೬೭ ಅಶ್ಲೀಲ ಜಾಲತಾಣಗಳನ್ನು ಮುಚ್ಚಲು ಕೇಂದ್ರ ಸರಕಾರದಿಂದ ಆದೇಶ

ನವದೆಹಲಿ – ಅಶ್ಲೀಲತೆಗೆ(ಪೊರ್ನೊಗ್ರಾಫಿ) ಸಂಬಂಧಿಸಿದ ೬೭ ಜಾಲತಾಣಗಳನ್ನು ಮುಚ್ಚುವಂತೆ ಕೇಂದ್ರ ದೂರಸಂಪರ್ಕ ಇಲಾಖೆಯು ಇಂಟರ್‌ನೆಟ್ ಸೇವೆ ಪೂರೈಕೆದಾರರಿಗೆ ಆದೇಶ ನೀಡಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದ ಎರಡು ಉಚ್ಚ ನ್ಯಾಯಲಯಗಳು ನೀಡಿದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು ೬೭ ಜಾಲತಾಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಸಂಪರ್ಕ ಇಲಾಖೆ ಇಂಟರ್‌ನೆಟ್ ಸೇವಾ ಪೂರೈಕೆದಾರರಿಗೆ ನಾಲ್ಕು ಪತ್ರಗಳನ್ನು ಕಳುಹಿಸಿದೆ.

೨೦೧೫ ರಲ್ಲಿಯೂ ಸರಕಾರವು ಇದೇ ರೀತಿಯಲ್ಲಿ ತಾತ್ಕಾಲಿಕವಾಗಿ ೮೮ ಪಾರ್ನ್ ಜಾಲತಾಣಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಈ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಸರಕಾರವು ನಿಷೇಧವನ್ನು ತೆಗೆದುಹಾಕಿ ಮಕ್ಕಳಿಗೆ ಸಂಬಂಧಿಸಿದ ಪಾರ್ನ್ ಜಾಲತಾಣಗಳನ್ನು ಮಾತ್ರ ನಿಷೇಧಿಸಿತ್ತು.