‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ದ ಮೇಲೆ ೫ ವರ್ಷಕ್ಕಾಗಿ ನಿಷೇಧ !

ಜಿಹಾದಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಇರುವ ‘ಯು.ಎ.ಪಿ.ಎ’, ಕಾನೂನಿನಡಿಯಲ್ಲಿ ಕ್ರಮ

ನವ ದೆಹಲಿ – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಈ ಕಟ್ಟರವಾದಿ ಜಿಹಾದಿ ಮಾನಸಿಕತೆಯ ಸಂಘಟನೆಯ ಮೇಲೆ ಕೇಂದ್ರ ಸರಕಾರವು ‘ಯು.ಎ.ಪಿ.ಎ.’ (ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ) ಕಾನೂನಿನಡಿಯಲ್ಲಿ ೫ ವರ್ಷಕ್ಕಾಗಿ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಸರಕಾರ ‘ಪಿ.ಎಫ್.ಐ.’ನ ಸಹಕಾರಿ ಸಂಸ್ಥೆ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ ಕೌನ್ಸಿಲ್, ನ್ಯಾಷನಲ್ ಕಾನ್ಫರೆನ್ಸ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಜೇಷನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪೈರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್(ಕೇರಳ), ಈ ೮ ಸಂಸ್ಥೆಗಳ ಮೇಲೆ ಕೂಡ ನಿಷೇಧ ಹೇರಿದೆ. ಸಂದರ್ಭದಲ್ಲಿ ಸರಕಾರ ಸಪ್ಟೆಂಬರ್ ೨೮ ರಂದು ಅಧಿಸೂಚನೆ ಜಾರಿ ಮಾಡಿದೆ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಇತರ ಯಾವುದೇ ಅಂಶಗಳ ವಿರುದ್ಧ ದೇಶವಿರೋಧಿ ಅಥವಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಹಭಾಗಿ ಆಗಿರುವ ಸಾಕ್ಷಿ ದೊರೆತರೆ, ಆಗ ಆ ವ್ಯಕ್ತಿ, ಸಂಸ್ಥೆ ಅಥವಾ ಇತರ ಅಂಶಗಳ ಮೇಲೆ ‘ಯು.ಎ.ಪಿ.ಎ,’ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರಕಾರ ನಿರ್ಬಂಧ ಹೇರಬಹುದು. ಸೆಪ್ಟೆಂಬರ್ ೨೨ ಮತ್ತು ೨೭ ರಂದು ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಹಾಗೂ ರಾಜ್ಯ ಪೊಲೀಸ್ ಇವರು ಪಿ.ಎಫ್.ಐ. ಮತ್ತು ಇದರ ಜೊತೆಗೆ ಹೊಂದಿರುವ ಸಂಘಟನೆಗಳ ಮೇಲೆ ದಾಳಿ ನಡೆಸಿದ್ದರು. ಇದರ ಮೊದಲ ದಾಳಿಯಲ್ಲಿ ೧೦೬ ಹಾಗೂ ಸೆಪ್ಟೆಂಬರ್ ೨೭ ರ ದಾಳಿಯಲ್ಲಿ ‘ಪಿ.ಎಫ್.ಐ.’ನ ೨೫೦ ಜನರನ್ನು ಬಂಧಿಸಲಾಗಿತ್ತು. ಈ ದಾಳಿಯಲ್ಲಿ ‘ಪಿ.ಎಫ್.ಐ.’ನ ವಿರುದ್ಧ ಸಾಕಷ್ಟು ಸಾಕ್ಷಿಗಳು ದೊರೆತಿದ್ದವು. ಅದರ ನಂತರ ನಿಷೇಧದ ಕ್ರಮ ಕೈಗೊಳ್ಳಲಾಯಿತು.

ಜಿಹಾದಿ ಭಯೋತ್ಪಾದಕ ಸಂಘಟನೆಯೊಂದಿಗೆ ‘ಪಿ.ಎಫ್.ಐ.’ನಂಟು !

‘ಪಿ.ಎಫ್.ಐ.’ದ ಸ್ಥಾಪನೆ ಮಾಡಿರುವ ಕೆಲವು ಸದಸ್ಯರು ‘ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ, ಅಂದರೆ ‘ಸಿಮೀ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಸದಸ್ಯರಿರುವುದರ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಈ ಸಂಘಟನೆಯ ‘ಜಮಾತ್-ಉಲ್-ಮುಂಜಾಹಿದ್ದಿನ್ ಬಾಂಗ್ಲಾದೇಶ’ ( ಜೇ.ಎಂ.ಬಿ.) ಈ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಹೊಂದಿರುವ ಮಾಹಿತಿ ಸಹ ಬೆಳಕಿಗೆ ಬಂದಿದೆ. ಈ ಎರಡು ಸಂಘಟನೆಗಳ ಮೇಲೆ ನಿಷೇದ ಹೇರಿದೆ.

ಕೇಂದ್ರ ಸರಕಾರದಿಂದ ನಿಷೇಧ ಹೇರಲು ಕಾರಣಗಳು !

೧. ಪಿ.ಎಫ್.ಐ. ಮತ್ತು ಅದರ ಜೊತೆಗೆ ಸಂಬಂಧಿತ ಸಂಘಟನೆಗಳು ದೇಶದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದವು. ಅವುಗಳು ಕಾನೂನ ಬಾಹಿರ ಚಟುವಟಿಕೆಗಳು ನಡೆಸುತ್ತಿದ್ದವು. ಈ ಚಟುವಟಿಕೆಗಳು ದೇಶದ ಭದ್ರತೆ ಮತ್ತು ಅಖಂಡತೆಗೆ ಅಪಾಯಕಾರಿ ಆಗಿವೆ.

೨. ಈ ಸಂಘಟನೆಗಳ ಚಟುವಟಿಕೆ ದೇಶದ ಶಾಂತಿ ಮತ್ತು ಧಾರ್ಮಿಕ ಸೌಹಾರ್ದತೆಗೆ ಅಪಾಯವನ್ನುಂಟುಮಾಡಬಹುದು.

೩. ‘ಪಿ.ಎಫ್.ಐ.’ನ ಕೆಲವು ಸಂಸ್ಥಾಪಕ ಸದಸ್ಯರು ಸಿಮಿಯ ಮುಖಂಡರಾಗಿದ್ದರು. ಅವರು ಜಮಾತೆ-ಉಲ್-ಮುಜಾಹಿದಿನ ಬಾಂಗ್ಲಾದೇಶದ ಜೊತೆಗೆ ಸಂಬಂಧ ಹೊಂದಿದ್ದರು. ಈ ಎರಡು ನಿಷೇಧಿತ ಸಂಘಟನೆಗಳಾಗಿವೆ.

೪. ಇಂತಹ ಅನೇಕ ಸಂಘಟನೆಗಳು ಇವೆ ಅದರಿಂದ, ‘ಪಿ.ಎಫ್.ಐ.’ನ ಸಂಬಂಧ ಇಸ್ಲಾಮಿಕ್ ಸ್ಟೇಟ್ ಈ ಭಯೋತ್ಪಾದಕ ಸಂಘಟನೆಯ ಜೊತೆ ಇದೆ. ‘ಪಿ.ಎಫ್.ಐ.’ನ ಕೆಲವು ಸದಸ್ಯರು ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಸಹಭಾಗಿದ್ದಾರೆ. ಈ ಸಂಘಟನೆ ಗೌಪ್ಯವಾಗಿ ‘ದೇಶದ ಒಂದು ಜನಾಂಗದಲ್ಲಿ ‘ದೇಶದಲ್ಲಿ ಆಸುರಕ್ಷಿತತೆ ಇದೆ’, ಎಂಬ ಭಾವನೆ ನಿರ್ಮಾಣ ಮಾಡುತ್ತಿದ್ದರು ಹಾಗೂ ಇದರಿಂದ ಅವರು ಕಟ್ಟರವಾದಕ್ಕೆ ಪ್ರೋತ್ಸಾಹ ನೀಡುತ್ತಿದ್ದರು ಎಂಬುದು ಸ್ಪಷ್ಟವಾಯಿತು.

೫. ಈ ಸಂಘಟನೆಯಿಂದ ದೇಶದಲ್ಲಿನ ಸಾಂವಿಧಾನಿಕ ಅಧಿಕಾರದ ಅವಮಾನ ಮಾಡಿರುವ ಅಪರಾಧಿ ಮತ್ತು ಭಯೋತ್ಪಾದನೆಯ ಪ್ರಕರಣಗಳಿಂದ ಸ್ಪಷ್ಟವಾಗುತ್ತದೆ. ಹೊರಗಿನಿಂದ ದೊರೆಯುವ ನಿಧಿ ಮತ್ತು ವೈಚಾರಿಕ ಬೆಂಬಲದಿಂದ ದೇಶದಲ್ಲಿನ ಆಂತರಿಕ ಭದ್ರತೆಗೆ ದೊಡ್ಡ ಅಪಾಯ ನಿರ್ಮಾಣವಾಗಿದೆ.

೬. ‘ಪಿ.ಎಫ್.ಐ.’ ತನ್ನ ಸಹಾಯಕ ಸಂಘಟನೆ ಮತ್ತು ಗುಂಪುಗಳನ್ನು ಸಿದ್ಧಗೊಳಿಸಿದೆ. ಅದರ ಉದ್ದೇಶ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವ), ನ್ಯಾಯವಾದಿಗಳು ಮತ್ತು ಸಮಾಜದಲ್ಲಿನ ದುರ್ಬಲ ಅಂಶದವರೆಗೆ ತಲುಪುವುದಾಗಿತ್ತು. ಇದರ ಹಿಂದೆ ‘ಪಿ.ಎಫ್.ಐ.’ನ ಏಕೈಕ ಉದ್ದೇಶ ಅದು ‘ಸ್ವಂತದ ಸದಸ್ಯತ್ವ, ಪ್ರಭಾವ ಮತ್ತು ನಿಧಿ ಸಂಗ್ರಹದ ಕ್ಷಮತೆ ಹೆಚ್ಚಿಸುವುದಾಗಿತ್ತು’, ಎಂದು ಇತ್ತು.

‘ಪಿ.ಎಫ್.ಐ.’ನ ಇತಿಹಾಸ

೧. ೨೦೦೬ ರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಅಂದರೆ ‘ಪಿ.ಎಫ್.ಐ.’ನ ಸ್ಥಾಪನೆ ಮಾಡಲಾಯಿತು. ಕೇರಳದಲ್ಲಿನ ‘ನ್ಯಾಷನಲ್ ಡೆವಲಪ್ಮೆಂಟ್ ಫಂಡ್’ ಈ ಸಂಸ್ಥೆ ಇದರ ಉತ್ತರಾಧಿಕಾರಿ ಸಂಘಟನೆಯಾಗಿದೆ. ೧೯೯೪ ರಲ್ಲಿ ಕೇರಳದಲ್ಲಿನ ಮುಸಲ್ಮಾನರು ‘ನ್ಯಾಷನಲ್ ಡೆವಲಪ್ಮೆಂಟ್ ಫಂಡ್’, ಅಂದರೆ ‘ಏನ್.ಡಿ.ಎಫ್’ಅನ್ನು ಸ್ಥಾಪನೆ ಮಾಡಿದರು. ನಿಧಾನವಾಗಿ ಕೇರಳದಲ್ಲಿ ಈ ಸಂಘಟನೆಯ ಜನಪ್ರಿಯತೆ ಹೆಚ್ಚಾಯಿತು. ಕೇರಳ ಬಿಟ್ಟು ಕರ್ನಾಟಕದಲ್ಲಿ ‘ಕರ್ನಾಟಕ ಫೋರಂ ಫಾರ್ ಡಿಗ್ನೇಟಿ’, ಎಂದರೆ ‘ಕೆ.ಎಫ್.ಡಿ.’ ಮತ್ತು ತಮಿಳುನಾಡಿನಲ್ಲಿ ‘ಮನಿಥಾ ನೀತಿ ಪಸಾರಾಯಿ’, ಎಂದರೆ ‘ಎಂ.ಎನ್.ಪಿ.’ ಹೆಸರಿನ ಸಂಘಟನೆ ಸ್ಥಾಪನೆಯಾಯಿತು. ೨೦೦೬ ರಲ್ಲಿ ಈ ಮೂರು ಸಂಘಟನೆಗಳ ಒಂದು ಸಭೆ ನಡೆಯಿತು ಮತ್ತು ಅವರು ‘ಎನ್.ಡಿ.ಎಫ್.’ ನಲ್ಲಿ ವಿಲೀನಗೊಳಿಸಿ ‘ಪಿ.ಎಫ್.ಐ.’ ನ ಸ್ಥಾಪನೆ ಮಾಡಿದರು.

೨. ಫೆಬ್ರುವರಿ ೧೭, ೨೦೦೯ ರಲ್ಲಿ ಒಂದು ರಾಷ್ಟ್ರೀಯ ರಾಜಕೀಯ ಪರಿಷತ್ ನಡೆಸಲಾಯಿತು. ಅದರಲ್ಲಿ ೮ ರಾಜ್ಯದಲ್ಲಿನ ವಿವಿಧ ಸಾಮಾಜಿಕ ಸಂಘಟನೆಗಳು ‘ಪಿ.ಎಫ್.ಐ’ ನಲ್ಲಿ ವಿಲೀನವಾದವು. ಇದರಲ್ಲಿ ಗೋವಾದಲ್ಲಿನ ‘ಗೋವಾ ಸಿಟಿಜನ್ ಫೋರಂ’, ರಾಜಸ್ಥಾನದಲ್ಲಿನ ‘ಕಮ್ಯುನಿಸ್ಟ್ ಸೋಶಿಯಲ್ ಅಂಡ್ ಎಜುಕೇಶನಲ್ ಸೊಸೈಟಿ’, ಬಂಗಾಲದಲ್ಲಿನ ‘ನಾಗರಿಕ ಅಧಿಕಾರಿ ಸುರಕ್ಷಾ ಸಮಿತಿ’, ಮಣಿಪುರದಲ್ಲಿನ ‘ಲಿಯೊಂಗ್ ಸೋಶಿಯಲ್ ಫೋರಂ’ ಮತ್ತು ಆಂಧ್ರಪ್ರದೇಶದಲ್ಲಿನ ‘ಅಸೋಸಿಯೇಷನ್ ಸ್ಪೆಷಲ್ ಜಸ್ಟಿಸ್’ ಈ ಸಂಘಟನೆಗಳು ಒಗ್ಗೂಡಿದವು.

೩. ೨೦೧೨ ರಲ್ಲಿ ಕೇರಳದ ಕೊಜಿಕೊಡ್‌ನಲ್ಲಿನ ಮರಾಡ ಹತ್ಯೆಯಲ್ಲಿನ ೮ ಹಿಂದೂಗಳ ಹತ್ಯೆಯ ಆರೋಪದಡಿಯಲ್ಲಿ ‘ಪಿ.ಎಫ್.ಐ’ನ ಸದಸ್ಯರನ್ನು ಬಂಧಿಸಲಾಯಿತು.

೪. ೨೦೧೨ ರಲ್ಲಿ ಕೇರಳ ಸರಕಾರ ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಪ್ರಸ್ತುತಪಡಿಸಿ ೨೭ ಜನರ ಹತ್ಯೆಗಳಲ್ಲಿ ‘ಪಿ.ಎಫ್.ಐ’ನ ಸಕ್ರಿಯ ಸಹ ಭಾಗ ಇರುವುದು ಹೇಳಲಾಯಿತು. ಇದರಲ್ಲಿ ಹೆಚ್ಚಿನ ಹತ್ಯೆಗಳು ಮಾರ್ಕ್ಸವಾದಿ ಕಮ್ಯುನಿಸ್ಟ್ ಪಾರ್ಟಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದರು.

೫. ೨೦೧೪ ರಲ್ಲಿ ಕೇರಳ ಸರಕಾರ ಮತ್ತೊಮ್ಮೆ ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಿ, ೨೭ ಹತ್ಯೆ, ೮೬ ಹತ್ಯೆಯ ಪ್ರಯತ್ನ ಮತ್ತು ೧೦೬ ಧಾರ್ಮಿಕ ಹಿಂಸಾಚಾರದ ಘಟನೆಗಳಲ್ಲಿ ‘ಪಿ.ಎಫ್.ಐ’ನ ಸಹಭಾಗ ಇತ್ತು ಎಂದು ಹೇಳಿತು.

೬. ೨೦೧೦ ರಲ್ಲಿ ‘ಪಿ.ಎಫ್.ಐ’ ಮೇಲೆ ಸಿಮಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧವಿರುವ ಆರೋಪ ಮಾಡಲಾಯಿತು. ‘ಪಿ.ಎಫ್.ಐ’ನ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಇವನು ಸಿಮಿಯ ರಾಷ್ಟ್ರೀಯ ಸಚಿವನಾಗಿದ್ದನು ಹಾಗೂ ಸಂಘಟನೆಯ ರಾಜ್ಯ ಸಚಿವ ಅಬ್ದುಲ್ ಹಮೀದ್ ಇವನು ಸಿಮಿಯ ಮಾಜಿ ರಾಜ್ಯ ಸಚಿವನಾಗಿದ್ದನು. ಸಿಮಿಯ ಅನೇಕ ಮುಖಂಡರು ‘ಪಿ.ಎಫ್.ಐ’ನ ಹುದ್ದೆಯಲ್ಲಿರುವುದು ಕಂಡು ಬಂದಿತ್ತು.

೭. ೨೦೧೩ ರಲ್ಲಿ ಕೇರಳ ಪೊಲೀಸರು ಕನ್ನೂರಿನ ನರಥದಲ್ಲಿ ಒಂದು ಪ್ರಶಿಕ್ಷಣ ಶಿಬಿರದ ಮೇಲೆ ದಾಳಿ ನಡೆಸಿ ‘ಪಿ.ಎಫ್.ಐ’ನ ೨೧ ಕಾರ್ಯಕರ್ತರನ್ನು ಬಂಧಿಸಿತ್ತು. ಆ ಸಮಯದಲ್ಲಿ ಪೊಲೀಸರು ೨ ನಾಡಬಾಂಬ್, ಖಡ್ಗ ಮತ್ತು ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

೮. ಕೇರಳದಲ್ಲಿನ ಪ್ರಾಧ್ಯಾಪಕ ಟಿ.ಜೆ. ಜೋಸೆಫ ಇವರ ಕೈ ಕತ್ತರಿಸುವ ಪ್ರಕರಣದಲ್ಲಿ ಕೇರಳ ಪೊಲೀಸರು ಜನವರಿ ೨೦೧೧ ರಲ್ಲಿ ‘ಪಿ.ಎಫ್.ಐ’ನ ೨೭ ಸದಸ್ಯರ ವಿರೋಧದಲ್ಲಿ ಆರೋಪ ಪತ್ರ ದಾಖಲಿಸಿದ್ದರು. ಜೋಸೆಫ ಇವರು ಪೈಗಂಬರನನ್ನು ತಥಾ ಕಥಿತ ಅವಮಾನ ಮಾಡಿರುವು ಆರೋಪದಿಂದ ದಾಳಿ ನಡೆಸಲಾಗಿತ್ತು.

೯. ೨೦೧೫ ರಲ್ಲಿ ‘ಪಿ.ಎಫ್.ಐ’ ಕರ್ನಾಟಕದ ಶಿವಮೊಗ್ಗದಲ್ಲಿ ಒಂದು ಆಂದೋಲನ ನಡೆಸಿತು. ಆ ಸಮಯದಲ್ಲಿ ಕೆಲವು ವಾಹನಗಳ ಮೇಲೆ ಕಲ್ಲುತೂರಾಟ ನಡೆದಿತ್ತು ಹಾಗೂ ‘ಪಿ.ಎಫ್.ಐ’ನ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಹೋಗುವ ೩ ಜನರನ್ನು ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಹಿಂಸಾಚಾರದ ಪ್ರಕರಣದಲ್ಲಿ ಒಟ್ಟು ೫೬ ಜನರನ್ನು ಬಂಧಿಸಲಾಗಿತ್ತು.