ಕೇರಳ ಉಚ್ಚ ನ್ಯಾಯಾಲಯದಿಂದ ‘ಪಿ.ಎಫ್‌.ಐ.’ಗೆ ೫ ಕೋಟಿ ರೂಪಾಯಿಗಳ ದಂಡ

ಸಪ್ಟೆಂಬರ್‌ ೨೩ರಂದು ಕೇರಳದಲ್ಲಿ ಬಂದ್‌ ಪಾಲಿಸಿ ಹಿಂಸಾಚಾರ ನಡೆಸಿರುವ ಪ್ರಕರಣ

ತಿರುವನಂತಪುರಮ್‌ (ಕೇರಳ) – ತನಿಖಾ ಸಂಸ್ಥೆಯಿಂದ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ ಕಛೇರಿಗಳ ಮೇಲೆ ಸಪ್ಟೆಂಬರ್‌ ೨೨ರಂದು ದಾಳಿ ನಡೆತಿತ್ತು. ಇದನ್ನು ವಿರೋಧಿಸಿ ಸಪ್ಟೆಂಬರ್‌ ೨೩ರಂದು ‘ಬಂದ್‌’ಗೆ ಕರೆ ನೀಡಲಾಗಿತ್ತು. ಈ ಬಂದ್‌ ನ ಸಮಯದಲ್ಲಿ ಹಿಂಸಾಚಾರ ನಡೆಸಲಾಗಿತ್ತು. ಕೇರಳದ ಉಚ್ಚ ನ್ಯಾಯಾಲಯವು ಈ ಘಟನೆಯನ್ನು ಸ್ವತಃ ಪರಿಗಣಿಸಿ ಅದರ ಮೇಲೆ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ ನೇತಾರರಿಗೆ ಬರುವ ೨ ವಾರಗಳಲ್ಲಿ ನಷ್ಟಪರಿಹಾರವೆಂದು ೫ ಕೋಟಿ ರೂಪಾಯಿಗಳನ್ನು ತೆರುವಂತೆ ಆದೇಶಿಸಿದೆ. ನ್ಯಾಯಾಲಯವು, ’ಹಿಂಸಾಚಾರ ಮಾಡಿ ಜನರ ಜೀವನಕ್ಕೆ ಅಪಾಯ ತರಬಾರದು.

ಈ ಕಾರ್ಯಾಚರಣೆಯಿಂದ ಇನ್ನುಮುಂದೆ ಇಂತಹ ಹಿಂಸಾಚಾರವನ್ನು ಮಾಡುವ ಧೈರ್ಯವನ್ನು ಯಾರೂ ತೋರಿಸುವುದಿಲ್ಲ. ಯಾರಾದರೂ ಮಾಡಿದರೆ, ಅವರಿಗೆ ಅದರ ಬೆಲೆ ತೆರಬೇಕಾಗುವುದು. ಸಂವಿಧಾನವು ಜನರಿಗೆ ಪ್ರತಿಭಟನೆ ಮಾಡುವ ಅನುಮತಿಯನ್ನು ನೀಡುತ್ತದೆ, ಆದರೆ ಬಂದ್‌ನ್ನು ಪಾಲಿಸಲು ಆಗುವುದಿಲ್ಲ’ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಕೇವಲ ದಂಡ ಮಾತ್ರವಲ್ಲ, ಸಂಬಂಧಿತರಿಗೆ ಕಠೋರ ಶಿಕ್ಷೆ ನೀಡಿ ಅವರನ್ನು ಜೈಲಿಗೆ ಅಟ್ಟಿರಿ !