(ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ (CDS), ಅಂದರೆ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥ)
ನವದೆಹಲಿ – ಕೇಂದ್ರ ಸರಕಾರವು ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೂತನ ಸಿ.ಡಿ.ಎಸ್. ಆಗಿ ನೇಮಿಸಿದೆ. ಅವರು ಪ್ರಸ್ತುತ ಉಪರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಉತ್ತರಾಖಂಡದವರಾದ ಚೌಹಾಣ್ ಅವರು ’ಗೂರ್ಖಾ ರೈಫಲ್ಸ್’ನಲ್ಲಿ ಅಧಿಕಾರಿಯಾಗಿದ್ದರು. ಚೌಹಾಣ್ ಅವರು ಸಿ.ಡಿ.ಎಸ್. ಆಗಿರುವುದರ ಜೊತೆಯಲ್ಲಿ ಸೇನೆಯ ವಿವಿಧ ಇಲಾಖೆಗಳ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಇದೇ ವರ್ಷ ಪ್ರಥಮ ಸಿ.ಡಿ.ಎಸ್. ಬಿಪಿನ್ ರಾವತ್ ಅವರ ಆಕಸ್ಮಿಕ ನಿಧನದ ನಂತರ ಈ ಹುದ್ದೆಯು ತೆರವಾಗಿತ್ತು.
लेफ्टिनेंट जनरल अनिल चौहान होंगे नए CDS, बिपित रावत के निधन के बाद से खाली पड़ी थी पोस्ट #NewCDSofIndia #AnilChauhan #cdsAnilchauhan https://t.co/3V1eG70oDA
— First India News (@1stIndiaNews) September 28, 2022