ಬಂದ್ ವೇಳೆಯಲ್ಲಿ ’ಪಿಎಫ್‌ಐ’ಯು ಬಸ್ಸುಗಳನ್ನು ಧ್ವಂಸಗೊಳಿಸಿದ ಪ್ರಕರಣ
ತಿರುವನಂತಪುರಂ (ಕೇರಳ) – ಸೆಪ್ಟೆಂಬರ್ ೨೩ ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ವು ಕರೆ ಕೊಟ್ಟಿದ್ದ ಬಂದ್ ನ ಸಮಯದಲ್ಲಿ ಹಲವಾರು ಬಸ್ಸುಗಳನ್ನು ಧ್ವಂಸಗೊಳಿಸಿತ್ತು. ಈ ಹಿಂಸಾಚಾರದಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ೫ ಕೋಟಿ ರೂಪಾಯಿ ನಷ್ಟವಾಗಿದೆ. ಪಿಎಫ್‌ಐ ಈ ಪರಿಹಾರವನ್ನು ನೀಡಬೇಕೆಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇರಳ ಹೈಕೋರ್ಟನಲ್ಲಿ ಅರ್ಜಿ ಸಲ್ಲಿಸಿದೆ.
Kerala: KSRTC seeks compensation of Rs 5.06 crores from PFI for damaging buses, says 71 damaged buses won’t resume services soonhttps://t.co/hTvorfa94o
— OpIndia.com (@OpIndia_com) September 28, 2022
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ದೇಶಾದ್ಯಂತ ’ಪಿಎಫ್‌ಐ’ನ ಸ್ಥಳಗಳ ಮೇಲೆ ದಾಳಿ ನಡೆಸಿ ಅದರ ಮುಖಂಡರನ್ನು ಬಂಧಿಸಿತ್ತು. ಈ ಬಂಧನವನ್ನು ವಿರೋಧಿಸಿ ಪಿಎಫ್‌ಐ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿತ್ತು. ಈ ಸಮಯದಲ್ಲಿ ’ಪಿಎಫ್‌ಐ’ ಕಾರ್ಯಕರ್ತರು ನಡೆಸಿದ ಹಿಂಸಾಚಾರದಲ್ಲಿ ಬಸ್ಸುಗಳು ಹಾಗೂ ಇತರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಈ ಪ್ರಕರಣದಲ್ಲಿ ವಕೀಲ ದೀಪು ಟಂಕನ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಯಾವುದೇ ಮುನ್ಸೂಚನೆ ನೀಡದೆ ಬಂದ್‌ಗೆ ಕರೆ ನೀಡಲಾಗಿತ್ತು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೇಳಿದೆ. ಇಂತಹ ಬಂದ್ ಗೆ ಕರೆ ನೀಡಿರುವುದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ.