ದೇಶದಲ್ಲಿ ‘5G’ ಸೇವೆ ಉದ್ಘಾಟನೆ !

ಮುಂಬಯಿ ಸೇರಿದಂತೆ ೮ ನಗರಗಳಲ್ಲಿ ಸೇವೆ !

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೧ ರಂದು ಭಾರತದಲ್ಲಿ ‘5G’ ಸಂಚಾರವಾಣಿ ಸೇವೆಯನ್ನು ಉದ್ಘಾಟಿಸಿದರು. ದೇಶದಲ್ಲಿ ‘ಜಿಯೋ’ ಮತ್ತು ‘ಎರ್‌ಟೆಲ್’ ಈ ಕಂಪನಿಗಳು ದೇಶದಲ್ಲಿ ಈ ಸೇವೆಯನ್ನು ಪ್ರಾರಂಭಿಸಿವೆ. ಮುಂಬಯಿ ಸೇರಿದಂತೆ ದೇಶದ ೮ ನಗರಗಳಲ್ಲಿ ಈ ಸೇವೆಯು ಮೊದಲು ಲಭ್ಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ‘ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ’ ಇವರು – ‘5G’ ಇದು ‘ಡಿಜಿಟಲ್ ಕಾಮಧೇನು’ ಆಗಿದೆ. ಈ ತಂತ್ರಜ್ಞಾನವು ಭಾರತೀಯರ ಜೀವನಕ್ಕೆ ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ತರಲಿದೆ. ಆದ ಕಾರಣ ಕೈಗೆಟುಕುವ ಬೆಲೆಯಲ್ಲಿ ಸರಿಯಾದ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ. ‘ಜಿಯೊ’ ಮೂಲಕ, ‘5G’ ಸೇವೆಯನ್ನು ಡಿಸೆಂಬರ್ ತನಕ ದೇಶದ ಮೂಲೆ ಮೂಲೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.

‘5G’ಯಿಂದಾಗುವ ಲಾಭಗಳು !

ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುವುದು. ೨ ಜಿಬಿ ಸಾಮರ್ಥ್ಯದ ಫೈಲ್‌ಗಳನ್ನು ೧೦ ರಿಂದ ೨೦ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದು. ಕೃಷಿ ವಲಯದಲ್ಲಿ ಡ್ರೋನ್‌ಗಳ ಬಳಕೆಯ ಮೂಲಕ ತೋಟಗಳ ನಿರ್ವಹಣೆ ಸಾಧ್ಯವಾಗುವುದು. ಮೆಟ್ರೊ ಮತ್ತು ಚಾಲಕ ರಹಿತ ವಾಹನಗಳ ಚಾಲನೆ ಸುಲಭವಾಗುವುದು. ಇದರೊಂದಿಗೆ ಕಾರ್ಖಾನೆಗಳಲ್ಲಿ ‘ರೋಬೋಟ್’ಗಳನ್ನು ಬಳಸುವುದು ಸುಲಭವಾಗುವುದು.