ಸಂಭಲ (ಉತ್ತರ ಪ್ರದೇಶ) ನಲ್ಲಿ ದೇವತೆಗಳ ಚಿತ್ರಗಳನ್ನು ಹರಿದು ಸುಟ್ಟುಹಾಕಿದ ಪ್ರಕರಣದಲ್ಲಿ ೨ ಕ್ರೈಸ್ತ ನನ್‌ಗಳ ಬಂಧನ

ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ !

ಸಂಭಲ (ಉತ್ತರ ಪ್ರದೇಶ) – ಇಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸಿದ ಇಬ್ಬರು ನನ್‌ಗಳನ್ನು ಬಂಧಿಸಲಾಗಿದೆ. ಅವರ ಮೇಲೆ ದೇವತೆಗಳ ಚಿತ್ರಗಳನ್ನು ಹರಿದು ಸುಟ್ಟುಹಾಕಿದ ಆರೋಪವಿದೆ. ಅವರಿಬ್ಬರೂ ಕ್ರೈಸ್ತ ಮಿಷನರಿಗಳೊಂದಿಗೆ ಸಂಬಂಧವಿದೆ. ಅವರು ಮಿಷನರಿಗಳು ನಡೆಸುತ್ತಿದ್ದ ಸ್ಥಳೀಯ ಶಾಲೆ ಸಿ.ಡಿ.ಎಂ. ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ ೨೧ ರಂದು ಸಿರಸಾನಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ತಲುಪಿದ್ದರು.

ಸಂಪಾದಕೀಯ ನಿಲುವು

ದೇಶದಲ್ಲಿ ಆದಷ್ಟು ಬೇಗ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ !