ಮಧುರೈ (ತಮಿಳುನಾಡು)ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡನ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆತ !

ಪಿ.ಎಫ್.ಐ. ಮೇಲಿನ ದಾಳಿಯ ನಂತರ ಸಂಘ ಮತ್ತು ಭಾಜಪದ ಮುಖಂಡರ ಮನೆಯ ಮೇಲಿನ ದಾಳಿಗಳು ಹೆಚ್ಚುತ್ತಿದೆ !

ಮಧುರೈ (ತಮಿಳುನಾಡು) – ಇಲ್ಲಿಯ ಪಟ್ಟಾನಾಡಿ ಪ್ರದೇಶದಲ್ಲಿ ಸೆಪ್ಟೆಂಬರ್ ೨೪ ರಂದು ಸಂಜೆ ಅಪರಿಚಿತರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಕೃಷ್ಣನ್ ಇವರ ಮನೆಯ ಮೇಲೆ ೩ ಪೆಟ್ರೋಲ್ ಬಾಂಬ್‌ಗಳು ಎಸೆಯಲಾಯಿತು; ಈ ಘಟನೆಯಿಂದ ಯಾವುದೇ ಜೀವ ಹಾನಿ ಆಗಲಿಲ್ಲ. ಪೆಟ್ರೋಲ್ ಬಾಂಬ್ ಎಸೆದ ನಂತರ ಪರಾರಿ ಆಗಿದ್ದಾನೆ. ರಾಜ್ಯದಲ್ಲಿ ಸಂಘದ ಸದಸ್ಯರನ್ನು ಗುರಿ ಮಾಡಲಾಗುತ್ತಿದೆ. ಒಂದೇ ದಿನದಲ್ಲಿ ಇದು ಎರಡನೆಯ ಘಟನೆಯಾಗಿದೆ. ಈ ಮೊದಲು ಚೆನ್ನೈ ಹತ್ತಿರದ ತಾಂಬರಮ್‌ನ ಸಂಘದ ಮುಖಂಡರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು.

ತಮಿಳುನಾಡಿನಲ್ಲಿನ ಕುನಿಯಾಮುಥೂರ ನಗರದಲ್ಲಿನ ಭಾಜಪಾದ ಕಾರ್ಯಕರ್ತ ಸರಥ ಇವರ ಮನೆಯ ಮೇಲೆ ಸೆಪ್ಟೆಂಬರ್ ೨೩ ರಂದು ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಇದರಲ್ಲಿ ಒಂದು ಚತುಶ್ಚಕ್ರ ವಾಹನ ಹಾನಿಯಾಗಿತ್ತು. ಅದರ ಮೊದಲು ಒಂದು ದಿನ ಮೊದಲು ಭಾಜಪಾದ ಕಾರ್ಯಾಲಯದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.ನ) ಸ್ಥಳಗಳ ಮೇಲೆ ದಾಳಿಗಳು ನಡೆದ ನಂತರ ಪೆಟ್ರೋಲ್ ಬಾಂಬ್ ಎಸೆಯುವ ಘಟನೆಗಳು ಹೆಚ್ಚಾಗಿವೆ. ತಮಿಳುನಾಡು ಅಷ್ಟೇ ಅಲ್ಲದೆ ಕೇರಳದಲ್ಲಿಯೂ ಸಹ ಭಾಜಪ ನಾಯಕರನ್ನು ಗುರಿ ಮಾಡಲಾಗುತ್ತಿದೆ.