ಟ್ವಿಟ್ಟರ್ ನಿಂದ ‘ಪಿ.ಎಫ್‌.ಐ’ ಸೇರಿದಂತೆ ಅದರ ನಾಯಕರ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿತು

ನವದೆಹಲಿ : ಭಾರತದಲ್ಲಿ ಜಿಹಾದಿ ಸಂಘಟನೆ ’ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (’ಪಿ.ಎಫ್‌.ಐ’) ಮತ್ತು ಅದಕ್ಕೆ ಸಂಬಂಧಿಸಿದ ಇತರ ಎಂಟು ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧಿಸಿದ ನಂತರ, , ಈಗ ಟ್ವಿಟರ್ ’ಪಿ.ಎಫ್‌.ಐ’ನ ಅಧಿಕೃತ ಖಾತೆ ಸೇರಿದಂತೆ ಕೆಲವು ಪದಾಧಿಕಾರಿಗಳ ಟ್ವಿಟರ್ ಖಾತೆಗಳನ್ನು ಸಹ ಮುಚ್ಚಿದೆ. ಇದರಲ್ಲಿ ‘ಪಿ.ಎಫ್‌.ಐ’ನ ಮುಖ್ಯಸ್ಥ ಓಮಾ ಸಲಾಂ ಮತ್ತು ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಇಬ್ಬರೂ ಸೇರಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ. ಕೇಂದ್ರ ಸರಕಾರವು ‘ಪಿ.ಎಫ್‌.ಐ.’ನ ಜಾಲತಾಣಗಳು ಮತ್ತು ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಆದೇಶಿಸಿದೆ.

ಈ ನಿಟ್ಟಿನಲ್ಲಿ ಟ್ವಿಟ್ಟರ್, ’ಟ್ವಿಟರ್ ಖಾತೆಗಳ ಬಗ್ಗೆ ಕಾನೂನು ಕ್ರಮವನ್ನು ಕೋರಿದ ನಂತರ ಭಾರತಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದೆ. ಆದ್ದರಿಂದ ಈ ಎಲ್ಲಾ ಖಾತೆಗಳನ್ನು ಭಾರತದಲ್ಲಿ ಮುಚ್ಚಲಾಗುವುದು.