ಮುಸ್ಲಿಮರಿಗೆ ಗಾರ್ಬಾ ಪೆಂಡಾಲ್ ಪ್ರವೇಶಿಸಲು ಅವಕಾಶ ನೀಡಬಾರದು: ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್

ಎಡಬದಿಗೆ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್

ಭೋಪಾಲ್ – ನವರಾತ್ರಿ ಹಬ್ಬವು ಹಿಂದೂ ಧರ್ಮದ ಅತಿದೊಡ್ಡ ಹಬ್ಬವಾಗಿದೆ. ಒಂಬತ್ತು ದಿನಗಳ ನವರಾತ್ರಿಯು ಸ್ತ್ರೀ ಶಕ್ತಿಯ ಸಂಕೇತವಾಗಿದೆ. ಇದರಲ್ಲಿ ಮುಸ್ಲಿಂ ಜನರ ಕೆಲಸವೇನು? ಗಾರ್ಬಾದಲ್ಲಿ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಷ್ಟೇ ಅಲ್ಲ, ದುರ್ಗಾ ಪೂಜಾ ಪೆಂಡಾಲಗಳ ಸುತ್ತಲೂ ಇರುವ ಅವರ ಅಂಗಡಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಭೋಪಾಲ್ ಲೋಕಸಭಾ ಕ್ಷೇತ್ರದ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಒತ್ತಾಯಿಸಿದರು.

ಗಾರ್ಬಾಗೆ ಬರುವ ಜನರ ಗುರುತಿನ ಚೀಟಿಗಳನ್ನು ನೋಡಬೇಕು. ನಮಗೆ ನಮ್ಮ ಉಪಾಸನೆಯ ಪದ್ದತಿಯನ್ನು ಪರಿಶುದ್ಧವಾಗಿಡಬೇಕು. ನಮ್ಮ ಭಾರತವು ಜಾತ್ಯತೀತ ರಾಷ್ಟ್ರ ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದ್ದರಿಂದ ಜಾತ್ಯತೀತತೆಯ ಪದದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಪೂಜೆ ಮಾಡಲು ಅಧಿಕಾರ ಇದೆ ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಹೇಳಿದರು.