗಳ ರಕ್ಷಣಾ ವೇದಿಕೆ’ಯು ೨೫ ಜೂನ್ ೨೦೨೧ ರಂದು ‘ರಾಷ್ಟ್ರೀಯ ವೈದ್ಯಕೀಯ ಆಯೋಗ’ಕ್ಕೆ ಪತ್ರ ಬರೆದು ಡಾ. ರೋಸ್ ಅವರ ವೈದ್ಯಕೀಯ ವೃತ್ತಿಯ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿತ್ತು. ಈ ದೂರನ್ನು ಗಮನಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗದ ‘ನೈತಿಕ ಮತ್ತು ವೈದ್ಯಕೀಯ ನೋಂದಣಿ ಮಂಡಳಿ’ ಸೆಪ್ಟೆಂಬರ್ ೧, ೨೦೨೨ ರಂದು ‘ದೆಹಲಿ ವೈದ್ಯಕೀಯ ಮಂಡಳಿ’ ಮತ್ತು ಆರೋಗ್ಯ ಸಚಿವಾಲಯದ ನಿರ್ದೇಶಕರಿಗೆ ನೋಟಿಸ್ ಕಳುಹಿಸಿತ್ತು.
ಕಳೆದ ವರ್ಷ ಈ ಪ್ರಕರಣವು ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ದೂರುದಾರ ರೋಹಿತ್ ಝಾ ಇವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಡಾ. ರೋಸ್ ಅವರು ಹಿಂದೂ ಧರ್ಮದ ವಿರುದ್ಧ ಪ್ರಚಾರ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳಿಗಿಂತ ಅಲೋಪಥಿ ಔಷಧಿಗಳ ಶ್ರೇಷ್ಠತೆಯನ್ನು ತೋರಿಸುವ ಮೂಲಕ ಅವರು ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಿದ್ದಾರೆ, ಎಂದು ಈ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸಂಪಾದಕೀಯ ನಿಲುವುಇಂತಹ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಹಿಂದೂಗಳು ಧರ್ಮಶಿಕ್ಷಣವನ್ನು ಪಡೆದರೆ, ಅವರಲ್ಲಿ ಧರ್ಮಾಭಿಮಾನವು ನಿರ್ಮಾಣವಾಗುವುದು ಮತ್ತು ನಂತರ ಅವರು ಡಾ. ರೋಸ್ ಅವರಂತಹವರ ಸುಳ್ಳು ಮಾತುಗಳ ವಂಚನೆಗೆ ಎಂದಿಗೂ ಬಲಿಯಾಗಲಾರರು ಹಾಗೂ ಯಾರನ್ನು ಮತಾಂತರ ಮಾಡಲು ಸಾಧ್ಯವಾಗಲಾರದು ! |