ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಇವರ ಹೆಸರು ನೀಡಲಾಗುವುದು ! – ಪ್ರಧಾನಿ ಮೋದಿ ಇವರ ಘೋಷಣೆ

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಇವರು ತಮ್ಮ ಆಕಾಶವಾಣಿಯಲ್ಲಿನ ‘ಮನ ಕೀ ಬಾತ್’ ಈ ತಿಂಗಳ ಕಾರ್ಯಕ್ರಮದಲ್ಲಿ ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತಸಿಂಗ್ ಇವರ ಹೆಸರು ನೀಡಲಾಗುವುದೆಂದು ಘೋಷಿಸಿದರು. ಭಗತಸಿಂಗ್ ಇವರ ಜಯಂತಿಯ ಪ್ರಯುಕ್ತ ಅವರಿಗೆ ಗೌರವ ನೀಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ ೨೮ ಅವರ ಜಯಂತಿ ಆಚರಿಸಲಾಗುವುದು.