ಪಾಶ್ಚಿಮಾತ್ಯ ದೇಶಗಳು ಭಾರತದಂತಹ ದೇಶವನ್ನು ಲೂಟಿ ಗೈದರು !

ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ

ಮಾಸ್ಕೋ (ರಷ್ಯಾ) – ಪಾಶ್ಚಿಮಾತ್ಯದವರು ಭಾರತದಂತಹ ದೇಶಗಳನ್ನು ಸತ್ಯ, ಸ್ವಾತಂತ್ರ್ಯ ಮತ್ತು ನ್ಯಾಯ ಇದರ ವಿರುದ್ಧ ಹೋಗಿ ಲೂಟಿ ಮಾಡಿದರು. ಪಾಶ್ಚಿಮಾತ್ಯರು ಮಧ್ಯಯುಗದಲ್ಲಿ ಸ್ವಂತದ ವಸಾಹತುಶಾಹಿ ನೀತಿಯನ್ನು ಪ್ರಾರಂಭಿಸಿದರು ಮತ್ತು ನಂತರ ಗುಲಾಮರ ವ್ಯಾಪಾರ, ಅಮೇರಿಕಾದಲ್ಲಿನ ರೆಡ್ ಇಂಡಿಯನ್ ಇವರ ನರಸಂಹಾರ, ಭಾರತ ಮತ್ತು ಆಫ್ರಿಕಾ ಖಂಡದ ದೇಶಗಳನ್ನು ಲೂಟಿ ಹಾಗೂ ಚೀನಾದ ವಿರುದ್ಧ ಯುದ್ಧದಲ್ಲಿ ಸಹಭಾಗಿಯಾದರು. ಪಾಶ್ಚಿಮಾತ್ಯ ದೇಶಗಳು ಉದ್ದೇಶಪೂರ್ವಕವಾಗಿ ಬುಡಕಟ್ಟು ಜನಾಂಗ ಸಂಪೂರ್ಣ ನಷ್ಟ ಮಾಡುತ್ತಿದೆ. ಅವರು ಭೂಮಿ ಮತ್ತು ಉಪಕರಣಗಳಿಗಾಗಿ ಪ್ರಾಣಿಗಳಂತೆ ಜನರ ಬೇಟೆ ಆಡಿದರು. ಈ ರೀತಿಯ ಕಠೋರ ಶಬ್ದಗಳಲ್ಲಿ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ ಇವರು ಪಾಶ್ಚಿಮಾತ್ಯ ದೇಶಗಳನ್ನು ಟೀಕಿಸಿದರು. ರಷ್ಯಾವು ಉಕ್ರೇನಿನ ಡೋನೆಕ್ಸ್ಟ್, ಲೂಹಾನ್ಕ್ಸ, ಖೆರೇಸಾನ್ ಮತ್ತು ಜಪೂರಿಜ್ಜಿಯ ಈ ೪ ಪ್ರದೇಶಗಳಲ್ಲಿ ಅಧಿಕೃತವಾಗಿ ರಷ್ಯಾಗೆ ಜೋಡಿಸಿರುವ ಘೋಷಣೆಯ ಸಮಯದಲ್ಲಿ ಮಾತನಾಡುತ್ತಿದ್ದರು.

ಪುತಿನ ತಮ್ಮ ಮಾತು ಮುಂದುವರೆಸುತ್ತಾ, ಪಾಶ್ಚಿಮಾತ್ಯ ದೇಶ ಯಾವುದೇ ದೇಶದಲ್ಲಿ ಕ್ರಾಂತಿಯನ್ನು ಪ್ರಚೋದಿಸುವುದಕ್ಕೆ ಸಿದ್ದರಿದ್ದಾರೆ. ಸ್ವಂತದ ಉದ್ದೇಶ ಸಾಧಿಸುವುದಕ್ಕಾಗಿ ಅವು ಯಾವುದೇ ದೇಶಕ್ಕೆ ಅಗ್ನಿಯಲ್ಲಿ ತಳ್ಳಲು ಸಿದ್ದರಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಸತ್ಯ ಎಷ್ಟು ಭಾರತೀಯ ನಾಯಕರು ಭಾರತೀಯರ ಮನಸ್ಸಿನ ಮೇಲೆ ಬಿಂಬಿಸಿದ್ದಾರೆ !