ಮುಸ್ಲಿಂ ಶಿಕ್ಷಕ ಮತ್ತು ವಿದ್ಯಾರ್ಥಿನಿಯರಿಂದ ಹಿಂದೂ ಪ್ರಾಂಶುಪಾಲರ ಮೇಲೆ ಕಿರುಕುಳದ ಆರೋಪ

ಆಗ್ರಾ – ಇಲ್ಲಿಯ ‘ಹ್ಯಾರಿಸ್ ಕನ್ಯಾ ಇಂಟರ್ ಕಾಲೇಜ್’ ನ ಪ್ರಾಂಶುಪಾಲರ ಒಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. ಈ ವಿಡಿಯೋದಲ್ಲಿ ಪ್ರಾಂಶುಪಾಲೆ ಮಾಲಾ ದೀಕ್ಷಿತ್ ಅವರು ಅಳುತ್ತಾ ತಮಗೆ ಮಹಾವಿದ್ಯಾಲಯದ ಮುಸ್ಲಿಂ ಸಮುದಾಯದ ಶಿಕ್ಷಕರ ಮತ್ತು ವಿದ್ಯಾರ್ಥಿನಿಯರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸುತ್ತಿರುವುದನ್ನು ಕಾಣಬಹುದು. ‘ನನ್ನನ್ನು ಪ್ರಾಂಶುಪಾಲ ಹುದ್ದೆಯಿಂದ ತೆಗೆದುಹಾಕಲು ಯತ್ನಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ‘ನಾನು ಮರಳಿ ಹೋಗಲೆಂದು ನನಗೆ ಕಿರುಕುಳ ನೀಡುತ್ತಿದ್ದಾರೆ’, ಎಂದು ಮಾಲಾ ದೀಕ್ಷಿತ್ ಇವರು ಹೇಳಿದ್ದಾರೆ.

ಪ್ರಾಂಶುಪಾಲೆ ಮಾಲಾ ದೀಕ್ಷಿತ ಇವರು, ಮಹಾವಿದ್ಯಾಲಯದ ವಿದ್ಯಾರ್ಥಿನಿಯರನ್ನು ಅವರ ವಿರುದ್ಧ ಪ್ರಚೋದಿಸಲಾಗುತ್ತಿದೆ. ಅವರನ್ನು ಹೆದರಿಸಲು ಎಲ್ಲ ರೀತಿಯ ತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಹಾವಿದ್ಯಾಲಯದ ಹೊರಗೆ ಮುಸ್ಲಿಂ ಹುಡುಗರು ಹೆಚ್ಚಿನ ಸಂಖ್ಯೆಯಲ್ಲಿ ನಿಂತಿರುತ್ತಾರೆ. ಪ್ರತಿದಿನವೂ ತಾನು ಭಯದ ನೆರಳಲ್ಲಿ ಮಹಾವಿದ್ಯಾಲಯಕ್ಕೆ ಬಂದು ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಹಶಿಕ್ಷಣ ನಿರ್ದೇಶಕರಾದ ಆರ್.ಪಿ. ಶರ್ಮಾ ಅವರು, ಸಂಬಂಧಪಟ್ಟ ಪ್ರಾಂಶುಪಾಲರ ವಿರುದ್ಧ ಇಂತಹದ್ದೇನಾದರೂ ನಡೆದಿದ್ದರೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !