’ಪಿ.ಎಫ್ .ಐ.’ಮೇಲಿನ ನಿಷೇಧಕ್ಕೆ ಸೂಫಿ ಮತ್ತು ಬರೆಲವಿ ಮೌಲವಿಗಳಿಂದ ಸ್ವಾಗತ

ರಾಷ್ಟ್ರಕ್ಕಿಂತಲೂ ಸಂಸ್ಥೆ ಮತ್ತು ವಿಚಾರ ದೊಡ್ಡದಲ್ಲ !

(ಮೌಲವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕರು )

ನವದೆಹಲಿ – ’ಪಿ.ಎಫ್.ಐ.’ ಮೇಲೆ ನಿಷೇಧ ಹೇರಿದ ನಂತರ ವಿರೋಧಿ ಪಕ್ಷದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿಷೇಧ ಹೇರಲು ಒತ್ತಾಯಿಸಲಾಗುತ್ತಿರುವಾಗ ಇನ್ನೊಂದು ಕಡೆಗೆ ಮುಸಲ್ಮಾನರ ಕೆಲವು ಸಂಘಟನೆಗಳಿಂದ ನಿಷೇಧವನ್ನು ಸ್ವಾಗತಿಸಲಾಗಿದೆ. ಸೂಫಿ ಮತ್ತು ಬರೆಲವಿ ಮೌಲವಿಗಳಿಂದ ನಿಷೇಧವನ್ನು ಸ್ವಾಗತಿಸಲಾಗಿದೆ.

೧. ’ಅಖಿಲ ಭಾರತೀಯ ಸೂಫಿ ಸಜ್ಜಾದಾನಶಿನ ಪರಿಷತ್ತಿನ ’ ಅಧ್ಯಕ್ಷರ ಪ್ರಕಾರ, ಭಯೋತ್ಪಾದನೆಯ ಮೇಲೆ ಏನಾದರೂ ಅಂಕುಶ ಇಡುವುದಕ್ಕಾಗಿ ಈ ಕಾರ್ಯಾಚರಣೆ ಮಾಡಲಾಗಿದೆ ಎಂದಾದರೆ ಎಲ್ಲರೂ ಸಂಯಮದಿಂದ ಇರಬೇಕು ಮತ್ತು ಸರಕಾರ ಇಟ್ಟಿರುವ ಹೆಜ್ಜೆಯನ್ನು ಸ್ವಾಗತಿಸಬೇಕು. ಯಾವುದೇ ಸಂಸ್ಥೆ ಅಥವಾ ವಿಚಾರ ಇದಕ್ಕಿಂತಲೂ ರಾಷ್ಟ್ರವು ದೊಡ್ಡದಾಗಿದೆ. ಯಾರಾದರೂ ದೇಶವನ್ನು ತುಂಡಾಗಿಸುವ ವಿಷಯ ಯೋಚಿಸುತ್ತಿದ್ದರೆ ಆಗ ಅವರಿಗೆ ಇಲ್ಲಿ ಇರುವ ಅಧಿಕಾರವಿಲ್ಲ. ಅಖಿಲ ಭಾರತೀಯ ಸೂಫಿ ಸಜ್ಜಾದಾನಶಿನ ಪರಿಷತ್ತು ಯಾವಾಗಲೂ ದೇಶದ ಒಗ್ಗಟ್ಟು, ಸಾರ್ವಭೌಮತ್ವ ಮತ್ತು ಶಾಂತಿಗಾಗಿ ಕಟ್ಟಿಬದ್ಧವಾಗಿದೆ. ನಮ್ಮ ಪರಿಷತ್ತು ಇನ್ನು ಮುಂದೆಯೂ ದೇಶ ವಿರೋಧಿ ಶಕ್ತಿಗಳ ವಿರುದ್ಧ ಧ್ವನಿ ಎತ್ತುವುದು, ಎಂದು ಹೇಳಿದರು.

೨. ಆಲ್ ಇಂಡಿಯಾ ಮುಸ್ಲಿಂ ಜಮಾತಿನಿಂದ ಕೂಡ ಪಿ .ಎಫ್ .ಐ. ಮೇಲಿನ ನಿಷೇಧವನ್ನು ಸ್ವಾಗತಿಸಲಾಗಿದೆ. ಈ ಹಿಂದೆ ಈ ಸಂಘಟನೆಯಿಂದ ’ಪಿ.ಎಫ್.ಐ.’ ಮೇಲೆ ನಿಷೇಧ ಹೇರಲು ಒತ್ತಾಯಿಸಲಾಗಿತ್ತು.