ವಿವಾಹಿತ ಮತ್ತು ಅವಿವಾಹಿತ ಇರುವ ಮಹಿಳೆಗೆ ಸುರಕ್ಷಿತ ಗರ್ಭಪಾತದ ಅಧಿಕಾರ !

ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಮಹಿಳೆ ವಿವಾಹಿತವಾಗಿರಲಿ ಅಥವಾ ಅವಿವಾಹಿತವಿರಲಿ, ಆಕೆಯ ಒಪ್ಪಿಗೆಯಿಂದ ಲೈಂಗಿಕ ಸಂಬಂಧ ಪ್ರಸ್ತಾಪಿಸಿದ ನಂತರ ಗರ್ಭಿಣಿಯಾದ ಪ್ರತಿಯೊಬ್ಬ ಮಹಿಳೆಗೆ ಸುರಕ್ಷಿತ ಗರ್ಭಪಾತದ ಅಧಿಕಾರವಿದೆ, ಎಂದು ಸರ್ವೋಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆ ವೇಳೆ ತೀರ್ಪು ನೀಡಿದೆ. ‘ಅವಿವಾಹಿತ ಮಹಿಳಯರಿಗಾಗಿ ಗರ್ಭಪಾತದ ಅಧಿಕಾರದಿಂದ ದೂರ ಇಡುವುದು, ಇದು ಸಂವಿಧಾನದ ವಿರುದ್ಧವಾಗಿದೆ’, ಹೀಗೂ ಸಹ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸರ್ವೋಚ್ಚ ನ್ಯಾಯಾಲಯ ಮಂಡಿಸಿರುವ ಸೂತ್ರಗಳು

೧. ಗರ್ಭಪಾತದ ಕಾನೂನಿನಲ್ಲಿ ೨೦೨೧ ರಲ್ಲಿ ಮಾಡಿರುವ ನಿಬಂಧನೆಯು ‘ವಿವಾಹಿತ ಮತ್ತು ಅವಿವಾಹಿತ ಮಹಿಳೆ ಎಂಬ ಭೇದಭಾವ ಮಾಡಿಲ್ಲ. ಈ ಕಾನೂನಿನಲ್ಲಿ ೩ ಬ (ಕ) ಈ ನಿಬಂಧನೆ ಕೇವಲ ವಿವಾಹಿತ ಮಹಿಳೆಯರಿಗಾಗಿ ಇದ್ದರೇ ಇದರಿಂದ ‘ಕೇವಲ ವಿವಾಹಿತ ಮಹಿಳೆಯರ ಲೈಂಗಿಕ ಸಂಬಂಧದ ಅಧಿಕಾರವಾಗಿದೆ’, ಎಂಬ ಪೂರ್ವಗ್ರಹ ಆಗುವುದು. ಈ ಅಭಿಪ್ರಾಯ ಸಂವಿಧಾನದ ಓರೆಗಲ್ಲಿನ ಮೇಲೆ ನಿಲ್ಲುವುದಿಲ್ಲ.

೨. ಮಹಿಳೆಯರ ಗರ್ಭಪಾತದ ನಿರ್ಣಯ ತೆಗೆದುಕೊಳ್ಳಲು ಪೂರ್ಣ ಸ್ವಾತಂತ್ರ್ಯ ಇರಬೇಕು. ಪುನರುತ್ಪಾದನಾ ಅಧಿಕಾರ ವಿವಾಹಿತ ಮಹಿಳೆಯರ ಜೊತೆಗೆ ಅವಿವಾಹಿತ ಮಹಿಳೆಯರಿಗಿರುವುದು. ‘ಎಂ.ಟಿ.ಪಿ. ಕಾನೂನು’ ೨೦ ರಿಂದ ೨೪ ವಾರಗಳ ಗರ್ಭ ಇರುವ ಮಹಿಳೆಯರಿಗೆ ಗರ್ಭಪಾತದ ಅಧಿಕಾರ ನೀಡಲಾಗಿದೆ; ಆದರೆ ಈ ಅಧಿಕಾರ ಕೇವಲ ವಿವಾಹಿತ ಮಹಿಳೆಯರಿಗೆ ನೀಡಿದೆ ಮತ್ತು ಅವಿವಾಹಿತ ಮಹಿಳೆಯರಿಗೆ ಇದರಿಂದ ದೂರ ಇರಿಸುವುದು, ಇದು ಸಂವಿಧಾನದ ಕಲಂ ೧೪ ರ ಉಲ್ಲಂಘನೆ ಆಗುವುದು.

೩. ಗರ್ಭದ ಅಸ್ತಿತ್ವ ಮಹಿಳೆಯರ ಶರೀರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಗರ್ಭಪಾತದ ಅಧಿಕಾರ ಮಹಿಳೆಯರ ಶರೀರ ಸ್ವಾತಂತ್ರ್ಯದ ಭಾಗವಾಗಿದೆ. ಒಂದು ವೇಳೆ ಸರಕಾರ ಓರ್ವ ಮಹಿಳೆಗೆ ಇಚ್ಛೆ ಇಲ್ಲದಿದ್ದರೂ ಗರ್ಭ ಇರಿಸಲು ಅನಿವಾರ್ಯ ಮಾಡಿದರೆ, ಆಗ ಆ ಮಹಿಳೆಯ ಗೌರವಕ್ಕೆ ಧಕ್ಕೆ ಬರುವುದು.

ದೆಹಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಬದಲಾಯಿಸಿದೆ !

ಒಪ್ಪಿಗೆಯ ಸಂಬಂಧದಿಂದ ಉಳಿದಿರುವ ೨೩ ವಾರಗಳ ಮತ್ತು ೫ ದಿನದ ಗರ್ಭದ ಗರ್ಭಪಾತ ಮಾಡುವ ಅನುಮತಿ ನೀಡುವುದಕ್ಕಾಗಿ ಓರ್ವ ೨೫ ವರ್ಷದ ಅವಿವಾಹಿತ ಯುವತಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಳು. ಈ ಯುವತಿಯ ಜೊತೆಗಾರ ವಿವಾಹ ಮಾಡಿಕೊಂಡು ನಿರಾಕರಿಸಿರುವುದರಿಂದ ಮತ್ತು ಆಕೆ ಮಗುವಿಗೆ ಜನ್ಮ ನೀಡಲು ಇಚ್ಚಿಸಲಿಲ್ಲ. ಈ ಅರ್ಜಿಯ ವಿಚಾರಣೆ ಮಾಡುವಾಗ ದೆಹಲಿ ಉಚ್ಚ ನ್ಯಾಯಾಲಯವು ‘ಗರ್ಭಪಾತದ ಕಾನೂನಿನಲ್ಲಿ ಅವಿವಾಹಿತ ಮಹಿಳೆಗೆ ಅಧಿಕಾರವಿಲ್ಲ’, ಎಂದು ಹೇಳುತ್ತಾ ಮಧ್ಯಂತರ ತೀರ್ಪು ನೀಡಲು ನಿರಾಕರಿಸಿತು. ಅದರ ನಂತರ ಈ ಯುವತಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಳು.(ಒಂದೇ ಸಂವಿಧಾನದ ಕಲಂನ ಆಧಾರದಲ್ಲಿ ಉಚ್ಚ ನ್ಯಾಯಾಲಯ ತೀರ್ಪು ನೀಡುತ್ತದೆ ಮತ್ತು ಅದೇ ಕಲಂನ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ಬದಲಾಯಿಸುತ್ತದೆ, ಇದು ಸಾಮಾನ್ಯ ನಾಗರಿಕರಿಗೆ ತಿಳಿಯುವುದು ಕಷ್ಟ ಸಾಧ್ಯವಾಗಿದೆ ! – ಸಂಪಾದಕರು)